Mekedatu Project: ಮೇಕೆದಾಟು ಪಾದಯಾತ್ರೆಗೆ ರಾಮನಗರದಲ್ಲಿ ಭರ್ಜರಿ ಸಿದ್ಧತೆ

Kannadaprabha News   | Asianet News
Published : Feb 26, 2022, 02:30 AM IST
Mekedatu Project: ಮೇಕೆದಾಟು ಪಾದಯಾತ್ರೆಗೆ ರಾಮನಗರದಲ್ಲಿ ಭರ್ಜರಿ ಸಿದ್ಧತೆ

ಸಾರಾಂಶ

ಜೆಡಿ​ಎಸ್‌ ಭದ್ರ​ಕೋಟೆ ಹಾಗೂ ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಕರ್ಮ​ಭೂಮಿ ರಾಮ​ನ​ಗರ ಕ್ಷೇತ್ರ​ದಲ್ಲಿ 2ನೇ ಹಂತದ ಮೇಕೆ​ದಾಟು ಪಾದ​ಯಾತ್ರೆ ಮೂಲಕ ಕಾಂಗ್ರೆಸ್‌ನ ಶಕ್ತಿ ಪ್ರದ​ರ್ಶನಕ್ಕೆ ಸಕಲ ಸಿದ್ಧ​ತೆ​ಗಳು ಭರದಿಂದ ಸಾಗಿದೆ. 

ಅ​ಫ್ರೋಜ್‌ ಖಾನ್‌

ರಾಮನಗರ (ಫೆ.26): ಜೆಡಿ​ಎಸ್‌ (JDS) ಭದ್ರ​ಕೋಟೆ ಹಾಗೂ ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ (HD Kumarswamy) ಕರ್ಮ​ಭೂಮಿ ರಾಮ​ನ​ಗರ (Ramanagara) ಕ್ಷೇತ್ರ​ದಲ್ಲಿ 2ನೇ ಹಂತದ ಮೇಕೆ​ದಾಟು ಪಾದ​ಯಾತ್ರೆ (Mekedatu Padayatre) ಮೂಲಕ ಕಾಂಗ್ರೆಸ್‌ನ (Congress) ಶಕ್ತಿ ಪ್ರದ​ರ್ಶನಕ್ಕೆ ಸಕಲ ಸಿದ್ಧ​ತೆ​ಗಳು ಭರದಿಂದ ಸಾಗಿದೆ. ಕೋವಿಡ್‌ ನಿಯಮ, ವೀಕೆಂಡ್‌ ಕಫ್ರ್ಯೂ, ರಾಜ್ಯ ಸರ್ಕಾರದ ಕಠಿಣ ನಿರ್ಬಂಧದ ನಡುವೆಯೂ ಜ.9ರಿಂದ 12ರವ​ರೆಗೆ (4 ದಿನ 60.5 ಕಿ.ಮೀ.) ಮೇಕೆದಾಟು ಪಾದಯಾತ್ರೆ ನಿರೀ​ಕ್ಷೆಗೂ ಮೀರಿದ ಜನ ​ಬೆಂಬ​ಲ​ದೊಂದಿಗೆ ಯಶ​ಸ್ವಿ​ಯಾಯಿತು. ಪಾದ​ಯಾ​ತ್ರೆ​ಯನ್ನು 2ನೇ ಹಂತ​ದಲ್ಲಿ ಪೂರ್ಣ​ಗೊ​ಳಿ​ಸಲು ಕಾಂಗ್ರೆಸ್ಸಿಗರು ಸಿದ್ಧರಾಗಿದ್ದಾರೆ.

‘ನೀರಿ​ಗಾಗಿ ನಡಿಗೆ’ ಘೋಷ​ಣೆ​ಯಡಿ ಮೊದಲ ಹಂತ​ದಲ್ಲಿ ಕಾಂಗ್ರೆ​ಸ್ಸಿ​ಗರು 11 ದಿನ, 169 ಕಿ.ಮೀ ಪಾದ​ಯಾತ್ರೆಗೆ ಉದ್ದೇ​ಶಿ​ಸಿ​ದ್ದರು. ಸಂಗ​ಮ​ದಿಂದ ರಾಮ​ನ​ಗ​ರ​ದ​ವ​ರೆಗೆ 60.6 ಕಿ.ಮೀ. ಸಾಗಿದ ಪಾದ​ಯಾತ್ರೆಗೆ ಕೊರೋನಾ ಹೆಚ್ಚಳ, ನ್ಯಾಯಾ​ಲ​ಯದ ಮಧ್ಯ ​ಪ್ರ​ವೇ​ಶದಿಂದಾಗಿ ಸ್ಥಗಿ​ತ​ಗೊ​ಳಿ​ಸಿ​ದ್ದರು. ಮಾರ್ಚ್ 4ಕ್ಕೆ ಬಜೆಟ್‌ ಅಧಿ​ವೇ​ಶನ ನಡೆ​ಯ​ಲಿದ್ದು, ಪಾದ​ಯಾ​ತ್ರೆ​ಯಲ್ಲಿ ಒಂದಿಷ್ಟು ಬದ​ಲಾ​ವ​ಣೆ ಮಾಡಿ​ಕೊಳ್ಳಲಾಗಿದೆ. 7 ದಿನ 109 ಕಿ.ಮೀ ಬದಲಾಗಿ 5 ದಿನ​ 80 ಕಿ.ಮೀ. ಪಾದ​ಯಾತ್ರೆ ನಡೆ​ಸಲಾಗುತ್ತದೆ. ಪ್ರತಿ​ನಿತ್ಯ ಬೆಳ​ಗ್ಗೆ​ಯಿಂದ ಮಧ್ಯಾ​ಹ್ನ​ದ​ವ​ರೆಗೆ 9 ಕಿ.ಮೀ. ಹಾಗೂ ಮಧ್ಯಾ​ಹ್ನ​ದಿಂದ 6 ಕಿ.ಮೀ. ಸೇರಿ ಒಟ್ಟು 15 ಕಿ.ಮೀ.ವರೆಗೆ ಪಾದ​ಯಾತ್ರೆ ನಡೆ​ಯ​ಲಿದೆ. ಜಿಲ್ಲಾ​ಡಳಿತ, ಜಿಲ್ಲಾ ಪೊಲೀಸ್‌ ಇಲಾ​ಖೆಯು ಅನುಮತಿ ನೀಡದಿದ್ದರೂ ಪಾದ​ಯಾತ್ರೆ ನಡೆ​ಸಲು ಕಾಂಗ್ರೆಸ್‌ ನಿರ್ಧ​ರಿ​ಸಿದೆ.

Mekedatu Padayatre ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮತ್ತೆ ಶುರು, ಕೊಂಚ ಬದಲಾವಣೆ ಅಷ್ಟೇ

ಬೃಹತ್‌ ವೇದಿಕೆ ನಿರ್ಮಾ​ಣ: ಫೆ.27ರಂದು ರಾಮ​ನ​ಗರ ಶಕ್ತಿ ದೇವತೆ ಚಾಮುಂಡೇ​ಶ್ವರಿಗೆ ಪೂಜೆ ಸಲ್ಲಿ​ಸಿ, ಕನ​ಕ​ಪುರ ವೃತ್ತದ ಬಳಿಯ ಮೈದಾ​ನ​ದಲ್ಲಿ ಪಾದ​ಯಾ​ತ್ರೆಗೆ ಚಾಲನೆ ನೀಡಲಾಗುತ್ತದೆ. ಇದ​ಕ್ಕಾಗಿ ಬೃಹತ್‌ ವೇದಿಕೆಯನ್ನೇ ನಿರ್ಮಾಣ ಮಾಡ​ಲಾ​ಗು​ತ್ತಿದೆ. ಪ್ರತಿ 9 ಕಿ.ಮೀ. ಅಂತರದಲ್ಲಿ ಭೋಜನ ವ್ಯವಸ್ಥೆ ಮಾಡ​ಲಾ​ಗು​ತ್ತಿದೆ. ಪಾದ​ಯಾ​ತ್ರೆ​ಯಲ್ಲಿ ಪ್ರತಿ ದಿನ 25ರಿಂದ 30 ಸಾವಿರ ಜನರು ಪಾಲ್ಗೊ​ಳ್ಳುವ ನಿರೀ​ಕ್ಷೆ​ಯಿದೆ. ಹೆಜ್ಜೆ ಹೆಜ್ಜೆಗೂ ಕುಡಿ​ಯುವ ನೀರು, ತಂಪು ಪಾನೀಯ, ಪಾನಕ, ಮಜ್ಜಿಗೆ, ಬಿಸ್ಕೆಟ್‌, ಹಣ್ಣು ಹಂಪಲು ನೀಡಲು ಪ್ರತ್ಯೇಕ ಸಮಿ​ತಿ​ಗ​ಳನ್ನು ರಚನೆ ಮಾಡಿ​ದ್ದಾರೆ.

ರಾಮ​ನ​ಗ​ರ​ದಿಂದ-ಬೆಂಗ​ಳೂ​ರ​ವ​ರೆಗೆ ರಸ್ತೆ ಬದಿ​ಯಲ್ಲಿ ಇ-ಟಾಯ್ಲೆಟ್‌ ವ್ಯವಸ್ಥೆ ಮಾಡ​ಲಾ​ಗು​ತ್ತಿ​ದೆ. ಪ್ರಮುಖ ನಾಯಕರ ವಾಸ್ತವ್ಯಕ್ಕಾಗಿ ಈಗಲ್‌ ಟನ್‌ ರೆಸಾರ್ಟ್‌, ವಂಡರ್‌ ಲಾ, 2ನೇ ಹಂತದ ನಾಯಕರಿಗಾಗಿ ಬಿಡದಿಯಲ್ಲಿ ಡಿಕೆಶಿ ಒಡೆತನದ ಐಕಾನ್‌ ಕಾಲೇಜು, ವಿಧಾನ ಪರಿಷತ್‌ ಸದಸ್ಯ ಲಿಂಗಪ್ಪ ಅವರ ಜ್ಞಾನ ವಿಕಾಸ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜಿನಲ್ಲಿ ಹಾಸಿಗೆ ಸಿದ್ಧಪಡಿಸಲಾಗಿದೆ. ರಾಮನಗರದ ಲಾಡ್ಜ್‌ಗಳೆಲ್ಲವು ಬಹುತೇಕ ಬುಕ್‌ ಆಗಿವೆ.

ಏನೇನು ಸಿದ್ಧತೆ?
-ಪ್ರತಿ 9 ಕಿಮೀಗೆ ಊಟ, ತಿಂಡಿ ಕೌಂಟರ್‌ ನಿರ್ಮಾಣ
-ಯಾತ್ರಿಗಳಿಗೆ ದಾರಿಯಲ್ಲಿ ಬಿಸ್ಕತ್‌, ಹಣ್ಣು, ಮಜ್ಜಿಗೆ ಕೌಂಟರ್‌
-ದಾರಿಯುದ್ಧಕ್ಕೂ ಅಲ್ಲಲ್ಲಿ ಇ-ಟಾಯ್ಲೆಟ್‌ ನಿರ್ಮಾಣ
-ನಾಯಕರ ವಾಸ್ತವ್ಯಕ್ಕೆ ಈಗಲ್‌ಟನ್‌ ರೆಸಾರ್ಟ್‌, ವಂಡರ್‌ಲಾದಲ್ಲಿ ರೂಂ ಬುಕ್‌

ನಗರದಲ್ಲಿ 3 ದಿನ ಕಾಂಗ್ರೆಸ್‌ ಪಾದಯಾತ್ರೆ: ಕೊರೋನಾ ಕಾರಣದಿಂದ ಅರ್ಧಕ್ಕೆ ಮೊಟಕುಗೊಳಿಸಿದ್ದ ಮೇಕೆದಾಟು ಪಾದಯಾತ್ರೆ ಫೆ.27ರಂದು ರಾಮನಗರದಿಂದ ಪುನರ್‌ ಆರಂಭಗೊಳ್ಳುತ್ತಿದ್ದು, ಮಾ.1ರಿಂದ 3ರ ವರೆಗೆ ಮೂರು ದಿನ ಬೆಂಗಳೂರು ನಗರ ಭಾಗದಲ್ಲಿ ಬೃಹತ್‌ ಪಾದಯಾತ್ರೆ ನಡೆಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫೆ.28ರ ವೇಳೆಗೆ ಪಾದಯಾತ್ರೆ ಕೆಂಗೇರಿ ತಲುಪಲಿದೆ. ಬಳಿಕ ಬೆಂಗಳೂರಿನಲ್ಲೇ 5 ದಿನ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿತ್ತು.

Mekedatu Padayatre: 27 ರಿಂದ ಮೇಕೆದಾಟು ಪಾದಯಾತ್ರೆ ಪುನಾರಂಭ

ಆದರೆ ಮಾ.4ರಂದು ಬಜೆಟ್‌ ಅಧಿವೇಶನ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಮೂರು ದಿನಗಳಿಗೆ ಸೀಮಿತಗೊಳಿಸಲಾಗಿದೆ. ಅಂತಿಮ ದಿನವಾದ ಮಾ.3ರಂದು ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಬೃಹತ್‌ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ. ತನ್ಮೂಲಕ ಯೋಜನೆಗೆ ಕೂಡಲೇ ಚಾಲನೆ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಡ ಹೇರಲಾಗುವುದು ಎಂದು ಹೇಳಿದರು.

ಕಿರಿಕಿರಿ ಆಗುತ್ತದೆ ಅನುಸರಿಸಿಕೊಳ್ಳಿ: ಸಾವಿರಾರು ಜನ ಪಾದಯಾತ್ರೆಯಲ್ಲಿ ಭಾಗವಹಿಸುವುದರಿಂದ ಸಹಜವಾಗಿಯೇ ಸಂಚಾರದಟ್ಟಣೆ ಆಗುತ್ತದೆ. ಜನರಿಗೂ ಕಿರಿಕಿರಿಯಾಗುತ್ತದೆ. ಬೆಂಗಳೂರಿನ ಜನರಿಗೆ ನೀರೊದಗಿಸಲು ಪಾದಯಾತ್ರೆ ಮಾಡಲಾಗುತ್ತಿದೆ. ಹೀಗಾಗಿ ಸ್ವಲ್ಪ ಅನುಸರಿಸಿಕೊಳ್ಳಬೇಕು. ಬೆಂಗಳೂರಿನ ನೀರಿಗಾಗಿ ಕಾಳಜಿ ಇರುವವರೆಲ್ಲರೂ ಪಾದಯಾತ್ರೆಯಲ್ಲಿ ಭಾಗವಹಿಸಬಹುದು ಎಂದು ಕರೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಕ್ಕಿ ಅಕ್ರಮದಲ್ಲಿ ಬಿಜೆಪಿಯವರೇ ಶಾಮೀಲು: ಸಚಿವ ಪ್ರಿಯಾಂಕ್ ಖರ್ಗೆ
ಬಂಡವಾಳ ಆಕರ್ಷಣೆಗೆ ರಾಜ್ಯಗಳ ನಡುವೆ ಸ್ಪರ್ಧೆ ಹೆಚ್ಚಾಗಿದೆ: ಸಚಿವ ಎಂ.ಬಿ.ಪಾಟೀಲ್‌