ಬಿಡು​ವ​ವರು ಪಕ್ಷ ಬಿಡ​ಲಿ : ಜಿಟಿ​ಡಿಗೆ ಎಚ್‌​ಡಿಕೆ ಟಾಂಗ್‌

By Kannadaprabha News  |  First Published Oct 11, 2020, 7:45 AM IST

ಪಕ್ಷ ಬಿಟ್ಟು ಹೋಗುವವರಿಗೆ ಮೈಸೂರು ಪೇಟ ಹಾಕಿ ಬೀಳ್ಕೊಡುವೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ


ಬೆಂಗ​ಳೂ​ರು (ಅ.11): ‘ಪಕ್ಷ ಬಿಡುವವರು ಈಗಲೇ ಬಿಟ್ಟು ಹೋಗಬಹುದು. ನಾನೇ ಸನ್ಮಾನ ಮಾಡಿ, ಮೈಸೂರು ಪೇಟ ತೊಡಿಸಿ ಕಳುಹಿಸಿಕೊಡುತ್ತೇನೆ. ಮುಂದಿನ ಚುನಾವಣೆವರೆಗೆ ಕಾಯಬೇಕಾದ ಅಗತ್ಯ ಇಲ್ಲ’ ಎಂದು ಜೆಡಿಎಸ್‌ ತೊರೆವ ಚಿಂತ​ನೆ​ಯ​ಲ್ಲಿ​ದ್ದಾರೆ ಎನ್ನ​ಲಾ​ದ ಮೈಸೂರು ಜಿಲ್ಲೆ ಚಾಮುಂಡೇ​ಶ್ವರಿ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಟಾಂಗ್‌ ನೀಡಿದರು.

ಸುದ್ದಿ​ಗಾ​ರರ ಜತೆ ಶನಿ​ವಾರ ಅವರು ಮಾತ​ನಾಡಿ, ‘ಜೆಡಿಎಸ್‌ನಲ್ಲಿ ಬೆಳೆದು ಬೇರೆ ಪಕ್ಷಕ್ಕೆ ಹೋದವರು ಹಲವು ಮಂದಿ ಇದ್ದಾರೆ. ಈಗ 2-3 ಬಾರಿ ಶಾಸಕರಾದವರಿಗೆ ಕಾಂಗ್ರೆಸ್‌ ಬಲೆ ಬೀಸಿದೆ. ಈಗಾಗಲೇ ಮೂವರು ಪಕ್ಷ ತೊರೆದಿದ್ದಾರೆ. ಆದರೂ ಪಕ್ಷ ಏನೂ ಆಗಿಲ್ಲ. ಶಾಸಕರು ಪಕ್ಷ ತೊರೆಯುವುದಾದರೆ ನೇರವಾಗಿ ಹೋಗಬಹುದು. ಚುನಾವಣೆ ಬಂದಾಗ ಹೋಗುವ ತೀರ್ಮಾನ ಮಾಡುವ ಬದಲು ಈಗಲೇ ಹೋಗಬಹುದು. ಅವರಿಗೆ ನಾನೇ ಮೈಸೂರು ಪೇಟೆ ತೊಡಸಿ, ಸನ್ಮಾನ ಮಾಡಿ ಕಳುಹಿಸುತ್ತೇನೆ’ ಎಂದರು.

Tap to resize

Latest Videos

ರಾಜರಾಜೇಶ್ವರಿ ನಗ​ರ ಜೆಡಿ​ಎಸ್‌ ಅಭ್ಯರ್ಥಿ ಯಾರು..? ..

‘ಅವರೆಲ್ಲರೂ ನನ್ನನ್ನು ಮುಖ್ಯಮಂತ್ರಿ ಮಾಡಿದರು. ನನ್ನ ಕಾರ್ಯಕರ್ತರು ದೇಣಿಗೆ ಕೊಡದಿದ್ದರೆ ನಾನು ಮುಖ್ಯಮಂತ್ರಿಯಾಗಲು ಕೈ ಎತ್ತಲು ಅವರಿಗೆ ಶಕ್ತಿ ಎಲ್ಲಿ ಬರುತ್ತಿತ್ತು? ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಬರುವವರು ಬರುತ್ತಿರುತ್ತಾರೆ, ಹೋಗುವವರು ಹೋಗುತ್ತಿರುತ್ತಾರೆ’ ಎಂದು ಹೇಳಿದರು.

click me!