ಕೆ.ಎಸ್. ಈಶ್ವರಪ್ಪಗೆ ಜೂನ್ 30 ನಿರ್ಣಯಕ ದಿನ: ಸಂತೋಷ್‌ ಆತ್ಮಹತ್ಯೆ ಬಿ ರಿಪೋರ್ಟ್‌ ರದ್ದಾಗುವ ಭೀತಿ

By Sathish Kumar KH  |  First Published Jun 6, 2023, 5:34 PM IST

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಬಿ. ರಿಪೋರ್ಟ್‌ ಸಲ್ಲಿಕೆ ಪ್ರಶ್ನಿಸಿದ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ ಜೂ.30ಕ್ಕೆ ತೀರ್ಪು ಕಾಯ್ದಿರಿಸಿದ್ದು, ಅಂದು ಕೆ.ಎಸ್.ಈಶ್ವರಪ್ಪಗೆ ನಿರ್ಣಾಯಕ ದಿನವಾಗಿದೆ.


ಬೆಂಗಳೂರು (ಜೂ.06): ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿವಮೊಗ್ಗದ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಮೇಲೆ ಗಂಭೀರ ಆರೋಪ ಕೇಳಿಬಂದಿತ್ತು. ಆದರೆ, ಪೊಲೀಸರು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿದಿದಂತೆ ಬಿ ರಿಪೋರ್ಟ್‌ ಸಲ್ಲಿಕೆ ಮಾಡಿದ್ದರು. ಆದರೆ, ಈ ಬಿ ರಿಪೋರ್ಟ್‌ ಪ್ರಶ್ನಿಸಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದ ಅರ್ಜಿಯ ತೀರ್ಪು ಜೂ.30ರಂದು ಪ್ರಕಟ ಆಗಲಿದ್ದು, ಅಂದು ಈಶ್ವರಪ್ಪ ಅವರಿಗೆ ನಿರ್ಣಾಯಕ ದಿನವಾಗಲಿದೆ. 

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗ್ರಾಮೀಣ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸಚಿವರಾಗಿದ್ದ ಕೆ.ಎಸ್‌. ಈಶ್ವರಪ್ಪ ಅವರ ಕಮೀಷನ್‌ ಕಿರುಕುಳದಿಂದಾಗಿ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ಈ ಪ್ರಕರಣದ ಕುರಿತು ನ್ಯಾಯಾಲಯಕ್ಕೆ 'ಬಿ' ರಿಪೋರ್ಟ್ ಸಲ್ಲಿಕೆ ಮಾಡಲಾಗಿತ್ತು. ಆದರೆ, ಬಿ ರಿಪೋರ್ಟ್‌ ಸಲ್ಲಿಕೆ ಪ್ರಶ್ನಿಸಿ ದಾಖಲಿಸಿದ್ದ ಅರ್ಜಿ ಕುರಿತು ಮಂಗಳವಾರ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೂ.30ಕ್ಕೆ ತೀರ್ಪು ನೀಡುವುದನ್ನು ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಜೂ.30 ನಿರ್ಣಾಯಕ ದಿನವಾಗಿದೆ.

Latest Videos

undefined

ಪಾಟೀಲ್‌ ಆತ್ಮ​ಹತ್ಯೆ ತನಿಖೆ, ಮಹಿ​ಳೆ​ಯ​ರಿಗೆ ದ್ರೋಹ: ಯು.ಟಿ. ಖಾದ​ರ್‌

ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಈಶ್ವರಪ್ಪ: ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಮೇಲೆ ಗಂಭೀರ ಆರೋಪ ಕೇಳಿಬಂದಿತ್ತು. ಇನ್ನು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಈಶ್ವರಪ್ಪ ಅವರ ಮೇಲಿನ ಆರೋಪಕ್ಕೆ ಸೂಕ್ತ ಸಾಕ್ಷಾಧಾರಗಳು ಇಲ್ಲದ ಹಿನ್ನೆಲೆಯಲ್ಲಿ ಬ'ಬಿ' ರಿಪೋರ್ಟ್‌ ಸಲ್ಲಿಕೆ ಮಾಡಲಾಗಿತ್ತು. 

ಬಿ ರಿಪೋರ್ಟ್‌ ಪ್ರಶ್ನಿಸಿ ನ್ಯಾಯಾಲಯಕ್ಕೆ ಸರ್ಜಿ ಸಲ್ಲಿಕೆ: ಇನ್ನು ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 'ಬಿ' ರಿಪೋರ್ಟ್ ಸಲ್ಲಿಕೆಯನ್ನು ಪ್ರಶ್ನೆ ಮಾಡಿ, ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಹೋದರ ಪ್ರಶಾಂತ್ ಪಾಟೀಲ್ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಕುರಿತು ಬಿ ರಿಪೋರ್ಟ್‌ ಪ್ರಶ್ನಿಸಿದ್ದ ಅರ್ಜಿವಿಚಾರಣೆ ಮಂಗಳವಾರ ಮುಕ್ತಾಯವಾಗಿದೆ. ಆದರೆ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೂನ್ 30ಕ್ಕೆ ಆದೇಶ ಕಾಯ್ದಿರಿಸಿದೆ. ಹೀಗಾಗಿ, ತಿಂಗಳ ಕೊನೆಯ ದಿನ ಮಾಜಿ ಸಚಿವ ಈಶ್ವರಪ್ಪ ಅವರಿಗೆ ನಿರ್ಣಾಯಕ ದಿನವೆಂದು ಹೇಳಲಾಗುತ್ತಿದೆ. ಒಂದು ವೇಳೆ ಬಿ ರಿಪೋರ್ಟ್‌ ಒಪ್ಪಿಗೆಯಾಗದಿದ್ದಲ್ಲಿ ಮತ್ತೊಮ್ಮೆ, ಆರೋಪ ಪ್ರಕರಣ ತೆರೆದುಕೊಳ್ಳಲಿದ್ದು, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಪ್ರಕರಣದ ತನಿಖೆಯನ್ನು ಎದುರಿಸಬೇಕಾಗುತ್ತದೆ.

ಬೆಂಗಳೂರಿನ ಪೀಪಲ್ಸ್‌ ಮ್ಯಾನ್‌ ಖ್ಯಾತಿಯ ಇನ್ಸ್‌ಪೆಕ್ಟರ್‌ ಮಂಜುನಾಥ್‌ ಲಿವರ್‌ ಕ್ಯಾನ್ಸರ್‌ಗೆ ಬಲಿ

ಸಂತೋಷ್‌ ಕುಟುಂಬಸ್ಥರಿಂದ ಮರುತನಿಖೆಗೆ ಒತ್ತಾಯ: ಇನ್ನು ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದರು. ಆದರೆ, ಇದನ್ನು ಪ್ರಶ್ನಿಸಿದ್ದ ಸಂತೋಷ್ ಕುಟುಂಬ ಉಡುಪಿ ಪೊಲೀಸರ ತನಿಖೆ ಕ್ತಮವಾಗಿಲ್ಲವೆಂದು ವಾದ ಮಂಡಿಸಿದ್ದಾರೆ. ಹೀಗಾಗಿ, ಮರುತನಿಖೆ ಅಥವಾ ಕಾಂಗ್ನಿಜೆನ್ಸ್ ತೆಗೆದುಕೊಳ್ಳುವಂತೆ ವಾದ ಮಂಡಿಸಲಾಗಿದೆ. ಈ ವಾದವನ್ನು ಸಂಪೂರ್ಣವಾಗಿ ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಪ್ರೀತ್.ಜೆ ಅವರು ತೀರ್ಪು ಕಾಯ್ದಿರಿಸಿದ್ದಾರೆ.

click me!