ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿಗೆ ಅರ್ಜಿ : ಮುಂದಿನ ನಡೆ ಏನು..?

By Suvarna News  |  First Published Sep 16, 2021, 2:11 PM IST
  • ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. 
  • ರಾಜ್ಯದ ವಿವಿಧ  ವಿಭಾಗಗಳಲ್ಲಿ  ಸೇವೆ ಸಲ್ಲಿಸಿದ್ದು,  ಸದ್ಯ ರೈಲ್ವೇ ವಿಭಾಗದ ಎಡಿಜಿಪಿ ಆಗಿರುವ ಭಾಸ್ಕರ್ ರಾವ್

ಬೆಂಗಳೂರು (ಸೆ.16) : ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. 

ರಾಜ್ಯದ ವಿವಿಧ  ವಿಭಾಗಗಳಲ್ಲಿ  ಸೇವೆ ಸಲ್ಲಿಸಿದ್ದು,  ಸದ್ಯ ರೈಲ್ವೇ ವಿಭಾಗದ ಎಡಿಜಿಪಿ ಆಗಿರುವ ಭಾಸ್ಕರ್ ರಾವ್  ಇಂದು ಬೆಳಗ್ಗೆ ನಿವೃತ್ತಿ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ.  

Tap to resize

Latest Videos

ಡಿಜಿಪಿ ಮತ್ತು ಐಜಿಪಿ ಪ್ರವೀಣ್ ಸೂದ್ ಮತ್ತು ಸರ್ಕಾರಕ್ಕೆ ಪತ್ರ  ಬರೆದಿರುವ ತಮಗೆ ಅವಧಿಗೂ ಮುನ್ನ ನಿವೃತ್ತಿ ನೀಡಬೇಕೆಂದು ಕೋರಿದ್ದಾರೆ. ಭಾಸ್ಕರ್ ರಾವ್ ಅವರ ಮುಂದಿನ ನಡೆ ಇನ್ನೂ ನಿಗೂಢವಾಗಿದೆ.  

ಇಬ್ಬರು ಐಪಿಎಸ್ ಅಧಿಕಾರಿಗಳ ಬಿಗ್ ಫೈಟ್: ಭಾಸ್ಕರ್ ರಾವ್ ಫೋನ್ ಟ್ಯಾಪ್‌ಗೆ ಟ್ವಿಸ್ಟ್

ಕೆಲ ದಿನದಿಂದ ಸಾಕಷ್ಟು ಹೋರಾಟ ನಡೆಸಿದ್ದ ಭಾಸ್ಕರ್ ರಾವ್ ಅವರು ಮತ್ತೋರ್ವ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಜೊತೆಗಿನ ಅಸಮಾಧಾನವು ಸಾಕಷ್ಟು ಸುದ್ದಿಯಾಗಿತ್ತು. ಕಳೆದ 15 ದಿನಗಳಿಂದ ಹೋರಾಟ ನಡೆದಿತ್ತು.

ಇದೀಗ ಸ್ವಯಂ ನಿವೃತ್ತಿಗೆ ಭಾಸ್ಕರ್ ರಾವ್ ಅರ್ಜಿ ಸಲ್ಲಿಸಿದ್ದು,  ಮುಂದಿನ ದಿನಗಳಲ್ಲಿ ರಾಜಕೀಯ ಕ್ಕೆ ಎಂಟ್ರಿ ಕೊಡಲಿದ್ದಾರಾ ಎನ್ನುವ ಪ್ರಶ್ನೆಯೂ ಮೂಡಿದೆ.    

ಭಾಸ್ಕರ್ ರಾವ್ ಬಗ್ಗೆ ಒಂದಷ್ಟು : ಭಾಸ್ಕರ್ ರಾವ್  1954 ರಲ್ಲಿ ಜನಿಸಿದ್ದು, ಅವರು 1990ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಬೆಂಗಳೂರು ಮಹಾನಗರ ಕಮಿಷನರ್ ಆಗಿ 2019-2020ರವರೆಗೆ ಸೇವೆ ಸಲ್ಲಿಸಿದ್ದರು. ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ ಪಡೆಯಲ್ಲಿ ಎಡಿಜಿಪಿಯಾಗಿ ಸೇವೆ ಸಲ್ಲಿಸಿದ್ದು ಬಳಿಕ ಇಂಟರ್ನಲ್ ಸೆಕ್ಯೂರಿಟಿ ಡಿವಿಷನ್ನಲ್ಲೂ ಸೇವೆ ಸಲ್ಲಿಸಿದರು. 

click me!