ಕಲಬುರಗಿ: ಧ್ಯಾನಕ್ಕೆ ಕುಳಿತಾಗಲೇ ಹೃದಯಾಘಾತ; ಗಾಣಗಾಪುರದಲ್ಲಿ ಪದ್ಮಾಸನ ಸ್ಥಿತಿಯಲ್ಲೇ ಭಕ್ತ ಸಾವು!

Published : Jan 26, 2026, 12:30 AM IST
kalaburagi Man dies of heart attack while meditating rav

ಸಾರಾಂಶ

ಕಲಬುರಗಿಯ ಪ್ರಸಿದ್ಧ ದತ್ತಕ್ಷೇತ್ರ ದೇವಲಗಾಣಗಾಪುರದಲ್ಲಿ, ಭೀಮಾ ನದಿ ತೀರದಲ್ಲಿ ಧ್ಯಾನ ಮಾಡುತ್ತಿದ್ದ ಭಕ್ತರೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಸೊನ್ನ ಗ್ರಾಮದ ಅಣ್ಣಾರಾಯ (48) ಮೃತಪಟ್ಟಿದ್ದು, ಅವರು ಪದ್ಮಾಸನದಲ್ಲಿ ಕುಳಿತ ಭಂಗಿಯಲ್ಲೇ ಪ್ರಾಣ ಬಿಟ್ಟಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.

ಕಲಬುರಗಿ (ಜ.26): ಕಲಬುರಗಿಯ ಪ್ರಸಿದ್ಧ ದತ್ತಕ್ಷೇತ್ರ ದೇವಲಗಾಣಗಾಪುರದ ಭೀಮಾ ತೀರದಲ್ಲಿ ಭಕ್ತನೋರ್ವ ಧ್ಯಾನ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.

ದತ್ತನ ದರ್ಶನಕ್ಕೆ ಬಂದು ದೈವಾಧೀನರಾದ ಭಕ್ತ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಅಣ್ಣಾರಾಯ (48) ಎಂಬುವವರೇ ಮೃತಪಟ್ಟ ದುರ್ದೈವಿ. ಇವರು ದತ್ತಾತ್ರೇಯನ ದರ್ಶನ ಪಡೆಯಲು ಗಾಣಗಾಪುರಕ್ಕೆ ಆಗಮಿಸಿದ್ದರು. ಸಂಗಮದ ಬಳಿ ಪ್ರಶಾಂತವಾಗಿ ಭಕ್ತಿಯಲ್ಲಿ ಮಗ್ನರಾಗಿದ್ದ ಸಂದರ್ಭದಲ್ಲಿ ವಿಧಿಯಾಟ ಬೇರೆಯೇ ಆಗಿತ್ತು.

ಪದ್ಮಾಸನದಲ್ಲೇ ಕೊನೆಯುಸಿರೆಳೆದ ಅಣ್ಣಾರಾಯ

ದೇವಲಗಾಣಗಾಪುರದ ಸಂಗಮದ ಬಳಿಯ ಭೀಮಾ ತೀರದಲ್ಲಿ ಅಣ್ಣಾರಾಯ ಅವರು ಬೆಂಚ್ ಮೇಲೆ ಪದ್ಮಾಸನ ಹಾಕಿ ಧ್ಯಾನಕ್ಕೆ ಕುಳಿತಿದ್ದರು. ಈ ವೇಳೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ಧ್ಯಾನದ ಮೌನದಲ್ಲೇ ಜೀವ ಹೋಗಿದ್ದರೂ, ಅವರು ಕುಳಿತಿದ್ದ ಭಂಗಿ ಮಾತ್ರ ಬದಲಾಗಿರಲಿಲ್ಲ. ಪ್ರಾಣ ಹೋದರೂ ದೇಹ ಧ್ಯಾನಸ್ಥ ಸ್ಥಿತಿಯಲ್ಲೇ ಇದ್ದದ್ದು ನೆರೆದಿದ್ದವರಲ್ಲಿ ಅಚ್ಚರಿ ಮತ್ತು ನೋವನ್ನುಂಟು ಮಾಡಿದೆ.

ಭೀಮಾ ತೀರದಲ್ಲಿ ಮೌನಕ್ಕೆ ಶರಣಾದ ಜೀವ

ನದಿ ತೀರದ ಮನಮೋಹಕ ವಾತಾವರಣದಲ್ಲಿ ದೇವರ ಸ್ಮರಣೆ ಮಾಡುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಕುಳಿತಲ್ಲೇ ಸಾವನ್ನಪ್ಪಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ. ಸ್ಥಳೀಯರು ಗಮನಿಸಿ ನೋಡಿದಾಗಲೇ ಅಣ್ಣಾರಾಯ ಅವರು ಮೃತಪಟ್ಟಿರುವುದು ಗೊತ್ತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೊಪ್ಪಳ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಭಾಷಣದ ವೇಳೆ ಕಲ್ಲೆಸೆದ ಹುಚ್ಚ, ತಪ್ಪಿದ ಅನಾಹುತ
Republic day 2026: ಮಾಣಿಕ್ ಷಾ ಮೈದಾನದ ಸುತ್ತಮುತ್ತ ಸಂಚಾರ ಮಾರ್ಪಾಡು, ಪಾರ್ಕಿಂಗ್ ನಿಷೇಧ!