ಸಹಾಯವಾಣಿಯನ್ನು ಪ್ರಾರಂಭಿಸಿ ಐದು ದಿನಗಳು ಕಳೆದರೂ ಸಹ ಈವರೆಗೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರು ಯಾರೊಬ್ಬರೂ ಕರೆ ಮಾಡಿ ಎಸ್ ಐಟಿಯನ್ನು ಸಂಪರ್ಕಿಸಿಲ್ಲ. ಆದರೆ ತಮಗೆ ಅಶ್ಲೀಲ ವಿಡಿಯೋಗಳಲ್ಲಿರುವ ಸಂತ್ರಸ್ತೆಯರು ಪರಿಚಿತರು ಎಂದು ಹಲವು ಮಂದಿ ಕರೆ ಮಾಹಿತಿ ನೀಡುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಬೆಂಗಳೂರು(ಮೇ.10): ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಹಗರಣದ ಸಂತ್ರಸ್ತೆಯರ ನೆರವಿಗೆ ವಿಶೇಷ ತನಿಖಾ ದಳ (ಎಸ್‌ಐಟಿ) ಆರಂಭಿಸಿರುವ ಸಹಾಯವಾಣಿಗೆ (ಹೆಲ್ಪ್‌ಲೈನ್) ಈಗ 'ಮಾಹಿತಿದಾರರ' ಕಿರಿಕಿರಿ ಹೆಚ್ಚಾಗಿದೆ.
ಸಹಾಯವಾಣಿಯನ್ನು ಪ್ರಾರಂಭಿಸಿ ಐದು ದಿನಗಳು ಕಳೆದರೂ ಸಹ ಈವರೆಗೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರು ಯಾರೊಬ್ಬರೂ ಕರೆ ಮಾಡಿ ಎಸ್ ಐಟಿಯನ್ನು ಸಂಪರ್ಕಿಸಿಲ್ಲ. ಆದರೆ ತಮಗೆ ಅಶ್ಲೀಲ ವಿಡಿಯೋಗಳಲ್ಲಿರುವ ಸಂತ್ರಸ್ತೆಯರು ಪರಿಚಿತರು ಎಂದು ಹಲವು ಮಂದಿ ಕರೆ ಮಾಹಿತಿ ನೀಡುತ್ತಿರುವುದಾಗಿ ಮೂಲಗಳು ತಿಳಿಸಿವೆ.
Prajwal Revanna Case: ನಾನು ಒಕ್ಕಲಿಗ ನೆಪ ಹೇಳಿ ರಕ್ಷಣೆ ಕೇಳಲ್ಲ: ಎಚ್.ಡಿ.ಕುಮಾರಸ್ವಾಮಿ
ಈ ಮಾಹಿತಿದಾರರು ಅಧಿಕೃತವಾಗಿ ಹೇಳಿಕೆ ನೀಡಲು ಕೂಡಾ ನಿರಾಕರಿಸುತ್ತಿದ್ದಾರೆ. ಸಂತ್ರಸ್ತೆಯರು ಅಲ್ಲಿದ್ದಾರೆ ಇಲ್ಲಿದ್ದಾರೆ ಎಂದು ನೂರಾರು ಕರೆಗಳು ಬಂದಿವೆ. ಆದರೆ ಸಂತ್ರಸ್ತೆಯರನ್ನು ತನಿಖಾ ತಂಡದ ಮುಂದೆ ಕರೆತರಲು ನೆರವಾಗುವಂತೆ ಕೇಳಿದರೆ ಮಾತ್ರ ಮಾಹಿತಿದಾರರು ಹಿಂದೇಟು ಹಾಕುತ್ತಿದ್ದಾರೆ ಎಂದು ಎಸ್‌ಐಟಿ ಮೂಲಗಳು ಬೇಸರ ವ್ಯಕ್ತಪಡಿಸಿವೆ.