ಕೊರೋನಾ ಸೋಂಕಿತ ವಕೀಲರಿಗೆ ತಲಾ 50,000 ನೀಡಲು ನಿರ್ಧಾರ

By Kannadaprabha NewsFirst Published Aug 1, 2020, 10:40 AM IST
Highlights

ಎಲ್ಲ ವಕೀಲರಿಗೂ 1 ಲಕ್ಷ ವಿಮೆ: ಪರಿಷತ್‌ ಅಧ್ಯಕ್ಷ ಜೆ.ಎಂ.ಅನಿಲ್‌ ಕುಮಾರ್‌| ಕೇಂದ್ರ ಮತ್ತು ರಾಜ್ಯ ಸರ್ಕಾರ ಅನ್‌ಲಾಕ್‌ 3.0 ನಿಯಮ ಪ್ರಕಟಿಸಿದೆ. ಹೀಗಾಗಿ, ಕೂಡಲೇ ರಾಜ್ಯದ ಎಲ್ಲಾ ನ್ಯಾಯಾಲಯಗಳ ಕಾರ್ಯ ಕಲಾಪಗಳನ್ನು ಪುನರಾಂಭಿಸಲು ಕ್ರಮ ತೆಗೆದುಕೊಳ್ಳಬೇಕು| ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ವಕೀಲ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ 5 ಕೋಟಿ ಆರ್ಥಿಕ ನೆರವು ಮಂಜೂರು|

ಬೆಂಗಳೂರು(ಆ.01): ಕೋವಿಡ್‌ ಸೋಂಕಿತ ವಕೀಲರಿಗೆ ತಲಾ 50 ಸಾವಿರ ನೆರವು ನೀಡಲು ಕರ್ನಾಟಕ ವಕೀಲರ ಪರಿಷತ್ತು ತೀರ್ಮಾನಿಸಿದೆ. 

ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಪರಿಷತ್‌ ಅಧ್ಯಕ್ಷ ಜೆ.ಎಂ.ಅನಿಲ್‌ ಕುಮಾರ್‌, ಪರಿಷತ್ತಿನಲ್ಲಿ ನೋಂದಣಿಯಾಗಿರುವ ವಕೀಲರಿಗೆ ಧೈರ್ಯ ತುಂಬುವ ಪ್ರಯತ್ನದ ಭಾಗವಾಗಿ ಆರ್ಥಿಕ ನೆರವು ಘೋಷಿಸಲಾಗಿದೆ. ಕೊರೋನಾ ಸೋಂಕಿಗೆ ತುತ್ತಾದ ವಕೀಲರಿಗೆ ತಲಾ 50 ಸಾವಿರ ನೀಡಲಾಗುವುದು. ಜತೆಗೆ, ಉತ್ತಮ ಚಿಕಿತ್ಸೆ ಪಡೆಯಲು ನೆರವಾಗುವಂತೆ ನೋಂದಣಿಯಾಗಿರುವ ಪ್ರತಿಯೊಬ್ಬ ವಕೀಲರಿಗೂ ಒಂದು ಲಕ್ಷ ರು. ಮೊತ್ತದ ವಿಮಾ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲೇ ಮೊದಲು 10 ವರ್ಷದೊಳಗಿನ ಮಗು ಕೊರೋನಾ ಸೋಂಕಿಗೆ ಬಲಿ

ಅಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಅನ್‌ಲಾಕ್‌ 3.0 ನಿಯಮ ಪ್ರಕಟಿಸಿದೆ. ಹೀಗಾಗಿ, ಕೂಡಲೇ ರಾಜ್ಯದ ಎಲ್ಲಾ ನ್ಯಾಯಾಲಯಗಳ ಕಾರ್ಯ ಕಲಾಪಗಳನ್ನು ಪುನರಾಂಭಿಸಲು ಕ್ರಮ ತೆಗೆದುಕೊಳ್ಳಬೇಕು. ಮೊದಲಿನಂತೆ ಭೌತಿಕ ವಿಚಾರಣೆ ನಡೆಸುವಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಒತ್ತಾಯಿಸಲಾಗಿದೆ. ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ವಕೀಲ ಸಮುದಾಯಕ್ಕೆ ರಾಜ್ಯ ಸರ್ಕಾರ ಜು.30ರಂದು 5 ಕೋಟಿ ಆರ್ಥಿಕ ನೆರವು ಮಂಜೂರು ಮಾಡಿದೆ. ಅದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ವಕೀಲರ ಪರಿಷತ್ತು ಅಭಾರಿಯಾಗಿದೆ. ಆ ಹಣವನ್ನು ಸಂಕಷ್ಟದಲ್ಲಿರುವ ವಕೀಲ ಸಮುದಾಯಕ್ಕೆ ಪಾರದರ್ಶಕವಾಗಿ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
 

click me!