Ibrahim Sutar ಮಣ್ಣಲ್ಲಿ ಮಣ್ಣಾದ ಕನ್ನಡದ ಕಬೀರ, ಸುತಾರ್ ಇಚ್ಚೆಯಂತೆ ಅಂತ್ಯಕ್ರಿಯೆ

By Suvarna News  |  First Published Feb 5, 2022, 9:22 PM IST

* ಮಣ್ಣಲ್ಲಿ ಮಣ್ಣಾದ ಕನ್ನಡದ ಕಬೀರ 
* ಸಕಾ೯ರಿ ಗೌರವದೊಂದಿಗೆ ಇಬ್ರಾಹಿಂ ಸುತಾರ್ ಅಂತ್ಯಕ್ರಿಯೆ
* ಮಹಾಲಿಂಗಪೂರ ಹೊರವಲಯದ ಸುತಾರ್ ಅವರಿಗೆ ಸೇರಿದ ಹೊಲದಲ್ಲಿ ನಡೆದ ಅಂತ್ಯಕ್ರಿಯೆ


ಬಾಗಲಕೋಟೆ, (ಫೆ.05): ಪ್ರವಚನ, ಸಂವಾದಗಳ ಮೂಲಕ ಭಾವೈಕ್ಯತೆ ಸಂದೇಶಗಳನ್ನು ಸಾರುತ್ತಿದ್ದ ಕನ್ನಡದ ಕಬೀರ ಎಂದೇ ಪ್ರಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕತ ಇಬ್ರಾಹಿಂ ಸುತಾರ್ ಅವರ ಅಂತ್ಯಕ್ರಿಯೆ ಸಕಾ೯ರಿ ಗೌರವದೊಂದಿಗೆ ನಡೆಯಿತು.

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪೂರದಲ್ಲಿ ಸಕಾ೯ರಿ ಗೌರವದೊಂದಿಗೆ ನಡೆದ ಇಬ್ರಾಹಿಂ ಸುತಾರ್ ಅಂತ್ಯಕ್ರಿಯೆ ನೆರವೇರಿತು.

Tap to resize

Latest Videos

ಸುತಾರ್ ಅವರ ಇಚ್ಚೆಯಂತೆ ಅವರದೇ ಹೊಲದಲ್ಲಿ ಮುಸ್ಲಿಂ ಸಮುದಾಯದ ಧಾಮಿ೯ಕ ವಿಧಿವಿಧಾನದಂತೆ ಅಂತ್ಯಕ್ರಿಯೆ ಮಾಡಲಾಯ್ತು. ಅಂತ್ಯಕ್ರಿಯೆಯಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಸೇರಿದಂತೆ ಹಲವರು ಭಾಗಿವಹಿಸಿದ್ರು.

Bagalkot: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಇನ್ನಿಲ್ಲ

ಕಳೆದ ಮೂರ್ನಾಲ್ಕು ದಿನಗಳಿಂದ ಇಬ್ರಾಹಿಂ ಸುತಾರ್(Ibrahim Sutar) ಹೃದಯದ ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದರು. ಇಂದು(ಶನಿವಾರ) ಬೆಳಿಗ್ಗೆ ಮತ್ತೆ ಲಘು ಹೃದಯಾಘಾತವಾಗಿದೆ(Heart Attack). ತಕ್ಷಣ ಆಸ್ಪತ್ರೆಗೆ ಇಬ್ರಾಹಿಂ ಸುತಾರ್ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಇಬ್ರಾಹಿಂ ಸುತಾರ್ ಕೊನೆಯುಸಿರೆಳೆದಿದ್ದರು. ಸುತಾರ್ ಅವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 

ಇಬ್ರಾಹಿಂ ಸುತಾರ್ ಅವರು ನಾಡಿನೆಲ್ಲೆಡೆ ಪ್ರವಚನ ನೀಡಿ ಭಾವೈಕ್ಯತೆ ಸಂದೇಶ ಸಾರಿ ಹೆಸರು ವಾಸಿಯಾಗಿದ್ದರು. ಹಿಂದೂ ಮುಸ್ಲಿಂ ಭಾವೈಕ್ಯತೆ ಶ್ರೇಷ್ಠ ಪ್ರವಚಕ, ಸೂಫಿ ಸಂತರಾಗಿದ್ದ ಸುತಾರ್‌ಗೆ ಪದ್ಮಶ್ರೀ(Padma Shri), ರಾಜ್ಯೋತ್ಸವ ಪ್ರಶಸ್ತಿ, ಏಷ್ಯಾನೆಟ್‌ ಸುವರ್ಣನ್ಯೂಸ್‌ನ ಅಸಮಾನ್ಯ ಕನ್ನಡಿಗ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. 

 

click me!