'ನಾವು ಹೊಟ್ಟೆ ತುಂಬಿದವರ ಮಾತು ಕೇಳಲ್ಲ, ನಮ್ಮ ಸರ್ಕಾರ ಹೊಟ್ಟೆ ಹಸಿದವರ ಪರ' ಎನ್ನುವ ಮೂಲಕ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿಕೆಗೆ ಸಚಿವ ಶಿವರಾಜ ತಂಗಡಗಿ ತಿರುಗೇಟು ನೀಡಿದರು.
ಕೊಪ್ಪಳ (ಡಿ.1): ನಾವು ಬಡವರಿಗೆ ಏನಾದ್ರು ಸಹಾಯ ಮಾಡಿದ್ರೆ ಶ್ರೀಮಂತರಿಗೆ ತಡೆದುಕೊಳ್ಳಲು ಆಗ್ತಿಲ್ಲ ಎಂದು ಗ್ಯಾರಂಟಿ ಯೋಜನೆಗಳ ಬಗ್ಗೆ ಇನ್ಫೋಸಿಸ್ ನಾರಾಯಣಮೂರ್ತಿ ಆಕ್ಷೇಪ ವಿಚಾರಕ್ಕೆ ಸಚಿವ ಶಿವರಾಜ ತಂಗಡಗಿ ತಿರುಗೇಟು ನೀಡಿದರು.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವರು, ನಾವು ನಾರಾಯಣಮೂರ್ತಿ, ನರೇಂದ್ರ ಮೋದಿ ಬದುಕಲು ಗ್ಯಾರಂಟಿ ಯೋಜನೆ ನೀಡಿಲ್ಲ. ಬಡವರು ಸಾಮಾನ್ಯರು ಒಂದು ಹೊತ್ತು ಊಟ ಮಾಡಲು ಕಷ್ಟ ಪಡುತ್ತಿದ್ದಾರೆ. ಹೀಗಾಗಿ ಬಡವರು, ಸಾಮಾನ್ಯರು ಬದುಕಲು ಗ್ಯಾರಂಟಿ ಯೋಜನೆ ನೀಡ್ತಿದ್ದೇವೆ. ನಾವು ಹೊಟ್ಟೆ ತುಂಬಿದವರ ಮಾತು ಕೇಳಲ್ಲ, ಹೊಟ್ಟೆ ಹಸಿದವರ ಪರ ಇರೋ ಸರ್ಕಾರ ನಮ್ಮದು ಎಂದರು.
ಬಿಜೆಪಿ ರಿಪೇರಿ ಆಗೋದಿಲ್ಲ ಎಂಬ ಶೆಟ್ಟರ್ ಹೇಳಿಕೆ: ಸಿ.ಟಿ. ರವಿ ಕೊಟ್ಟ ತಿರುಗೇಟು ಹೇಗಿದೆ ನೋಡಿ!
ಇನ್ನು ಪಂಚರಾಜ್ಯ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪಂಚರಾಜ್ಯ ಚುನಾವಣೆಯ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಈ ಚುನಾವಣೆ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗುತ್ತಾ ಅಥವಾ ಲೋಕಸಭೆಯಲ್ಲೂ ಬಿಜೆಪಿ ಕಿತ್ತುಕೊಂಡು ಹೋಗುತ್ತೋ ಗೊತ್ತಿಲ್ಲ ಎಂದರು.
ಇನ್ನು ಕಾಂಗ್ರೆಸ್ ಬಗ್ಗೆ ಹೇಳಿಕೆ ನೀಡಿರುವಕಕ ಬಿಜೆಪಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಚಿವ, ಈಶ್ವರಪ್ಪನವರಿಗೆ ಸದ್ಯ ಶಿವಮೊಗ್ಗದಲ್ಲಿಯೇ ನೆಲೆ ಇಲ್ಲ. ಅವರು ಕಾಂಗ್ರೆಸ್ ಬಗ್ಗೆ ಮಾತಾಡುವ ಮುನ್ನ ತಮ್ಮ ನೆಲೆ ಭದ್ರ ಮಾಡಿಕೊಳ್ಳಲಿ ನಂತರ ಕಾಂಗ್ರೆಸ್ ಬಗ್ಗೆ ಮಾತಾಡಲಿ ಎಂದು ಮಾತಿನ ಮೂಲಕ ತಿವಿದರು.
ರಾತ್ರಿ ಮಂಕಿ ಕ್ಯಾಪ್ ಧರಿಸಿ ಬಂದಿದ್ದ ಕಿರಾತಕನಿಂದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮೇಲೆ ಮಾರಣಾಂತಿಕ ಹಲ್ಲೆ!