ಕಾಂಗ್ರೆಸ್‌ನ ಘಟಾನುಘಟಿ ನಾಯಕರುಗಳೇ ಈ ಹಗರಣದ ಹಿಂದಿದ್ದಾರೆ ಎಂಬುದು ಮಣಿಪ್ಪಾಡಿ ಹಾಗೂ ಉಪ ಲೋಕಾಯುಕ್ತರ ತನಿಖಾ ವರದಿಗಳೆರಡರಲ್ಲಿಯೂ ನಮೂದಾಗಿದೆ. ಶೀಘ್ರದಲ್ಲೇ ಈ ಬಗ್ಗೆ ತನಿಖೆಗೆ ಆದೇಶ ನೀಡಲಾಗುವುದು: ಸಿಎಂ ಬಸವರಾಜ ಬೊಮ್ಮಾಯಿ
ಕಲಬುರಗಿ(ಅ.20): ರಾಜ್ಯದಲ್ಲಿರುವ ಸಾವಿರಾರು ಕೋಟಿ ರು. ಮೌಲ್ಯದ ವಕ್ಫ್ ಆಸ್ತಿಯನ್ನು ಕಾಂಗ್ರೆಸ್ ನಾಯಕರು ನುಂಗಿ ನೀರು ಕುಡಿದಿದ್ದಾರೆ. ಈ ಕುರಿತಾದ ಅನ್ವರ್ ಮಣಿಪ್ಪಾಡಿ ಹಾಗೂ ಉಪ ಲೋಕಾಯುಕ್ತರ ತನಿಖಾ ವರದಿಗಳೆರಡೂ ಸರ್ಕಾರದ ಮುಂದಿವೆ. ಶೀಘ್ರದಲ್ಲೇ ಈ ಹಗರಣದ ದೊಡ್ಡ ಮಟ್ಟದ ತನಿಖೆಗೆ ಆದೇಶ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಮಹಾಗಾಂವ್‌ನಲ್ಲಿ ಬುಧವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಘಟಾನುಘಟಿ ನಾಯಕರುಗಳೇ ಈ ಹಗರಣದ ಹಿಂದಿದ್ದಾರೆ ಎಂಬುದು ಮಣಿಪ್ಪಾಡಿ ಹಾಗೂ ಉಪ ಲೋಕಾಯುಕ್ತರ ತನಿಖಾ ವರದಿಗಳೆರಡರಲ್ಲಿಯೂ ನಮೂದಾಗಿದೆ. ಶೀಘ್ರದಲ್ಲೇ ಈ ಬಗ್ಗೆ ತನಿಖೆಗೆ ಆದೇಶ ನೀಡಲಾಗುವುದು. ಹಿಂದುಳಿದ ವರ್ಗ, ಎಸ್ಸಿ, ಎಸ್ಟಿಗೆ ದ್ರೋಹ ಮಾಡಿದಂತೆ ಅಲ್ಪಸಂಖ್ಯಾತರಿಗೂ ಕಾಂಗ್ರೆಸ್‌ನವರು ದ್ರೋಹ ಎಸಗಿದ್ದಾರೆ. ದೊಡ್ಡ, ದೊಡ್ಡ ನಾಯಕರೇ ವಕ್ಫ್ ಆಸ್ತಿಯನ್ನು ತಮ್ಮ ಹೆಸರಿಗೆ, ತಮ್ಮ ಸಹೋದರರ ಹೆಸರಿಗೆ ಬರೆದುಕೊಂಡಿದ್ದಾರೆ. ಅಲ್ಪಸಂಖ್ಯಾತರ ಬಲದಿಂದ ಕಾಂಗ್ರೆಸ್ ಪಕ್ಷ ಬೀಗುತ್ತಿದೆ. ವಕ್ಫ್ ಹಗರಣದ ತನಿಖೆ ನಡೆದರೆ ಕೈ ಹಿಡಿದಿರುವ ಅಲ್ಪಸಂಖ್ಯಾತ ಸಮುದಾಯ ಸಹ ಆ ಪಕ್ಷದಿಂದ ದೂರವಾಗೋದು ನಿಶ್ಚಿತ ಎಂದು ಹೇಳಿದರು.
undefined
ಕಲ್ಯಾಣ ನಾಡಿನ ಬಗ್ಗೆ ಬಿಜೆಪಿ ಜಾಣ ಕುರುಡು: ಜಗದೇವ ಗುತ್ತೇದಾರ್ ವಾಗ್ದಾಳಿ
ಕಾಂಗ್ರೆಸ್‌ನ ಹಗರಣ
ರಾಜ್ಯದಲ್ಲಿ ಸಾವಿರಾರು ಕೋಟಿ ರು. ವಕ್ಫ್ ಆಸ್ತಿಯನ್ನು ಕಾಂಗ್ರೆಸ್ ನಾಯಕರು ನುಂಗಿ ನೀರು ಕುಡಿದಿದ್ದಾರೆ. ಈ ಕುರಿತು ಅನ್ವರ್ ಮಾಣಿಪ್ಪಾಡಿ ಹಾಗೂ ಉಪಲೋಕಾಯುಕ್ತರ ತನಿಖಾ ವರದಿಗಳೆರಡೂ ಸರ್ಕಾರದ ಬಳಿ ಇವೆ. ಈ ಬಗ್ಗೆ ತನಿಖೆ ನಡೆಸಿದರೆ ಕಾಂಗ್ರೆಸ್‌ನ ಕೈಹಿಡಿದಿರುವ ಅಲ್ಪಸಂಖ್ಯಾತ ಸಮುದಾಯ ಆ ಪಕ್ಷದಿಂದ ದೂರವಾಗುವುದು ನಿಶ್ಚಿತ ಅಂತ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.