ಸಿಎಂ ಸಿದ್ದರಾಮಯ್ಯರ ಅವಹೇಳನ: ಶಾಸಕ ಹರೀಶ್ ಪೂಂಜಾ ಹೆಸರಿನ ಫೇಸ್ ಬುಕ್ ಖಾತೆ ವಿರುದ್ದ ಎಫ್ಐಆರ್!

By Ravi Janekal  |  First Published Oct 27, 2023, 6:35 PM IST

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ ಆರೋಪದ ಮೇಲೆ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಹೆಸರಿನಲ್ಲಿರುವ ಫೇಸ್ ಬುಕ್ ಖಾತೆಯ ವಿರುದ್ದ ಎಫ್ಐಆರ್ ದಾಖಲಾಗಿದೆ.


ಮಂಗಳೂರು (ಅ.27): ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ ಆರೋಪದ ಮೇಲೆ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಹೆಸರಿನಲ್ಲಿರುವ ಫೇಸ್ ಬುಕ್ ಖಾತೆಯ ವಿರುದ್ದ ಎಫ್ಐಆರ್ ದಾಖಲಾಗಿದೆ.

ಹರೀಶ್ ಪೂಂಜಾ ಹೆಸರಿನಲ್ಲಿರುವ ಫೇಸ್ ಬುಕ್ ಖಾತೆಯಲ್ಲಿ ಸಿಎಂ ಸಿದ್ದರಾಮಯ್ಯ COLLECTION MASTER ಅಂತಾ ನಾಮಫಲಕ ಇರೋ ಫೋಟೊವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಸಿಎಂ ಕಚೇರಿ ಹಾಗೂ ಗೃಹಕಚೇರಿ ಕಾವೇರಿ ನಿವಾಸದ ಗೇಟ್ ನಲ್ಲೂ ಅದೇ ರೀತಿ ಎಡಿಟ್ ಮಾಡಿರೋ ಫೋಟೋ ಹರಿ ಬಿಡಲಾಗಿದೆ. 

Tap to resize

Latest Videos

angaluru: ಅರಣ್ಯಾಧಿಕಾರಿಗೆ ನಿಂದನೆ: ಶಾಸಕ ಹರೀಶ್‌ ಪೂಂಜಾ ವಿರುದ್ಧ ಎಫ್ಐಆರ್ ದಾಖಲು!

ಸಿಎಂ ಸಿದ್ದರಾಮಯ್ಯ ಫೋಟೊ ಎಡಿಟ್ ಮಾಡಿ ವೈರಲ್ ಮಾಡಿರೋದಾಗಿ ಐಪಿಸಿ ಸೆಕ್ಷನ್ 504, 505(2) ಅಡಿ ಪ್ರಕರಣ ದಾಖಲಿಸಲಾಗಿದೆ. ದ.ಕ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೇಖರ್ ಕುಕ್ಕೆಡಿ ನೀಡಿದ್ದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಾಗಿದೆ. ‌ಆದರೆ ಶಾಸಕ ಹರೀಶ್ ಪೂಂಜಾಗೆ ಸಂಬಂಧಿಸಿದ ಅಧಿಕೃತ ಫೇಸ್ ಬುಕ್ ಖಾತೆ ಬೇರೆಯದ್ದೇ ಆಗಿದ್ದು, ಸದ್ಯ ದೂರು ದಾಖಲಾಗಿರೋ ಖಾತೆಯೂ ಹಲವು ವರ್ಷಗಳಿಂದ ಹರೀಶ್ ಪೂಂಜಾ ಹೆಸರಿನಲ್ಲೇ ಇದೆ. ಮೊನ್ನೆಯಷ್ಟೇ ಅರಣ್ಯಾಧಿಕಾರಿಗೆ ನಿಂದಿಸಿದ ಆರೋಪದಡಿ ಶಾಸಕ ಹರೀಶ್ ಪೂಂಜಾ ವಿರುದ್ದ ಎಫ್ಐಆರ್ ದಾಖಲಾಗಿತ್ತು. ಇದೀಗ ಮತ್ತೆ ಸಿಎಂ ಅವಹೇಳನ ಆರೋಪ ದೂರು ದಾಖಲಾಗಿದೆ.

ಧರ್ಮಸ್ಥಳ ಸೌಜನ್ಯ ಪ್ರಕರಣ ಮರು ತನಿಖೆಗೆ ಶಾಸಕ ಪೂಂಜಾ ಮನವಿ, ಸಿಎಂ ಸಿದ್ದರಾಮಯ್ಯಗೆ ಪತ್ರ!

click me!