ಕೊರೋನಾ ವೈರಸ್: ಬೆಂಗಳೂರಿನ ಈ ಆಸ್ಪತ್ರೆಗಳಲ್ಲಿ ಮಾತ್ರ ಸೋಂಕಿತರಿಗೆ ಚಿಕಿತ್ಸೆ

By Suvarna News  |  First Published Mar 14, 2020, 6:03 PM IST

ಕರ್ನಾಟಕದಲ್ಲಿ ಈವರೆಗೂ ಐವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅದರಲ್ಲಿ ಬೆಂಗಳೂರಲ್ಲೇ ನಾಲ್ವರಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಇನ್ನು ಈ ಕೊರೋನಾಗೆ ಕಂಡ-ಕಂಡ ಆಸ್ಪತ್ರೆಗಳಲ್ಲಿ  ಚಿಕಿತ್ಸೆ ದೊರೆಯಲ್ಲ. ಅದಕ್ಕಂತಲೇ ಬೆಂಗಳೂರಿನಲ್ಲಿ 4 ಆಸ್ಪತ್ರೆಗಳನ್ನ ಗುರುತಿಸಲಾಗಿದೆ. ಹಾಗಾದರೆ ಬೆಂಗಳೂರಲ್ಲಿ ಯಾವ್ಯಾವ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ದೊರೆಯಲಿದೆ ಎಂಬುದರ ಕುರಿತು ವಿಳಾಸ ಸಮೇತ ವಿವರ ಈ ಕೆಳಗಿನಂತಿದೆ ನೋಡಿ. 


ಬೆಂಗಳೂರು, (ಮಾ.14): ವಿದೇಶಗಳಲ್ಲಿ ಸುತ್ತಾಡುತ್ತಿದ್ದ ಮಹಾಮಾರಿ ಕೊರೋನಾ ವೈರಸ್ ಈಗ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಈಗಾಗಲೇ ಡೆಡ್ಲಿ ವೈರಸ್‌ಗೆ ಕಲಬುರಗಿಯ ಓರ್ವ ವೃದ್ಧ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಪ್ರತ್ಯೇಕ ಕೊರೋನಾ ವಾರ್ಡ್ ತೆಗೆಯಲಾಗಿದೆ. ಇದುವರೆಗೂ ಕರ್ನಾಟಕದಲ್ಲಿ ಕಲಬುರಗಿಯ ವೃದ್ಧ ಸೇರಿದಂತೆ 5 ಕೊರೋನಾ ಪಾಸಿಟಿವ್ ಬಂದಿದೆ. ಅದರಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ.

Tap to resize

Latest Videos

ಟಿಕೆಟ್-ಟಿಕೆಟ್ ಎನ್ನುತ್ತಲೇ ಉಚಿತ ಮಾಸ್ಕ್ ವಿತರಿಸಿದ KSRTC ಕಂಡಕ್ಟರ್

ಇದರಿಂದ ರಾಜ್ಯದ ಕೊರೋನಾ ಕ್ಷಣ-ಕ್ಷಣಕ್ಕೂ ಜನರು ಭಯಭೀತರಾಗುತ್ತಿದ್ದು, ತಮ್ಮ-ತಮ್ಮ ಮನೆಗಳಲ್ಲೇ ಸ್ವಯಂ ದಿಗ್ಬಂಧನ ಹಾಕಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.

ದಿಗ್ಬಂಧನ ಹಾಕಿಕೊಳ್ಳುವ ಮೊದಲು ಒಂದು ಸಲ ಕೊರೋನಾ ಚಿಕಿತ್ಸೆಗೆ ಅಂತಲೇ ಗುರುತಿಸಲಾಗಿರುವ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗುವುದು ಒಳಿತು. ಅಷ್ಟೂ ಆಗಲಿಲ್ಲ ಅಂದ್ರೆ 104 ಸಹಾಯವಾಣಿಗೆ ಕರೆ ಮಾಡಿ ಹೆಲ್ಪ್ ಪಡೆದುಕೊಳ್ಳಬಹುದು.
 
ಕಂಡ-ಕಂಡ ಆಸ್ಪತ್ರೆಗಳಲ್ಲಿ ಈ ಕೊರೋನಾ ಚಿಕಿತ್ಸೆ ದೊರೆಯಲ್ಲ.  ಬದಲಿಗೆ ಡೆಡ್ಲಿ ಕೊರೋನಾ ಚಿಕಿತ್ಸೆಗೆ ಅಂತಲೇ ಬೆಂಗಳೂರಿನಲ್ಲಿ 4 ಆಸ್ಪತ್ರೆಗಳನ್ನ ಗುರುತಿಸಲಾಗಿದೆ. ಈ ನಾಲ್ಕು ಆಸ್ಪತ್ರೆಗಳಲ್ಲಿ ಮಾತ್ರ ಐಸೋಲೇಶನ್ ವಾರ್ಡ್‌ ಸೇರಿದಂತೆ ಕೊರೋನಾಗೆ ಬೇಕಾದ ಚಿಕಿತ್ಸೆ ದೊರೆಯುತ್ತಿದೆ.

ಕೊರೋನಾ ಸೋಂಕು ತಡೆಗೆ ಸ್ಯಾನಿಟೈಸರ್ ಹೇಗೆ ಬಳಸ್ಬೇಕು ಗೊತ್ತಾ?

ಒಂದು ವೇಳೆ ನಿಮಗೆ ಕೊರೋನಾ ವೈರಸ್ ಲಕ್ಷಣಗಳೇನಾದರೂ ಕಂಡುಬಂದರೆ ಅದಕಂತಲೇ ಗುರುತಿಸಲಾಗಿರುವ ಆಸ್ಪತ್ರೆಗೆ ತೆರಳಿ ಪರೀಕ್ಷೆಗೊಳಗಾವುದು ಉತ್ತಮ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೋನಾ ಪ್ರಯೋಗಾಲಯ ಆರಂಭವಾಗಿದೆ. ಆದ್ರೆ, ಐಸೋಲೇಶನ್ ವಾರ್ಡ್ ಇಲ್ಲ. ಇದರಿಂದ ಸೋಂಕಿತರನ್ನ ಹೆಚ್ಚಾಗಿ ರಾಜೀವ್ ಗಾಂಧಿ ಆಸ್ಪತ್ರೆಗೆ ರವಾನಿಸಲಾಗುತ್ತಿದೆ.

ಇನ್ನು ರಾಜ್ಯದ ಬೇರೆ-ಬೇರೆ ಜಿಲ್ಲೆಗಳಲ್ಲಿ ಸಹ ಆಯಾ ಜಿಲ್ಲಾಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳನ್ನ ಮೀಸಲಿಡಲಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರು ಜಿಲ್ಲಾಸ್ಪತ್ರೆಗೆ ಹೋದರೆ ಸಾಕು ಅಲ್ಲಿನ ವೈದ್ಯರು ರಕ್ತ ಮಾದರಿಯನ್ನ ಪಡೆದ ಸಂಬಂಧಿಸಿದ ಲ್ಯಾಬ್‌ಗಳಿಗೆ ರವಾನಿಸುತ್ತಾರೆ. ಆ ಬಳಿಕ ರಿಪೋರ್ಟ್‌ನಲ್ಲಿ ಏನಾದರೂ ಪಾಸಿಟೀವ್ ಬಂದ್ರೆ ಹೆಚ್ಚಿನ ಚಿಕಿತ್ಸೆಗಗಾಗಿ ಯಾವ ಆಸ್ಪತ್ರೆಗೆ ಕಳುಹಿಸಬೇಕೆಂದು ಅವರೇ ನಿರ್ಧರಿಸುತ್ತಾರೆ.

ಹಾಗಾದರೆ ಬೆಂಗಳೂರಲ್ಲಿ ಯಾವ್ಯಾವ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆ ದೊರೆಯಲಿದೆ ಎಂಬುದರ ಕುರಿತು ಮಾಹಿತಿ ಈ ಕೆಳಗಿನಂತಿದೆ ನೋಡಿ.

1. ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಚೆಸ್ಟ್‌ ಡಿಸಿಷನ್ ವಿಳಾಸ: ಸೋಮೇಶ್ವನಗರ 1ನೇ ರಸ್ತೆ, ಧರ್ಮರಾಮ್ ಕಾಲೇಜು ಪೋಸ್ಟ್‌ , 1ನೇ ಬ್ಲಾಕ್, ಹೊಂಬೇಗೌಡನಗರ, ಬೆಂಗಳೂರು-560029, ದೂರವಾಣಿ ಸಂಖ್ಯೆ-080-26088500.

2. ಬೆಂಗಳೂರಿನಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಕೊರೊನಾ ವೈರಸ್‌ಗೆ ಚಿಕಿತ್ಸೆ ಲಭ್ಯವಿದೆ. ವಿಳಾಸ: 98, HAL ಹಳೆ ವಿಮಾನ ನಿಲ್ದಾಣ ರಸ್ತೆ, ಕೋಡಿಹಳ್ಳಿ, ಬೆಂಗಳೂರು-560017. ದೂರವಾಣಿ ಸಂಖ್ಯೆ-080-25211200.

3. ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೊರೊನಾ ವೈರಸ್‌ಗೆ ಚಿಕಿತ್ಸೆ ದೊರೆಯಲಿದೆ. ವಿಳಾಸ-154,9 ಬನ್ನೇರುಘಟ್ಟ ಮುಖ್ಯರಸ್ತೆ, IIM ಎದುರು, ಸಹ್ಯಾದ್ರಿ ಲೇಔಟ್‌, ಪಾಂಡುರಂಗ ನಗರ, ಬೆಂಗಳೂರು-560076.ದೂ.080-66214444.

4. ನಾರಾಯಣ ಹೆಲ್ತ್ ವಿಳಾಸ: 258/ಎ , ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ , ಆನೇಕಲ್ ತಾಲೂಕು, ಹೊಸೂರು ರಸ್ತೆ, ಬೆಂಗಳೂರು-560099. ದೂ.080-67506870ಗೆ ಕರೆ ಮಾಡಬಹುದಾಗಿದೆ.

click me!