ರಾಜ್ಯದಲ್ಲಿ ತಯಾರಾದ ಉತ್ಪನ್ನಕ್ಕೆ ಕನ್ನಡ ಹೆಸರು: ಸಿಎಂ ಸಿದ್ದರಾಮಯ್ಯ

By Kannadaprabha News  |  First Published Nov 2, 2024, 12:02 PM IST

ರಾಜ್ಯದ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಉತ್ಪಾದನೆಯಾಗುವ ಎಲ್ಲಾ ಉತ್ಪನ್ನಗಳ ಮೇಲೆ ಕನ್ನಡದಲ್ಲಿಯೂ ಹೆಸರು ಬರೆಯುವುದನ್ನು ಕಡ್ಡಾಯ ಮಾಡುವುದಾಗಿ ಮುಖ್ಯಮಂತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. 


ಬೆಂಗಳೂರು (ನ.02): ರಾಜ್ಯದ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಉತ್ಪಾದನೆಯಾಗುವ ಎಲ್ಲಾ ಉತ್ಪನ್ನಗಳ ಮೇಲೆ ಕನ್ನಡದಲ್ಲಿಯೂ ಹೆಸರು ಬರೆಯುವುದನ್ನು ಕಡ್ಡಾಯ ಮಾಡುವುದಾಗಿ ಮುಖ್ಯಮಂತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿಧಾನಸೌಧದ ಮುಖ್ಯದ್ವಾರದ ಮೆಟ್ಟಿಲುಗಳ ಮೇಲೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಸುವರ್ಣ ಸಂಭ್ರಮ ಪ್ರಶಸ್ತಿಗಳನ್ನು ಸಾಧಕರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು. ಖಾಸಗಿ ಕ್ಷೇತ್ರದ ಉತ್ಪನ್ನಗಳ ಮೇಲೆ ಕೇವಲ ಇಂಗ್ಲೀಷ್‌ನಲ್ಲಿ ಮಾತ್ರ ಹೆಸರು, ಇತ್ಯಾದಿ ವಿವರಣೆಗಳನ್ನು ಬರೆಯಲಾಗುತ್ತಿದೆ. ಇನ್ನು ಮುಂದೆ ಕನ್ನಡದಲ್ಲಿಯೂ ಹೆಸರು ಸೇರಿಸಿ ಬರೆಯಬೇಕೆನ್ನುವ ಪ್ರಯತ್ನ ಮಾಡುತ್ತೇವೆ ಎಂದರು.

ಮೈಸೂರು ನಗರದ ಹೃದಯ ಭಾಗದಲ್ಲಿರುವ, ಜಿಲ್ಲಾಧಿಕಾರಿಯವರ ಹಳೆಯ ಕಚೇರಿಯನ್ನು ಕನ್ನ ಡದ ಮ್ಯೂಸಿಯಂ ಆಗಿ ಅಭಿವೃದ್ಧಿ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿ ಯವರಿಗೆ ಹೊಸ ಕಚೇರಿಯನ್ನು ನಿರ್ಮಾಣ ಮಾಡಲಾಗಿದೆ. ಹಳೆಯ ಅಠಾರ ಕಚೇರಿಯನ್ನು ವಸ್ತು ಸಂಗ್ರಹಾಲಯ ಮಾಡಲು ರೂಪಿಸಲಾಗಿದೆ ಎಂದು ಹೇಳಿದರು. ಯೋಜನೆಗಳನ್ನು ಸಾಧಕರನ್ನು ಗುರುತಿಸಿ ಗೌರವಿಸುವ ದೊಡ್ಡ ಪರಂಪರೆ ಕರ್ನಾಟಕದಲ್ಲಿದೆ. ಹಿರಿಯ ಸಾಧಕರು ಯುವಜನ ಸಮೂಹಕ್ಕೆ ಮಾರ್ಗದರ್ಶಕರಾಗಬೇಕು. ಅವರ ಸಾಧನೆಗಳು ಯುವಕರಿಗೆ ದಾರಿದೀಪವಾಗಬೇಕು. 

Latest Videos

undefined

ಸಿದ್ದುಗೆ ನೋವಾದಾಗ ಖುಷಿಪಡುವುದು, ಡಿಕೆಶಿ ಸಮಸ್ಯೆ ಸಿಕ್ಕಾಗ ಸಂತಸಪಡುವುದು ಸರಿಯಲ್ಲ: ಖರ್ಗೆ ಎಚ್ಚರಿಕೆ

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿಜ ಸಾಧಕರನ್ನು ಗುರುತಿಸಿ ಗೌರವಿಸುತ್ತಿದೆ. ಕರ್ನಾಟಕದಲ್ಲಿ ಕನ್ನಡದ ವಾತಾವರಣ ನಿರ್ಮಾಣ ಮಾಡುತ್ತೇವೆ ಎಂದು ಎಲ್ಲರೂ ಶಪಥ ಮಾಡಬೇಕು. ಯಾರೇ ಪರಭಾಷಿಕರು ಇಲ್ಲಿಗೆ ಬಂದರೂ ಕೂಡ ಅನಿವಾರ್ಯವಾಗಿ ಕನ್ನಡವನ್ನು ಕಲಿತು ಕನ್ನಡದಲ್ಲಿ ವ್ಯವಹರಿಸುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಅದೇ ಕನ್ನಡ ನಾಡಿಗೆ ಕನ್ನಡ ಭಾಷೆಗೆ ನಾವು ಸಲ್ಲಿಸುವ ಗೌರವ ಎಂದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತ ನಾಡಿ, ಇತಿಹಾಸದಲ್ಲಿ ವಿಧಾನಸೌಧವನ್ನೇ ನೋಡದ, ಅರ್ಜಿಯನ್ನು ಸಲ್ಲಿಸದಂತಹ ಅನೇಕ ಸಾಧಕರನ್ನು ನಾವು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ. 

ಬದುಕಿನಲ್ಲಿ ಒಂದು ಸಾಕ್ಷಿ ಗುಡ್ಡೆಯಂತಹ ಸಾಧನೆ ಯನ್ನು ಬಿಟ್ಟು ಹೋಗಬೇಕು. ಈ ಸಾಧಕರ ಸಾಧನೆ ಗಳು ಯುವಜನರ ಬದುಕಿಗೆ ಮಾದರಿಯಾಗಿದ್ದು ಭವಿಷ್ಯದ ದಾರಿದೀಪವಾಗಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜತಂಗಡಗಿ, ಗೃಹಸಚಿವಡಾ.ಜಿ.ಪರಮೇಶ್ವರ್, ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಪರಿಷತ್ತಿನ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

ಸಿ.ಪಿ.ಯೋಗೇಶ್ವರ್‌ಗೆ ಅವರದ್ಧೇ ಆದ ಮತ ಬ್ಯಾಂಕ್ ಇದೆ: ಸಚಿವ ರಾಮಲಿಂಗಾರೆಡ್ಡಿ

ಸಾಧಕರಿಗೆ ಸನ್ಮಾನ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರಾದ 69 ಸಾಧಕರು ಮತ್ತು ಕರ್ನಾಟಕ ಸುವರ್ಣಸಂಭ್ರಮಪ್ರಶಸ್ತಿಗೆ ಭಾಜನರಾದ 100 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ 2023-24ನೇ ಸಾಲಿನ ವಾರ್ಷಿಕ ಪ್ರಗತಿ ವರದಿ ಸಂಸ್ಕೃತಿ ಪಯಣ ಕಿರು ಹೊತ್ತಿಗೆ ಬಿಡುಗಡೆ ಮಾಡಲಾಯಿತು. ಅಂತೆಯೇ ವರ್ಷವಿಡೀ ಕನ್ನಡ ರಥ ನಾಡಿನೆಲ್ಲೆಡೆ ಸಂಚರಿದ್ದು ರಥ ವಿನ್ಯಾಸ ಮಾಡಿದ ಸನತ್‌ಕುಮಾರ್‌ ಹಾಗೂ ಚಾಲಕ ಮಂಜುನಾಥ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.

click me!