ಬೆಳ್ಳಂಬೆಳಗ್ಗೆ ಬೆಂಗ್ಳೂರಲ್ಲಿ ಐಟಿ ದಾಳಿ: ಶಿಕ್ಷಣ ಸಂಸ್ಥೆಗಳಿಗೆ ಬಿಗ್‌ ಶಾಕ್‌..!

By Girish GoudarFirst Published Jun 23, 2022, 8:46 AM IST
Highlights

*   ಹಲವು ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳ ದಾಳಿ
*  ಆದಾಯ ತೆರಿಗೆಯಲ್ಲಿ ವಂಚನೆ ಆರೋಪದ ಹಿನ್ನೆಲೆಯಲ್ಲಿ ದಾಳಿ 
*  ದಾಖಲೆ ಪರಿಶೀಲನೆ ನಡೆಸುತ್ತಿರುವ ಐಟಿ ಅಧಿಕಾರಿಗಳು 
 

ಬೆಂಗಳೂರು(ಜೂ.23):  ಇಂದು(ಜು.23, 2022) ಬೆಳ್ಳಂಬೆಳ್ಳಗೆ ನಗರದ ಹಲವು ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹುಣಸಮಾರಹಳ್ಳಿಯ ಕೃಷ್ಣದೇವರಾಯ ಇನ್ಸ್ಟಿಟ್ಯೂಷನ್ ಮೇಲೆ ಐಟಿ ದಾಳಿ ನಡೆಸಲಾಗಿದೆ ಅಂತ ಮಾಹಿತಿ ಲಭ್ಯವಾಗಿದೆ. 

ಆದಾಯ ತೆರಿಗೆಯಲ್ಲಿ (Income Tax) ವಂಚನೆ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಇದರ ಜತೆಗೆ ರಿಯಲ್ ಎಸ್ಟೇಟ್ (Real Estate), ಬಿಲ್ಡರ್‌ಗಳ ಮನೆ ಮೇಲೂ ದಾಳಿ ನಡೆಸಲಾಗಿದೆ ಅಂತ ತಿಳಿದು ಬಂದಿದೆ. 

ಎಂಬೆಸ್ಸಿ ಗ್ರೂಪ್‌ ಮೇಲೆ 30ಕ್ಕೂ ಹೆಚ್ಚು ಕಡೆ ಐಟಿ ದಾಳಿ

ಆದಾಯ ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸರ್ಚ್ ವಾರೆಂಟ್ ಪಡೆದು ಇಂದು ಬೆಳಿಗ್ಗೆ ಐಟಿ ದಾಳಿ ನಡೆಸಿದ್ದಾರೆ. 20 ಕ್ಕೂ ಹೆಚ್ಚು ಕಡೆ 250 ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ. ದಾಳಿ ನಡೆಸಿ ಅಧಿಕಾರಿಗಳು ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. 

ಅಷ್ಟಕ್ಕೂ ಈ ಐಟಿ ದಾಳಿಗೆ ಕಾರಣವೇನು?
ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿಗೆ ಪ್ರಮುಖವಾಗಿ ಮೂರು ವಿಚಾರಗಳು ಕಾರಣವಾಗಿವೆ.

1)ವಿದೇಶಿ ವಿದ್ಯಾರ್ಥಿಗಳಿಂದ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ‌ ಶುಲ್ಕ ಸಂಗ್ರಹ ಆರೋಪ.
2)ಸರ್ಕಾರದ ನಿಯಮಾವಳಿಗಳನ್ನ ಮೀರಿ ಪೇಮೆಂಟ್ ಕೋಟಾ ಸೀಟ್ ಗಳನ್ನ ಮ್ಯಾನೇಜ್ ಮೆಂಟ್ ಗಳು ಬ್ಲಾಂಕಿಂಗ್ ಮಾಡಿ ಹೆಚ್ಚಿಸಿರುವ ಆರೋಪ.
3)ಈ ಮೂಲಕ ಅಕ್ರಮವಾಗಿ ಸಂಗ್ರಹಿಸಲಾದ ಹಣದ ಮಾಹಿತಿ ಐಟಿ ಗೆ ಒದಗಿಸದೆ ತೆರಿಗೆ ವಂಚನೆ ಆರೋಪ

ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ ಐಟಿ ಅಧಿಕಾರಿಗಳ ತಂಡ. ಸೆರ್ಚ್ ವಾರೆಂಟ್ ಪಡೆದು ಮುಂಜಾನೆಯೇ ಐಟಿ ದಾಳಿ ನಡೆದಿದೆ. 20 ಕ್ಕೂ ಹೆಚ್ಚು ಕಡೆ 250 ಕ್ಕೂ ಹೆಚ್ಚು ಅಧಿಕಾರಿಗಳಿಂದ ಈ ದಾಳಿ ನಡೆಯುತ್ತಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ಐಟಿ ಅಧಿಕಾರಿಗಳು ನಿರಂತರಾಗಿದ್ದಾರೆ. 

click me!