ಸಾಕ್ಷಿದಾರನ ಕೈಗೆ ಕೋಳ ಹಾಕಿದ ಪೊಲೀಸರು: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

By Govindaraj S  |  First Published Aug 3, 2023, 10:42 PM IST

ಪ್ರಕರಣವೊಂದರಲ್ಲಿ ಸಾಕ್ಷಿ ಹೇಳಲು ಪೊಲೀಸ್‌ ಠಾಣೆಗೆ ಕರೆಸಿ ಕೈಗೆ ಕೊಳ ಹಾಕಿದ ಅಮಾನವೀಯ ಘಟನೆ ಜಿಲ್ಲೆಯ ಕನಕಗಿರಿ ಪೊಲೀಸ್‌ ಠಾಣೆಯಲ್ಲಿ ಬುಧವಾರ ನಡೆದಿದೆ. 


ಕೊಪ್ಪಳ (ಆ.03): ಪ್ರಕರಣವೊಂದರಲ್ಲಿ ಸಾಕ್ಷಿ ಹೇಳಲು ಪೊಲೀಸ್‌ ಠಾಣೆಗೆ ಕರೆಸಿ ಕೈಗೆ ಕೊಳ ಹಾಕಿದ ಅಮಾನವೀಯ ಘಟನೆ ಜಿಲ್ಲೆಯ ಕನಕಗಿರಿ ಪೊಲೀಸ್‌ ಠಾಣೆಯಲ್ಲಿ ಬುಧವಾರ ನಡೆದಿದೆ. ಕೈಗೆ ಕೊಳ ಹಾಕಿ, ಅಮಾನವೀಯತೆ ಮೆರೆದ ಕುರಿತು ಸಣ್ಣ ಹನುಮಂತಪ್ಪ ಗೃಹ ಸಚಿವರಿಗೆ ಪತ್ರ ಬರೆದಿದ್ದು, ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. 

ಆದರೆ, ಇದನ್ನು ಕನಕಗಿರಿ ಠಾಣೆ ಪಿಐ ಜಗದೀಶ ಅಲ್ಲಗಳೆದ್ದಾರೆ. ‘ನಾವು ಆತನನ್ನು ವಿಚಾರಣೆಗೆ ಕರೆತಂದಿದ್ದೆವು. ಈತ ಮಟ್ಕಾಬುಕ್ಕಿಯಾಗಿದ್ದ. ಪದೇ ಪದೆ ತಪ್ಪಿಸಿಕೊಂಡು ಹೋಗುತ್ತಿದ್ದರಿಂದ ಕೈಗೆ ಕೊಳ ಹಾಕಿ ಕುಳ್ಳಿರಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

Tap to resize

Latest Videos

undefined

ಡಿಸಿಎಂ ಸ್ವಕ್ಷೇ​ತ್ರ​ದಲ್ಲಿ ಸಾರಿಗೆ ಬಸ್ಸಿ​ನ ಅವ್ಯ​ವಸ್ಥೆ ಖಂಡಿಸಿ ಪ್ರತಿಭಟನೆ: ವಾಹನ ಸಂಚಾರ ಅಸ್ತವ್ಯಸ್ಥ

ಏನಿದು ಪ್ರಕರಣ?: ಸಣ್ಣ ಹನುಮಂತಪ್ಪ ಮಹಾರಾಷ್ಟ್ರಕ್ಕೆ ದುಡಿಯಲು ಹೋಗಿದ್ದ. ಗಂಭೀರ ಪ್ರಕರಣವೊಂದರಲ್ಲಿ ಸಾಕ್ಷಿ ಹೇಳಲು ಈತನನ್ನು ಕರೆತರಲಾಗಿತ್ತು. ಈ ವೇಳೆ ನನ್ನ ಕೈಗೆ ಕೊಳ ತೊಡಿಸಿ, ಅವಮಾನ ಮಾಡಿದ್ದಾರೆ ಎಂದು ಸಂತ್ರಸ್ತ ಗೃಹ ಸಚಿವರಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ. 

ಆದರೆ, ಈಗ ಆತನ ವಿರುದ್ಧ ಠಾಣೆಯಲ್ಲಿ ಪ್ರಕರಣವೊಂದು ಸಹ ದಾಖಲಾಗಿದೆ. ಅದರ ವಿಚಾರಣೆಗಾಗಿ ಕರೆತರಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕೈಗೆ ಕೊಳ ಹಾಕಿರುವ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಆತನನ್ನು ಬಿಟ್ಟುಕಳುಹಿಸಲಾಗಿದೆ.

ಮರಣ ದೃಢೀಕರಣ ಪತ್ರ ನೀಡಲು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

ಪ್ರಕರಣದ ಕುರಿತು ಮಾಹಿತಿ ಬಂದಿದೆ. ಕೊಳ ಏಕೆ ತೊಡಿಸಿದ್ದರು? ಏನು ಪ್ರಕರಣ? ಎನ್ನುವುದನ್ನು ಡಿವೈಎಸ್ಪಿ ಹಂತದಲ್ಲಿ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಯಶೋದಾ ಒಂಟಿಗೋಡ, ಎಸ್ಪಿ ಕೊಪ್ಪಳ

click me!