ಪಂಚಮಸಾಲಿ ಮೀಸಲಾತಿ ಸಭೆ: ನೀತಿಸಂಹಿತೆ ನೆಪ ಹೇಳಿದ ಸಿದ್ದು, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಕರೆ ಕೊಟ್ಟ ಕೂಡಲ ಶ್ರೀ

By Girish Goudar  |  First Published Oct 18, 2024, 5:41 PM IST

ಹಿಂದಿನ ಸರ್ಕಾರ ಕೊಟ್ಟ 2d ಮೀಸಲಾತಿ ಆದ್ರೂ ನಮಗೆ ಕೊಡಲಿ. ಅಥವಾ 2a ಮೀಸಲಾತಿ ಆದ್ರೂ ಕೊಡಲಿ. ಯಾವುದೇ ದಿನಾಂಕ ಅಥವಾ ಭರವಸೆ ಕೊಡದೇ ಕೇವಲ ನೀತಿಸಂಹಿತೆ ನೆಪ ಹೇಳಿದ್ದಾರೆ. ಯಡಿಯೂರಪ್ಪ ಕೂಡಾ ಹೀಗೇ ಮಾಡಿದ್ರು, ಬೊಮ್ಮಾಯಿ ಸಹ ಹೀಗೆ ಸಮಯ ನಿಗದಿ ಮಾಡದೇ ಸುಮ್ಮನಿದ್ರು. ಇದೆಲ್ಲ ನೋಡಿ ಹೋರಾಟ ಒಂದೇ ಮಾರ್ಗ ಎಂದು ಸಲಹೆಗಳನ್ನು ನಮ್ಮ ವಕೀಲರು ನೀಡಿದ್ದಾರೆ: ಕೂಡಲ ಸಂಗಮದ ಪಂಚಮಸಾಲಿ ಪೀಠದ ಅಧ್ಯಕ್ಷ ಜಯಮೃತ್ಯುಂಜಯ ಸ್ವಾಮೀಜಿ 


ಬೆಂಗಳೂರು(ಅ.18):  ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಸಂಬಂಧಿಸಿದಂತೆ. ಇವತ್ತು‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಳ ಒತ್ತಡದಲ್ಲಿ ಸಭೆಯನ್ನ ಕರೆದಿದ್ದರು. ಮೀಸಲಾತಿ ಶೀಪಾರಸ್ಸು ಮಾಡಲು ಇವರು ಯಾಕೆ ಹೆದರುತ್ತಿದ್ದಾರೆ. ಇವರು ಶಿಫಾರಸ್ಸು ಮಾಡಿದ್ರೆ ಅದನ್ನು ಜಾರಿ ಮಾಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು ಹಾಗಾಗಿ ಕೇಂದ್ರ ಸರ್ಕಾರ ಇದರ ಬಗ್ಗೆ ಹೆದರಬೇಕು. ಇವತ್ತಿನ ಸಭೆಗೆ ಮುಂಚೆ ನಮಗೆ ಯಾಕೋ ಇವತ್ತು ಕೆಲಸ ಆಗಲ್ಲ ಅನಿಸಿತ್ತು. ಸಿಎಂ ಒಂದು ಗಡುವು ನೀಡಲೂ ಹಿಂದೆ ಮುಂದೆ ನೋಡ್ತಾ ಇದಾರೆ. ನೀತಿ ಸಂಹಿತೆ ಅಂತಾ ನಮಗೇ ಹೇಳ್ತಾರೆ. ಇದು ನೀತಿಸಂಹಿತೆಗೆ ಅಡ್ಡಿ ಬರಲ್ಲ. ಇದರಲ್ಲಿ ರಾಜಕಾರಣ ಮಾಡಬಾರದು. ನೀವೆಲ್ಲಾ ಸೇರಿ ಏನು ನಿರ್ಧಾರ ಮಾಡ್ತೀರೋ ಅದಕ್ಕೆ ನಾವು ಬದ್ದರಾಗಿ ಇರ್ತೇವೆ. ಬೆಳಗಾವಿ ಅಧಿವೇಶನ ಸಂಧರ್ಭದಲ್ಲಿ ನಾವು ಏನು ಅಂತ ಅವರಿಗೆ ಗೊತ್ತಾಗಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ತಿಳಿಸಿದ್ದಾರೆ.

ಇಂದು(ಶುಕ್ರವಾರ) ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೂಡಲ ಸಂಗಮದ ಪಂಚಮಸಾಲಿ ಪೀಠದ ಅಧ್ಯಕ್ಷ ಜಯಮೃತ್ಯುಂಜಯ ಸ್ವಾಮೀಜಿ, ಸೆ.೨೨ ರಂದು ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ವಕೀಲರಿಗೆ ಕೊಟ್ಟ ಮಾತಿನ ಪ್ರಕಾರ ಇವತ್ತು ಸಭೆ ಕರೆದಿದ್ದರು. ಪ್ರಥಮ ಆಡಳಿತಾತ್ಮಕ ಸಭೆ ಇವತ್ತು ನಡೆದಿದೆ ಒಂದು ನಿರ್ದಿಷ್ಟವಾದ ದಿನವನ್ನು ನಿಗದಿ ಪಡಿಸಲಿಲ್ಲ. ಹಿಂದಿನ ಸರ್ಕಾರ ಕೊಟ್ಟ 2d ಮೀಸಲಾತಿ ಆದ್ರೂ ನಮಗೆ ಕೊಡಲಿ. ಅಥವಾ 2a ಮೀಸಲಾತಿ ಆದ್ರೂ ಕೊಡಲಿ. ಯಾವುದೇ ದಿನಾಂಕ ಅಥವಾ ಭರವಸೆ ಕೊಡದೇ ಕೇವಲ ನೀತಿಸಂಹಿತೆ ನೆಪ ಹೇಳಿದ್ದಾರೆ. ಯಡಿಯೂರಪ್ಪ ಕೂಡಾ ಹೀಗೇ ಮಾಡಿದ್ರು, ಬೊಮ್ಮಾಯಿ ಸಹ ಹೀಗೆ ಸಮಯ ನಿಗದಿ ಮಾಡದೇ ಸುಮ್ಮನಿದ್ರು. ಇದೆಲ್ಲ ನೋಡಿ ಹೋರಾಟ ಒಂದೇ ಮಾರ್ಗ ಎಂದು ಸಲಹೆಗಳನ್ನು ನಮ್ಮ ವಕೀಲರು ನೀಡಿದ್ದಾರೆ ಎಂದು ಹೇಳಿದ್ದಾರೆ.

Tap to resize

Latest Videos

ಜಾತಿಗಣತಿಗೆ ನಮ್ಮ ವಿರೋಧವಿಲ್ಲ, ಕಾಂತರಾಜು ವರದಿಯ ಮೇಲೆ ಅನುಮಾನಗಳಿವೆ: ಕೂಡಲ ಶ್ರೀ

ಡಿಸೆಂಬರ್ 9 ರಂದು ಬೆಳಗಾವಿ ಅಧಿವೇಶನದ ಮೊದಲ ದಿನ ಸುವರ್ಣ ಸೌಧ ಮುತ್ತಿಗೆ ಹಾಕಲು ತೀರ್ಮಾನ ಮಾಡಿದ್ದೇವೆ. ಕನಿಷ್ಠ ಹತ್ತು ಸಾವಿರ ವಕೀಲರು ಸುವರ್ಣ ಸೌಧ ಮುತ್ತಿಗೆ ಹಾಕಲು ಸೇರಬೇಕು. ರೈತರು ಟ್ರಾಕ್ಟರ್ ಗಳಲ್ಲಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬರಬೇಕು. ಯಾವುದೇ ಟೆಂಟ್ ಹಾಕದೇ, ಸಮಾವೇಶ ಮಾಡದೇ ನೇರವಾಗಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಬೇಕು ಎಂದು ಕೂಡಲ ಶ್ರೀಗಳು ಕರೆ ಕೊಟ್ಟಿದ್ದಾರೆ. 

click me!