HD Kumaraswamy: ವಿಧಾನಸಭೆ, ಬಿಬಿಎಂಪಿ ಚುನಾವಣೆಗೆ ಜೆಡಿಎಸ್‌ ಸಿದ್ಧತೆ

Kannadaprabha News   | Asianet News
Published : Feb 26, 2022, 02:50 AM IST
HD Kumaraswamy: ವಿಧಾನಸಭೆ, ಬಿಬಿಎಂಪಿ ಚುನಾವಣೆಗೆ ಜೆಡಿಎಸ್‌ ಸಿದ್ಧತೆ

ಸಾರಾಂಶ

ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಗೆ ಜೆಡಿಎಸ್‌ ಎಲ್ಲಾ ರೀತಿಯಲ್ಲೂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.  

ಬೆಂಗಳೂರು (ಫೆ.26): ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆ (Assembly Election) ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ (BBMP Election) ಜೆಡಿಎಸ್‌ (JDS) ಎಲ್ಲಾ ರೀತಿಯಲ್ಲೂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಶುಕ್ರವಾರ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ನೂತನ ಜೆಡಿಎಸ್‌ ಕಚೇರಿ ಉದ್ಘಾಟಿಸಿದ ಅವರು, ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಹೆಬ್ಬಾಳ ಕ್ಷೇತ್ರದಲ್ಲಿ ಕಚೇರಿ ಪ್ರಾರಂಭಿಸಲಾಗಿದೆ. 

ಈ ಭಾಗದಲ್ಲಿ ಪಕ್ಷ ಸಂಘಟನೆಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಪ್ರತಿನಿತ್ಯ ಜನರ ಶ್ರಮಕ್ಕೆ ಯಾವ ಶಕ್ತಿ ಸರ್ಕಾರ ತುಂಬುತ್ತಿದೆ. ಪಾವತಿಸುವ ತೆರಿಗೆಗೆ ಸರ್ಕಾರ ನಡೆಸುವವರು ಜನತೆಗೆ ಶಕ್ತಿ ತುಂಬುತ್ತಿದೆಯೇ ಎಂಬುದು ಮುಖ್ಯವಾಗುತ್ತದೆ ಎಂದರು. ಕಳೆದ ಎರಡು ವರ್ಷದಿಂದ ಆನ್‌ಲೈನ್‌ ಶಿಕ್ಷಣ ನೀಡಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಬಡವರಿಗೆ ಇದು ಸಮರ್ಪಕವಾಗಿ ತಲುಪಿದೆಯಾ? ಕೋವಿಡ್‌, ಹಿಜಾಬ್‌ ಮತ್ತು ಕೇಸರಿ ಶಾಲು ಎಂದೆಲ್ಲಾ ಹೇಳಿ ಇಡೀ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಲಾಗಿದೆ. ಶಾಲಾ-ಕಾಲೇಜು ಪರಿಸ್ಥಿತಿ ಏನಾಗಿದೆ. 

ಸರ್ಕಾರಿ ಶಾಲೆಗೆ ರಾಜಕಾರಣಿಗಳ ಮಕ್ಕಳನ್ನು ಕಳುಹಿಸುತ್ತಾರಾ? ಮುಸ್ಲಿಮರ ಸಂಪ್ರದಾಯವಾಗಿ ಡ್ರೆಸ್‌ಕೋಡ್‌ ಇದೆ. ಹಿಜಾಬ್‌ ವಿವಾದ ಘಟನೆ ಉಡುಪಿಯಲ್ಲಿ ಪ್ರಾರಂಭವಾಗಿ ರಾಜ್ಯದ ಇತರೆ ಜಿಲ್ಲೆಗಳಿಗೆ ವ್ಯಾಪಿಸಿತು. ಎರಡು ರಾಷ್ಟ್ರೀಯ ಪಕ್ಷಗಳು ಮುಗ್ಧ ಮನಸ್ಸುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಧರ್ಮದ ಹೆಸರಲ್ಲಿ ವಶೀಕರಣ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು. ಸಿಎಎ, ಎನ್‌ಆರ್‌ಸಿಎ ಜಾರಿಗೆ ಹೊರಟವರು ಏನೆಲ್ಲಾ ಮಾಡಿದರು ಎನ್ನುವುದು ದೇಶಕ್ಕೆ ಗೊತ್ತಿದೆ. ಆಗ ಒಂದು ತಿಂಗಳ ಕಾಲ ಪ್ರತಿಭಟನೆ ನಡೆಯಿತು. ಮತಾಂತರ ನಿಷೇಧ ಮಸೂದೆ ತರುವುದಕ್ಕೆ ಮುಂದಾದರು. 

Karnataka Politics: ಡಿಕೆಶಿ ಬ್ರದರ್ಸ್‌ ಮಣ್ಣಿನ ಮಕ್ಕಳಲ್ಲ, ಕಲ್ಲಿನ ಮಕ್ಕಳು: HDK

ಉತ್ತರ ಪ್ರದೇಶದ ಚುನಾವಣೆ ನಡೆಯುತ್ತಿದ್ದು, ಆ ದೃಷ್ಟಿಯಲ್ಲಿಯೇ ಇದೆಲ್ಲಾ ನಡೆಯುತ್ತಿದೆ. ಬಿಜೆಪಿಯವರು ದೇಶ ಮುಗಿಸಲು ಹೊರಟ್ಟಿದ್ದಾರೆ. ಇನ್ನು, ಕಾಂಗ್ರೆಸ್‌ ನಾಯಕರು ನಮ್ಮನ್ನು ಬಿಜೆಪಿ ಬಿ ಟೀಂ ಎಂದು ಹೇಳುತ್ತಾರೆ. ಅಂತಹ ಅಪಪ್ರಚಾರಕ್ಕೆ ಏನು ಮಾಡುವುದು? ಎಂದು ಬಿಜೆಪಿ, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಟಿ.ಎ.ಶರವಣ, ಜೆಡಿಎಸ್‌ನ ಹೆಬ್ಬಾಳ ಕ್ಷೇತ್ರದ ಅಧ್ಯಕ್ಷ ರುದ್ರಪ್ಪ, ಜೆಡಿಎಸ್‌ ಮುಖಂಡ ಅಬ್ದುಲ್‌ ಹಾಕೀಂ ಖಾನ್‌ ಬಾಬು ಇತರರು ಭಾಗವಹಿಸಿದ್ದರು.

ಪಾದಯಾತ್ರೆಯಿಂದ ನೀರು ಸಿಗುವುದಿಲ್ಲ: ಕಾಂಗ್ರೆಸ್‌ ನಾಯಕರು ಮತ್ತೆ ಪಾದಯಾತ್ರೆ ಹೊರಟಿದ್ದಾರೆ. ನಮ್ಮ ನೀರು ನಮ್ಮ ಹಕ್ಕು ಎಂದು ಹೇಳುತ್ತಿದ್ದಾರೆ. ಪಾದಯಾತ್ರೆಯಿಂದ ನೀರು ಸಿಗಲ್ಲ. ಮಹಾದಾಯಿ ವಿಚಾರದಲ್ಲಿ ಆ ಹೆಣ್ಣು ಮಕ್ಕಳಿಗೆ ಎಷ್ಟುಕಷ್ಟಕೊಟ್ಟರು ಎನ್ನುವುದು ಗೊತ್ತಿದೆ. ಅದೆಲ್ಲಾ ಇವರಿಗೆ ಗೊತ್ತಿಲ್ಲವೇ? ಈಗ ಮೇಕೆದಾಟು ಪಾದಯಾತ್ರೆ ಎನ್ನುತ್ತಾರೆ. ಎಲ್ಲವೂ ಬೂಟಾಟಿಕೆ ಎಂದು ಕುಮಾರಸ್ವಾಮಿ ಟೀಕಿಸಿದರು.

ಇಸ್ಪಿಟ್‌ ಸಾಲ ನಾನು ತೀರಿಸ್ಬೇಕಿತ್ತಾ: ಇಸ್ಪೀಟ್‌ ಆಡಿ ಸಾಲ ಮಾಡಿಕೊಂಡ ಗ್ಯಾಂಬ್ಲರ್‌ಗಳ ಸಾಲವನ್ನು ನಾನು ತೀರಿಸಬೇಕಿತ್ತಾ? ಅಂತಹವರು ಇದೀಗ ನನ್ನ ಪಕ್ಷ ತೊರೆಯುತ್ತಿದ್ದಾರೆ. ಅವರ ಸಾಲವನ್ನು ಅ​ಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಮಾಡಿರುವ ಹಣದಿಂದ ತೀರಿಸುತ್ತಾರಂತೆ ಬಿಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಸಿ.ಪಿ.ಯೋಗೇಶ್ವರ್‌ (CP Yogeeshwara) ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಅನಾರೋಗ್ಯಕ್ಕೆ ತುತ್ತಾಗುವ ಬಡವರ ಚಿಕಿತ್ಸೆಗೆ ನೆರವು ನೀಡುತ್ತೇನೆ. 

2 ವರ್ಷದ ಹಿಂದೆಯೇ ಆ ಹಿಂದೂ ಕಾರ್ಯಕರ್ತ ಹರ್ಷ ಕೊಲೆಗೆ ಘೋಷಣೆ, ಎಚ್‌ಡಿಕೆ ಸ್ಫೋಟಕ ಮಾಹಿತಿ

ಇಂತಹವರ ಸಾಲವನ್ನು ತೀರಿಸುವ ಜವಾಬ್ದಾರಿಯನ್ನು ಪಾಪ ಅವರು ವಹಿಸಿಕೊಂಡಿದ್ದಾರೆ. ನನ್ನ ಸರ್ಕಾರವನ್ನು ಕೆಡವಿದೆ ಎಂದು ಹೇಳಿಕೊಂಡು ಎಂಎಲ್‌ಸಿ ಆದವರು, ತಾಲೂಕಿನ ಕೆಲವು ಅಧಿ​ಕಾರಿಗಳನ್ನು ಬೆದರಿಸಿ ಅವರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಅಂತ ಹೇಳಿದ್ದಾರೆ. ಅಲ್ಲಿಗೆ ವರ್ಗ ಮಾಡಿಸುತ್ತೇನೆ, ಇಲ್ಲಿಗೆ ವರ್ಗ ಮಾಡಿಸುತ್ತೇನೆ ಎಂದು ಅ​ಧಿಕಾರಿಗಳನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದು, ಆ ಹಣದಿಂದ ಮುಖಂಡರನ್ನು ಖರೀದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ