* ನಾಡೋಜ ಚೆನ್ನವೀರ ಕಣವಿ ಆರೋಗ್ಯ ಸ್ಥಿತಿ ಚಿಂತಾಜನಕ
* ಹುಬ್ಬಳ್ಳಿಯ ಎಸ್‌ಡಿಎಂ ಆಸ್ಪತ್ರೆಗೆಯಲ್ಲಿ ವೆಂಟಿಲೇಟರ್ ನಲ್ಲಿರುವ ಚೆನ್ನವೀರ ಕಣವಿ
* ಮೊನ್ನೇ ಅಷ್ಟೇ ಅವರಿಗೆ ಕೊರೋನಾ ಸೋಂಕು ತಗುಲಿತ್ತು
ಬೆಂಗಳೂರು, (ಜ.19): ಉಸಿರಾಟದ ತೊಂದರೆಯಿಂದ ಸ್ಥಳೀಯ ಎಸ್ ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಕವಿ ನಾಡೋಜ ಚೆನ್ನವೀರ ಕಣವಿ(Kannada Litterateur Chennaveera Kanavi) ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಇಂದು ( ಬುಧವಾರ) ಸಂಜೆ ಬಿಡುಗಡೆ ಮಾಡಿರುವ ಆರೋಗ್ಯ ಮಾಹಿತಿ ಪ್ರಕಾರ, ಕಣವಿ ಅವರ ರಕ್ತದ ಒತ್ತಡ ಕಡಿಮೆಯಾಗಿದೆ. ಅದೇ ರೀತಿ ಆಮ್ಲಜನಕದ ಕೊರತೆ ಆಗುತ್ತಿದ್ದು ಅವರಿಗೆ ಕೊಳವೆ ಮೂಲಕ ಆಮ್ಲಜನಕ ಪೂರೈಕೆ ಮಾಡಲು ವೆಂಟಿಲೇಟರ್ ಅಳವಡಿಸಲಾಗಿದೆ.
undefined
Coronavirus ನಾಡೋಜ ಚನ್ನವೀರ ಕಣವಿಗೆ ತಗುಲಿದ ಕೊರೋನಾ
ಹಿಮೋಗ್ಲೋಬಿನ್ ಕೂಡಾ ಕಡಿಮೆಯಾಗಿದ್ದು ರಕ್ತ ಹಾಕಲಾಗುತ್ತಿದೆ. ಉಳಿದಂತೆ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು ಕೋವಿಡ್ ಶಿಷ್ಟಾಚಾರದ ಪ್ರಕಾರ ಚಿಕಿತ್ಸೆ ಮುಂದುವರಿದಿದೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಹಿರಿಯ ಕವಿ ನಾಡೋಜ ಚನ್ನವೀರ ಕಣವಿ (Chennaveera Kanavi) ಅವರಿಗೆ ಇತ್ತೀಚಗೆ ಕೊರೋನಾ ಸೋಂಕು(Coronavirus) ದೃಢಪಟ್ಟಿತ್ತು.
ಚೆಂಬೆಳಕಿನ ಕವಿ ಎಂದೇ ಖ್ಯಾತಿ ಪಡೆದಿರುವ 93 ವರ್ಷದ ಕಣವಿ, ಹುಬ್ಬಳ್ಳಿಯ ಎಸ್ ಡಿಎಂ ಆಸ್ಪತ್ರೆಗೆ(Hospital) ತಪಾಸಣೆಗೆ ಹೋಗಿದ್ದರು. ಈ ವೇಳೆ ಕೊರೊನಾ ಟೆಸ್ಟ್ ಮಾಡಿದಾಗ ವರದಿ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಅಂದು ಅವರು ಅದೇ ಎಸ್ ಡಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಯಾವುದೇ ತೊಂದರೆ ಇಲ್ಲ ಆರೋಗ್ಯವಾಗಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ, ಇದೀಗ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಕೋವಿಡ್ ಸೋಂಕು ತಗುಲಿದ್ದ ಡಾ. ಚೆನ್ನವೀರ ಕಣವಿ ಜನವರಿ 14 ರಂದು ಎಸ್.ಡಿ.ಎಮ್.ಆಸ್ಪತ್ರೆಗೆ ದಾಖಲಾಗಿದ್ದಾರೆ. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಡಾ. ಚೆನ್ನವೀರ ಕಣವಿ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಧಾರವಾಡ ಜಿಲ್ಲಾಡಳಿತ ಬುಧವಾರ ಈ ಕುರಿತು ಪ್ರತಿಕ್ರಿಯೆ ನೀಡಿದೆ. ಅವರ ಎಲ್ಲಾ ವೈದ್ಯಕೀಯ ಚಿಕಿತ್ಸೆ ವೆಚ್ಚವನ್ನು ಸರ್ಕಾರದಿಂದ ಭರಿಸಲು ಕ್ರಮವಹಿಸಲಾಗಿದೆ ಎಂದು ಹೇಳಿದೆ.
ಧಾರವಾಡ ಜಿಲ್ಲಾಡಳಿತ ಚಿಕಿತ್ಸೆಗೆ ಐಸಿಯು ಬೆಡ್ ಮೀಸಲಿರಿಸಿ, ಉತ್ತಮ ಚಿಕಿತ್ಸೆಗೆ ಕ್ರಮ ಕೈಗೊಂಡಿದೆ ಮತ್ತು ಅವರು ಗುಣಮುಖರಾಗಿ ಮನೆಗೆ ಬರುವವರೆಗೆ ಎಲ್ಲಾ ವೈದ್ಯಕೀಯ ಚಿಕಿತ್ಸೆ ವೆಚ್ಚವನ್ನು ಸರ್ಕಾರದಿಂದ ಭರಿಸಲು ಕ್ರಮವಹಿಸಲಾಗಿದೆ. ಈ ಕುರಿತು ಜನವರಿ 15 ರಂದು ಎಸ್. ಡಿ. ಎಮ್. ಆಸ್ಪತ್ರೆಯ ಆಡಳಿತ ಮಂಡಳಿಗೆ ಹಾಗೂ ಡಾ. ಕಣವಿ ಕುಟುಂಬ ಸದಸ್ಯರಿಗೆ ತಿಳಿಸಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ಹೇಳಿತ್ತು.