IPL Final match: ಶಾಸಕರ ಟಿಕೆಟ್‌ಗೂ ಐಪಿಎಲ್‌ ಸ್ಥಳಾಂತರಕ್ಕೂ ನಂಟಿಲ್ಲ; ದೊಡ್ಡ ಸ್ಟೇಡಿಯಂ ಇದೆ ಅಂತ ಗುಜರಾತಿಗೆ ಶಿಫ್ಟ್‌: ಡಿಕೆಶಿ

Kannadaprabha News   | Kannada Prabha
Published : May 07, 2026, 07:39 AM IST
DK Shivakumar on IPL tickets

ಸಾರಾಂಶ

ಶಾಸಕರಿಗೆ ಐಪಿಎಲ್‌ ಉಚಿತ ಟಿಕೆಟ್‌ ವಿತರಣೆಗೂ, ಐಪಿಎಲ್‌ ಅಂತಿಮ ಪಂದ್ಯ ಬೆಂಗಳೂರಿನಿಂದ ಸ್ಥಳಾಂತರಕ್ಕೂ ಸಂಬಂಧವಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಅಹಮದಾಬಾದ್‌ನಲ್ಲಿ ದೊಡ್ಡ ಕ್ರೀಡಾಂಗಣವಿದ್ದು, ಹೆಚ್ಚು ಜನ ಸೇರುತ್ತಾರೆಂಬ ಕಾರಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸ್ಪಷ್ಟನೆ.

ಬೆಂಗಳೂರು (ಮೇ.7): ‘ಶಾಸಕರಿಗೆ ಐಪಿಎಲ್‌ ಉಚಿತ ಟಿಕೆಟ್‌ ವಿತರಣೆಗೂ ಐಪಿಎಲ್‌ ಅಂತಿಮ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ. ಅಹಮದಾಬಾದ್‌ನಲ್ಲಿ ದೊಡ್ಡ ಕ್ರೀಡಾಂಗಣವಿದ್ದು, ಹೆಚ್ಚು ಜನ ಸೇರುತ್ತಾರೆಂಬ ಉದ್ದೇಶದಿಂದ ಸ್ಥಳಾಂತರಿಸಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಹಮದಾಬಾದ್‌ನಲ್ಲಿ ಹೆಚ್ಚು ಜನ ಸೇರುತ್ತಾರೆ ಎಂಬ ಉದ್ದೇಶದಿಂದ ಐಪಿಎಲ್ ಫೈನಲ್ ಪಂದ್ಯವನ್ನು ಸ್ಥಳಾಂತರ ಮಾಡಿರಬೇಕು. ಶಾಸಕರಿಗೆ ಟಿಕೆಟ್ ವಿತರಣೆಗೂ ಅಂತಿಮ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ ಎಂದರು.

ಶಾಸಕರಿಗೆ ಐಪಿಎಲ್ ಟಿಕೆಟ್ ಬೇಡಿಕೆ ಹಿನ್ನೆಲೆಯಲ್ಲೇ ಸ್ಥಳಾಂತರಿಸಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಬೇರೆ ಕಡೆ ಶೇ. 50ರಷ್ಟು ಟಿಕೆಟ್‌ ಮೀಸಲಿರುತ್ತದೆ’ ಎಂದು ಹೇಳಿದರು.

ಟಿಕೆಟ್ ವಿಚಾರಕ್ಕೆ ಸ್ಥಳಾಂತರ ನಿರ್ಧಾರ ಮಾಡಿದ್ದೇವೆ ಎಂದು ಬಿಸಿಸಿಐ ಹೇಳಿಕೆ ನೀಡಿದೆ ಎಂಬ ಬಗ್ಗೆ ಮಾತನಾಡಿ, ‘ಅವರು ಈ ರೀತಿ ಹೇಳಿಕೆ ನೀಡಲಿ, ನಾನು ಅದಕ್ಕೆ ಸರಿಯಾದ ಉತ್ತರ ಕೊಡುತ್ತೇನೆ’ ಎಂದರು. 

‘ಶಾಸಕರಿಗೆ ಐಪಿಎಲ್‌ ಉಚಿತ ಟಿಕೆಟ್‌ ವಿತರಣೆಗೂ ಐಪಿಎಲ್‌ ಅಂತಿಮ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ. ಅಹಮದಾಬಾದ್‌ನಲ್ಲಿ ದೊಡ್ಡ ಕ್ರೀಡಾಂಗಣವಿದ್ದು, ಹೆಚ್ಚು ಜನ ಸೇರುತ್ತಾರೆಂಬ ಉದ್ದೇಶದಿಂದ ಸ್ಥಳಾಂತರಿಸಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಿಯು ಪರೀಕ್ಷಾ ವೆಚ್ಚ ಪಾವತಿಗೆ ಸರ್ಕಾರ 81.20 ಕೋಟಿ ರು. ಬಿಡುಗಡೆ | ಪ್ರೌಢಶಾಲಾ ಶಿಕ್ಷಕರ ಬಡ್ತಿಗಾಗಿ ಅರ್ಹತಾ ಪರೀಕ್ಷೆಯ ವೇಳಾಪಟ್ಟಿ ಪ್ರಕಟ
Karnataka News Live: IPL Final match - ಶಾಸಕರ ಟಿಕೆಟ್‌ಗೂ ಐಪಿಎಲ್‌ ಸ್ಥಳಾಂತರಕ್ಕೂ ನಂಟಿಲ್ಲ; ದೊಡ್ಡ ಸ್ಟೇಡಿಯಂ ಇದೆ ಅಂತ ಗುಜರಾತಿಗೆ ಶಿಫ್ಟ್‌ - ಡಿಕೆಶಿ