ಇಸ್ರೇಲ್‌ ಪ್ಯಾಲೆಸ್ತೀನ್ ಸಂಘರ್ಷ: ಯುದ್ಧಭೂಮಿಯಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಗೆ ದೇವರ ಮೊರೆ ಹೋದ ಗ್ರಾಮಸ್ಥರು

By Ravi Janekal  |  First Published Oct 22, 2023, 11:48 AM IST

ಇಸ್ರೇಲ್‌ ಪ್ಯಾಲೆಸ್ತೀನ್ ನಡುವೆ ಯುದ್ದ ಮುಂದುವರಿದಿದೆ. ಇಸ್ರೇಲ್ ಗಾಜಾಪಟ್ಟಿ ಮೇಲೆ ಭೂದಾಳಿ ನಡೆಸಲು ಸಿದ್ಧವಾಗಿದೆ. ಈ ನಡುವೆ ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಗಾಗಿ ದೇವರ ಮೊರೆ ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದಲ್ಲಿ ನಡೆದಿದೆ.


ದಕ್ಷಿಣ ಕನ್ನಡ (ಅ.22): ಇಸ್ರೇಲ್‌ ಪ್ಯಾಲೆಸ್ತೀನ್ ನಡುವೆ ಯುದ್ದ ಮುಂದುವರಿದಿದೆ. ಇಸ್ರೇಲ್ ಗಾಜಾಪಟ್ಟಿ ಮೇಲೆ ಭೂದಾಳಿ ನಡೆಸಲು ಸಿದ್ಧವಾಗಿದೆ. ಈ ನಡುವೆ ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಗಾಗಿ ದೇವರ ಮೊರೆ ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದಲ್ಲಿ ನಡೆದಿದೆ.

ಮರೋಡಿ ಗ್ರಾಮದ ನೂರಾರು ಮಂದಿ ಇಸ್ರೇಲಿನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಇದೀಗ ಅಲ್ಲಿ ಭೀಕರ ಯುದ್ಧ ನಡೆಯುತ್ತಿದ್ದ ವಾಪಾಸ್ ಮರಳಲು ಸಾಧ್ಯವಾಗದಂತಾಗಿದೆ. ಹೀಗಾಗಿ ಕ್ಷೇಮವಾಗಿ ಊರಿಗೆ ಬರಲೆಂದು ಗ್ರಾಮಸ್ಥರಿಂದ ಸಾಮೂಹಿಕ ಪ್ರಾರ್ಥನೆ.ಮರೋಡಿ ಶ್ರೀಉಮಾಮಹೇಶ್ವರ ದೇವಸ್ಥಾನದಲ್ಲಿ ದೀಪ ಹಚ್ಚಿ ಮರೋಡಿ ನಾರಾಯಣ ಪೂಜಾರಿ ಕುಟುಂಬಸ್ಥರಿಂದ ಪೂಜೆ ಪುನಸ್ಕಾರ
 ನವರಾತ್ರಿ ಹಿನ್ನೆಲೆ ವಿಶೇಷ ರಂಗಪೂಜೆ ಸಲ್ಲಿಸುವ ಮೂಲಕ  ಇಸ್ರೇಲ್ ನ ಶಾಂತಿ ಹಾಗೂ ಭಾರತೀಯರ ಸುರಕ್ಷತೆಗಾಗಿ ಪ್ರಾರ್ಥಿಸಿದ ಗ್ರಾಮಸ್ಥರು.

Tap to resize

Latest Videos

ಗಾಜಾ - ಈಜಿಪ್ಟ್‌ ಗಡಿ ಓಪನ್‌: ಆಹಾರ, ನೀರು, ಔಷಧ ಇಲ್ಲದೆ ಪರದಾಡುತ್ತಿದ್ದ ಗಾಜಾ ನಿವಾಸಿಗಳು ನಿರಾಳ

ನಮ್ಮೂರಿನ ಅನೇಕ ಜನರು ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಇಸ್ರೇಲ್ ನಲ್ಲಿದ್ದುಕೊಂಡು ತಾಯ್ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ.ಅಲ್ಲಿ ದುಡಿದು ನಮ್ಮ ದೇಶದ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಹೀಗಾಗಿ ಆ ದೇಶದಲ್ಲಿ ಯುದ್ಧ ನಿಂತರೆ ನಮ್ಮ ದೇಶಕ್ಕೂ ಒಳ್ಳೇದು, ನಮ್ಮ ಊರಿಗೂ ಒಳ್ಳೇದು. ನಾವೂ ಇಸ್ರೇಲ್ ನಲ್ಲಿ ದುಡಿದಿದ್ದೇವೆ, ನಮಗೂ ಆ ದೇಶದ ಮೇಲೆ ಅಭಿಮಾನವಿದೆ. ಆ ಕಾರಣಕ್ಕೋಸ್ಕರ ಇಸ್ರೇಲ್ ನಲ್ಲಿ ಶಾಂತಿ ನೆಲೆಸಲು ಪೂಜೆಯ ಮೂಲಕ ಪ್ರಾರ್ಥಿಸಿದ್ದೇವೆ ಇಸ್ರೇಲ್ ಪ್ಯಾಲೆಸ್ತೀನ್ ನಡುವೆ ಯುದ್ಧ ನಿಲ್ಲಬೇಕು. ಸಾವು ನೋವು ಕಡಿಮೆ ಆಗಬೇಕು. ಯುದ್ಧದಲ್ಲಿ ಅಮಾಯಕರು ಬಲಿಯಾಗೋದು ನಿಲ್ಲಬೇಕು ಎಂದು ಊರವರು ಸೇರಿ ರಂಗ ಪೂಜೆ ಮಾಡಿದ್ದೇವೆ. ಇಸ್ರೇಲ್ ಗಾಗಿ ವಿಶೇಷ ಪೂಜೆಯ ಕುರಿತು ಮರೋಡಿ ನಿವಾಸಿ ನಾರಾಯಣ ಪೂಜಾರಿ ಉಚ್ಚೂರು ಪ್ರತಿಕ್ರಿಯಿಸಿದರು.

 

ಇಸ್ರೇಲ್- ಹಮಾಸ್‌ ಸಂಘರ್ಷ: ಭೂದಾಳಿಗೆ ಇಸ್ರೇಲ್‌ ಮೀನಮೇಷ ಏಕೆ?

click me!