ಮಠಕ್ಕೆ ಕೊಟ್ಟ ಅನುದಾನ ಸರ್ಕಾರಕ್ಕೆ ವಾಪಸ್, ಜೊತೆಗೊಂದು ಸಿಎಂಗೆ ಬುದ್ಧಿ ಮಾತು

By Suvarna News  |  First Published Feb 3, 2021, 8:30 PM IST

 ಲಿಂಗಾಯತ ಪಂಚಮಸಾಲಿ ಮಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮೇಲೆ ಗರಂ ಆಗಿದ್ದಾರೆ. ಅಲ್ಲದೇ ಮಠಕ್ಕೆ ನೀಡಿದ್ದ ಅನುದಾನವನ್ನು ಸರ್ಕಾರ ವಾಪಸ್ ಕಳುಹಿಸುವುದಾಗಿ ಹೇಳಿದ್ದಾರೆ.


ಚಿತ್ರದುರ್ಗ, (ಫೆ.03): ಅನುದಾನ ಬಿಡುಗಡೆ ಮಾಡಿ ಮಠಗಳನ್ನು ಖರೀದಿಸಲು ಸಾಧ್ಯವಿಲ್ಲ. ಮೀಸಲಾತಿಗೆ ಪರ್ಯಾಯವಾಗಿ ನೀಡುವ ಅನುದಾನ ಮಠಕ್ಕೆ ಬೇಕಾಗಿಲ್ಲ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2 'ಎ' ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುತ್ತಿರುವ ಸ್ವಾಮೀಜಿ ಇಂದು (ಬುಧವಾರ) ನಗರದಲ್ಲಿ ಸುದ್ದಿಗಾರರೊಂದಿಗೆ ಮತನಾಡಿ,  ಮಠಕ್ಕೆ ಅನುದಾನ ನೀಡುವ ಪರಂಪರೆಯನ್ನು ಬಿ.ಎಸ್‌.ಯಡಿಯೂರಪ್ಪ ಹುಟ್ಟುಹಾಕಿದರು. ಅನುದಾನ ನೀಡುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿರಲಿಲ್ಲ. ಬ್ಲ್ಯಾಕ್‌ಮೇಲ್‌ ಕೂಡ ಮಾಡಿಲ್ಲ ಎಂದರು.

Latest Videos

undefined

ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ ಜಯಮೃತ್ಯುಂಜಯ ಸ್ವಾಮೀಜಿ..!

ಡಿಸೆಂಬರ್‌ ತಿಂಗಳಲ್ಲಿ ರಾಜ್ಯ ಸರ್ಕಾರ 25 ಲಕ್ಷ ರೂ. ಅನುದಾನವನ್ನು ಮಠಕ್ಕೆ ಬಿಡುಗಡೆ ಮಾಡಿತ್ತು. ಈ ಅನುದಾನ ಮರಳಿಸುವ ಪ್ರತಿಯನ್ನು ಮುಖ್ಯಮಂತ್ರಿ ಕಚೇರಿಗೆ ತಲುಪಿಸಲಾಗುವುದು. ಮರಳಿಸುವ ಅನುದಾನವನ್ನು ಮತ್ತೊಂದು ಮಠ ಅಥವಾ ದೇಗುಲಕ್ಕೆ ನೀಡಬೇಡಿ. ಸಂಕಷ್ಟದಲ್ಲಿರುವ ರೈತರಿಗೆ ಒದಗಿಸಿ ಎಂದು ಸಿಎಂಗೆ ಸಲಹೆ ಕೊಟ್ಟರು.

ಸರ್ಕಾರದ ಧೋರಣೆಯ ವಿರುದ್ಧ ಪಂಚಮಸಾಲಿ ಮಹಿಳಾ ಘಟಕದ ಸದಸ್ಯರು ಒನಕೆ ಹಿಡಿದು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಬುಧವಾರ ಬೆಳಿಗ್ಗೆ ಚಿತ್ರದುರ್ಗದಿಂದ ಹೊರಟು ಹಿರಿಯೂರು ತಾಲ್ಲೂಕಿನ ಬುರುಜನರೊ‍ಪ್ಪ ಗ್ರಾಮ ತಲುಪಿತು

click me!