ಎಚ್‌ಡಿ ಕುಮಾರಸ್ವಾಮಿ ಕೇಂದ್ರ ಮಂತ್ರಿಯಾದ್ರೆ ರಾಜ್ಯಕ್ಕೂ, ದೇಶಕ್ಕೂ ಒಳ್ಳೆಯದಾಗುತ್ತೆ: ಕೆಎಸ್ ಈಶ್ವರಪ್ಪ

By Ravi Janekal  |  First Published Dec 19, 2023, 12:34 PM IST

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ. ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿ ಆಗ್ತಾರೆ. ಪ್ರಧಾನಿ ಸಚಿವ ಸಂಪುಟದಲ್ಲಿ ಎಚ್‌ಡಿಕೆ ಕೇಂದ್ರ ಮಂತ್ರಿಯಾದ್ರೆ ಕರ್ನಾಟಕಕ್ಕೆ, ದೇಶಕ್ಕೆ ತುಂಬಾ ಒಳ್ಳೆಯದಾಗುತ್ತೆ ಎಂದು ಬಿಜೆಪಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ತಿಳಿಸಿದರು.


ರಾಯಚೂರು (ಡಿ.19): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ. ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿ ಆಗ್ತಾರೆ. ಪ್ರಧಾನಿ ಸಚಿವ ಸಂಪುಟದಲ್ಲಿ ಎಚ್‌ಡಿಕೆ ಕೇಂದ್ರ ಮಂತ್ರಿಯಾದ್ರೆ ಕರ್ನಾಟಕಕ್ಕೆ, ದೇಶಕ್ಕೆ ತುಂಬಾ ಒಳ್ಳೆಯದಾಗುತ್ತೆ ಎಂದು ಬಿಜೆಪಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ತಿಳಿಸಿದರು.

ಇಂದು ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿ ದೇವೇಗೌಡರ ಮಗ.ಕರ್ನಾಟಕದಲ್ಲಿ ಇಬ್ಬರು ರಾಜಕಾರಣಿಗಳನ್ನ ನಾನು ನೋಡಿದ್ದೇನೆ. ಒಬ್ಬರು ದೇವೇಗೌಡರು, ಇನ್ನೊಬ್ಬರು ಯಡಿಯೂರಪ್ಪ. ಈ ಇಬ್ಬರು ನಾಯಕರು ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಪ್ರವಾಸ ಮಾಡಿದವರು. ಇನ್ನು ದೇವೇಗೌಡರ ಮಾರ್ಗದರ್ಶನದಲ್ಲಿ ಕುಮಾರಸ್ವಾಮಿ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಒಳ್ಳೆಯ ಆಡಳಿತ ‌ನೀಡಿದ್ದಾರೆ. ಆ ಆಡಳಿತದಿಂದ ‌ಪದೇ ಪದೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಸಾಧ್ಯವಾಯ್ತು ಎಂದರು.

Tap to resize

Latest Videos

undefined

ಬಿಜೆಪಿ ಜತೆ ದೋಸ್ತಿಗೆ ಕುಮಾರಸ್ವಾಮಿ ದೆಹಲಿಗೆ, ನಾಯ್ದು ಜೈಲಿಗೆ, ಬಿಎಸ್‌ವೈ ಕಡೆಗಣಿಸಿ ಬಿಎಲ್‌ ಸಂತೋಷ್‌ ಸಭೆ

ಜೆಡಿಎಸ್ ಈಗಾಗಲೇ ಎನ್‌ಡಿಎ ಜೊತೆಗೆ ಸೇರಿಕೊಂಡಿದೆ ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಪ್ರಧಾನಿ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾಗುವುದು ನಿಶ್ಚಿತ. ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಎಚ್‌ಡಿ ಕುಮಾರಸ್ವಾಮಿ ಕೇಂದ್ರ ಮಂತ್ರಿಯಾದರೆ ರಾಜ್ಯದ ರೈತರಿಗೆ ಅನುಕೂಲ ಆಗುತ್ತೆ ಎಂದರು.

ಸರ್ಕಾರ ಅಭದ್ರಗೊಳಿಸುವುದು ಯಾವ ಪುರುಷಾರ್ಥಕ್ಕೆ?: ಎಚ್‌ಡಿಕೆಗೆ ಎಚ್‌.ಕೆ. ಪಾಟೀಲ ಪ್ರಶ್ನೆ

click me!