ರಾಜ್ಯದಲ್ಲಿ ದುರ್ಬಲವಾದ ಎರಡು ಪಕ್ಷಗಳು ಒಂದಾಗಿವೆ; ಬಿಜೆಪಿ-ಜೆಡಿಎಸ್ ಮೈತ್ರಿಗೆ ಶೆಟ್ಟರ್‌ ವ್ಯಂಗ್ಯ

By Kannadaprabha News  |  First Published Sep 9, 2023, 4:39 AM IST

ಬಿಜೆಪಿ ಹಾಗೂ ಜೆಡಿಎಸ್‌ ಇಬ್ಬರೂ ಅಸಹಾಯಕರಾಗಿದ್ದು, ಈಗ ಎರಡೂ ಪಕ್ಷದವರು ಸೇರಿ ಮೈತ್ರಿಗೆ ಮುಂದಾಗಿದ್ದಾರೆಂದು ಮಾಜಿ ಮುಖ್ಯಮಂತ್ರಿ, ವಿಧಾನ ಪರಿ​ಷತ್‌ ಸದಸ್ಯ ಜಗದೀಶ್‌ ಶೆಟ್ಟರ್‌ ವ್ಯಂಗ್ಯವಾಡಿದರು.


ಹುಬ್ಬಳ್ಳಿ (ಸೆ.9) : ಬಿಜೆಪಿ ಹಾಗೂ ಜೆಡಿಎಸ್‌ ಇಬ್ಬರೂ ಅಸಹಾಯಕರಾಗಿದ್ದು, ಈಗ ಎರಡೂ ಪಕ್ಷದವರು ಸೇರಿ ಮೈತ್ರಿಗೆ ಮುಂದಾಗಿದ್ದಾರೆಂದು ಮಾಜಿ ಮುಖ್ಯಮಂತ್ರಿ, ವಿಧಾನ ಪರಿ​ಷತ್‌ ಸದಸ್ಯ ಜಗದೀಶ್‌ ಶೆಟ್ಟರ್‌ ವ್ಯಂಗ್ಯವಾಡಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವಾಗಲೂ ಅಸಹಾಯಕರು ಇಬ್ಬರು ಒಂದಾಗುತ್ತಾರೆ. ರಾಜ್ಯದಲ್ಲಿ ಜೆಡಿಎಸ್‌ ದುರ್ಬಲವಾಗಿದೆ. ಜೊತೆಗೆ ಬಿಜೆಪಿಯೂ ದುರ್ಲಲವಾಗಿದೆ. ಹಾಗಾಗಿ ಇಬ್ಬರಿಗೂ ಮೈತ್ರಿ ಅನಿವಾರ್ಯ. ಲೋಕಸಭಾ ಚುನಾವಣೆ ವೇಳೆ ದೊಡ್ಡಮಟ್ಟದಲ್ಲಿ ರಾಜಕೀಯ ಧ್ರುವೀಕರಣವಾಗಲಿದೆ. ಅನೇ​ಕರು ಬೇಜಾರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಪಕ್ಷಾಂತರ ಮತ್ತಷ್ಟುಹೆಚ್ಚಾಗಲಿದೆ ಎಂದು ಶೆಟ್ಟರ್‌ ಭವಿಷ್ಯ ನುಡಿದರು. ಅನುಕೂಲವಿದ್ದಾಗ ಮೈತ್ರಿ ಮಾಡಿಕೊಳ್ಳುವುದು, ಅನನುಕೂಲವಾದಾಗ ಮೈತ್ರಿಯಿಂದ ಹಿಂದೆ ಸರಿಯೋದು ಮಾಡಿದಾಗ ಜನರ ನಂಬಿಕೆ ಕಳೆ​ದು​ಕೊ​ಳ್ಳು​ತ್ತಾ​ರೆ. ಜೊತೆಗೆ ಆಯಾ ಪಕ್ಷಗಳ ವಿಶ್ವಾಸಾರ್ಹತೆಯೂ ಕಡಿಮೆಯಾಗುತ್ತದೆ ಎಂದರು.

Latest Videos

undefined

ಹಿಂದೂ ಧರ್ಮಕ್ಕೆ ಸೊಳ್ಳೆ, ನೊಣಗಳನ್ನೆಲ್ಲ ನುಂಗಿ ಜೀರ್ಣಸಿಕೊಳ್ಳುವ ಶಕ್ತಿ ಇದೆ: ಸಂಸದ ಪ್ರತಾಪ್ ಸಿಂಹ

ಜೆಡಿಎಸ್‌ ಬಿಜೆಪಿಯ ಬಿ ಟೀಂ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶೆಟ್ಟರ್‌, ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಮೈತ್ರಿ ವಿಚಾರದಲ್ಲಿ ಬಿಜೆಪಿ ಯಾವಾಗಲೂ ದ್ವಂದ್ವ ನಿಲುವು ಅನುಸರಿಸುತ್ತದೆ. ಮಹಾರಾಷ್ಟ್ರದಲ್ಲಿ ಅಜಿತ್‌ ಪವಾರ್‌ ಸಾವಿರಾರು ಕೋಟಿ ಹಗರಣ ಮಾಡಿದ್ದಾರೆ ಎಂದು ಹಿಂದೆ ಬಿಜೆಪಿಯವರೇ ಆರೋಪ ಮಾಡಿದರು. ಒಂದೇ ತಿಂಗಳಲ್ಲಿ ಅವರನ್ನು ಬಿಜೆಪಿಯ ಮೈತ್ರಿ ಸರ್ಕಾರದಲ್ಲಿ ಸೇರಿಸಿಕೊಂಡರು. ರಾಜಕೀಯ ಪಕ್ಷಕ್ಕೆ ಗಟ್ಟಿನಿರ್ಧಾರಗಳು ಇರಬೇಕು. ಇಂದು ಟೀಕೆ ಮಾಡೋದು, ನಾಳೆ ಮೈತ್ರಿ ಮಾಡಿಕೊಳ್ಳುವುದರಲ್ಲಿ ಏನರ್ಥವಿದೆ ಎಂದು ಕಿಡಿಕಾರಿದರು.

click me!