ಐಟಿ ದಾಳಿ ರಾಜಕೀಯ ಪ್ರೇರಿತ ಅಲ್ಲ: ಪರಂ ಹೇಳಿಕೆಯಿಂದ ಕೈ ವಾದಕ್ಕೆ ಹಿನ್ನಡೆ!

By Web DeskFirst Published Oct 13, 2019, 8:06 AM IST
Highlights

ಐಟಿ ದಾಳಿ ರಾಜಕೀಯ ಪ್ರೇರಿತ ಎನ್ನೋದಿಲ್ಲ: ಪರಮೇಶ್ವರ್‌| ತೆರಿಗೆ ಅಧಿಕಾರಿಗಳ ಎಲ್ಲ ಪ್ರಶ್ನೆಗೆ ನಾನು, ಆನಂದ್‌ ಉತ್ತರಿಸುತ್ತೇವೆ| ನಾಡಿದ್ದು ವಿಚಾರಣೆಗೆ ಹೋಗುವೆ| ನನ್ನ ಮನೆಯಲ್ಲಿ 400 ಕೋಟಿ ಸಿಕ್ಕಿಲ್ಲ

ಬೆಂಗಳೂರು[ಅ.13]: ಆದಾಯ ತೆರಿಗೆ ದಾಳಿಗೆ ರಾಜಕೀಯ ಬಣ್ಣವನ್ನು ನಾನು ಕಟ್ಟುವುದಿಲ್ಲ. ಐಟಿ ವಿಚಾರಣೆಗೆ ಸಹಕಾರ ನೀಡುತ್ತೇನೆ. ಅವರು ಸಂಗ್ರಹಿಸಿರುವ ದಾಖಲೆಗಳಿಗೆ ಸಮರ್ಪಕ ಸ್ಪಷ್ಟನೆ ನೀಡುತ್ತೇನೆ. ಮಂಗಳವಾರ ವಿಚಾರಣೆಗೆ ಕರೆದಿದ್ದು, ಅದಕ್ಕೆ ಹಾಜರಾಗುತ್ತೇನೆ.

ಹೀಗಂತ ಹೇಳುವ ಮೂಲಕ ಮಾಜಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಅವರು ಐಟಿ ದಾಳಿ ರಾಜಕೀಯ ಪ್ರೇರಿತ ಎಂಬ ಕಾಂಗ್ರೆಸ್‌ ಪಕ್ಷ ನಿಲುವಿನಿಂದ ಅಂತರ ಕಾಯ್ದುಕೊಂಡಿದ್ದಾರೆ.

ಐಟಿ ದಾಳಿ ಕುರಿತು ಶನಿವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಕಾಲೇಜು ವಿದ್ಯಾರ್ಥಿಗಳು ನೀಡಿದ ದೂರಿನ ಅನ್ವಯ ದಾಳಿ ನಡೆಸಿರುವುದಾಗಿ ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಸಿದ್ದಾಥ್‌ರ್‍ ಕಾಲೇಜಿನ ಉಸ್ತುವಾರಿಯನ್ನು ಸಹೋದರನ ಮಗ ಆನಂದ್‌ ನೋಡಿಕೊಳ್ಳುತ್ತಿದ್ದಾನೆ. ಆತನೂ ಬುದ್ಧಿವಂತನಿದ್ದು, ಕಾಲೇಜಿಗೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತಾನೆ. ಹೀಗಾಗಿ, ನಾನು ಈ ದಾಳಿ ರಾಜಕೀಯ ಪ್ರೇರಿತ ಎಂಬ ಬಣ್ಣ ಕಟ್ಟಲು ಬಯಸುವುದಿಲ್ಲ ಎಂದರು.

ಐಟಿ ದಾಳಿ: ಮಾಜಿ ಡಿಸಿಎಂ ಕಾಲೇಜಿನಲ್ಲಿ ಹುಂಡಿ ಹಣ..!

ಕಳೆದ 30 ವರ್ಷಗಳಿಂದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ವಿಚಾರದಲ್ಲಿ ಭಾಗಿಯಾಗಿರಲಿಲ್ಲ. ನಮ್ಮ ಸಹೋದರ ಮೃತಪಟ್ಟನಂತರ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಆದಾಯ ತೆರಿಗೆ ಇಲಾಖೆ ಅಧಿಕಾರಿ (ಐಟಿ)ಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಮಂಗಳವಾರ ವಿಚಾರಣೆಗೆ ಬರುವಂತೆ ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ವಿಚಾರಣೆಗೆ ಹಾಜರಾಗುತ್ತೇನೆ ಎಂದರು.

ಐಟಿ ಅಧಿಕಾರಿಗಳು ಕಳೆದ ಎರಡು ದಿನಗಳ ಕಾಲ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಸಿಕ್ಕ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಪ್ರಶ್ನೆಗಳನ್ನು ಕೇಳಿದ್ದು, ಎಲ್ಲ ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರಿಸಿದ್ದೇನೆ. ವೈದ್ಯಕೀಯ ಸೀಟ್‌ ಬ್ಲಾಕ್‌ ಮಾಡುವಲ್ಲಿ ಅಕ್ರಮ ನಡೆದಿದೆ ಎಂದು ಐಟಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂಬುದರ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಎಲ್ಲ ಅಂಶಗಳನ್ನು ಐಟಿ ಆಧಿಕಾರಿಗಳು ಪರಿಶೀಲನೆ ನಡೆಸಲಿ ಎಂದರು.

ಅಕ್ಟೋಬರ್‌ 10ರಂದು ಬೆಳಗ್ಗೆ ಐಟಿ ಅಧಿಕಾರಿಗಳಯ ಸಚ್‌ರ್‍ ವಾರಂಟ್‌ನೊಂದಿಗೆ ಮನೆಗೆ ಬಂದಿದ್ದಾರೆ. ಅದೇ ಸಂದರ್ಭದಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಕೆರೆಯೊಂದಕ್ಕೆ ಗಂಗಾ ಪೂಜೆ ನೆರವೇರಿಸಲು ತೆರಳಿದ್ದೆ. ಅಲ್ಲಿನ ಐಬಿಗೆ ಬರುತ್ತಿದ್ದಂತೆ ದಾಳಿ ಸಂಬಂಧ ಮಾಹಿತಿ ಬಂತು. ನಮ್ಮ ಶಿಕ್ಷಣ ಸಂಸ್ಥೆಗೆ ತುಂಬಾ ವಾಹನಗಳು ಬಂದಿವೆ ಎಂದು ಸಿಬ್ಬಂದಿ ತಿಳಿಸಿದ್ದರು. ಸಚ್‌ರ್‍ ವಾರಂಟ್‌ನಲ್ಲಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಉಲ್ಲೇಖಿಸಿತ್ತು. ನಾನು ತೊಂದರೆ ಇಲ್ಲ ಮಾಡಿಕೊಳ್ಳಿ ಎಂದು ತಿಳಿಸಿದ್ದೆ. ಜೊತೆಗೆ ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದೇನೆ ಎಂದರು.

ತುಮಕೂರು: ಮಾಜಿ ಡಿಸಿಎಂ ಪರಮೇಶ್ವರ್ ಸಹೋದರನ ಪುತ್ರನಿಗೆ ಸಮನ್ಸ್‌..!

ಮನೆಯಲ್ಲಿ 400 ಕೋಟಿ ಸಿಕ್ಕಿಲ್ಲ

ದಾಳಿಯ ಮೊದಲ ದಿನ ನಮ್ಮ ಮನೆ ಸಂಪೂರ್ಣ ಪರಿಶೀಲನೆ ನಡೆಸಿದರು. ಎರಡನೇ ದಿನ ಅದಕ್ಕೆ ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಪೂರಕವಾದ ಉತ್ತರವನ್ನು ನಾನು ನೀಡಿದ್ದೇನೆ. ಅಲ್ಲದೆ, ದಾಳಿ ನಡೆಸಿರುವ ಸಂಬಂಧ ನನ್ನಿಂದ ಪಂಚನಾಮೆಗೆ ಐಟಿ ಅಧಿಕಾರಿಗಳು ಸಹಿ ಪಡೆದುಕೊಂಡಿದ್ದಾರೆ. ನನ್ನ ಮನೆಯಲ್ಲಿ 400 ಕೋಟಿ ರು. ದೊರಕಿದೆ ಎಂದೆಲ್ಲ ಮಾಧ್ಯಮಗಳು ವರದಿ ಮಾಡಿವೆ. ಅಷ್ಟುಹಣವನ್ನು ನನ್ನ ಮನೆಯಲ್ಲಿ ಸಂಗ್ರಹಿಸಲು ಸಾಧ್ಯವಿಲ್ಲ. ಇದೆಲ್ಲ ವದಂತಿ. ಇಷ್ಟಕ್ಕೂ ನನ್ನ ಮನೆಯಲ್ಲಿ ಸಿಕ್ಕಿರುವ ಎಲ್ಲ ಹಣದ ಕುರಿತು ಹಂತ ಹಂತವಾಗಿ ಮಾಹಿತಿ ಲಭ್ಯವಾಗಲಿದೆ ಎಂದು ಅವರು ಹೇಳಿದರು.

click me!