ಆತ್ಮನಿರ್ಭರ ಕ್ರಾಂತಿಗೆ ತುಮಕೂರು ಜಿಲ್ಲೆ ಸಾಕ್ಷಿ: ಸಿಎಂ ಬೊಮ್ಮಾಯಿ

By Kannadaprabha News  |  First Published Feb 7, 2023, 1:30 AM IST

ಎಚ್‌ಎಎಲ್‌ ಕಾರ್ಖಾನೆ ಸ್ಥಾಪನೆಯೊಂದಿಗೆ ತುಮಕೂರು ಜಿಲ್ಲೆ ಆತ್ಮನಿರ್ಭರ ಕ್ರಾಂತಿಗೆ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು. 
 


ತುಮಕೂರು (ಫೆ.07): ಎಚ್‌ಎಎಲ್‌ ಕಾರ್ಖಾನೆ ಸ್ಥಾಪನೆಯೊಂದಿಗೆ ತುಮಕೂರು ಜಿಲ್ಲೆ ಆತ್ಮನಿರ್ಭರ ಕ್ರಾಂತಿಗೆ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು. ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ಸೋಮವಾರ ಮೋದಿಯವರು ಎಚ್‌ಎಎಲ್‌ ಹೆಲಿಕಾಪ್ಟರ್‌ ಫ್ಯಾಕ್ಟರಿಯನ್ನು ರಾಷ್ಟ್ರಕ್ಕೆ ಸಮರ್ಪಿಸಿ, ಲೈಟ್‌ ಯುಟಿಲಿಟಿ ಹೆಲಿಕಾಪ್ಟರ್‌ ಅನಾವರಣಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಎಚ್‌ಎಎಲ್‌ ತನ್ನದೇ ಆದ ಇತಿಹಾಸ ಹೊಂದಿದ್ದು, ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಅತ್ಯಂತ ಅಗ್ರಗಣ್ಯ ಸಂಸ್ಥೆ ಎನಿಸಿದೆ. ಸ್ವಾತಂತ್ರ್ಯ ಪೂರ್ವದ ಸಂಸ್ಥೆ ಇದಾಗಿದೆ. 

ಇಂತಹ ಕಾರ್ಖಾನೆಗೆ ಪ್ರಧಾನಿ ಅಡಿಗಲ್ಲು ಹಾಕಿ ಅವರೇ ಉದ್ಘಾಟನೆ ನೆರವೇರಿಸಿರುವುದು ನಮ್ಮೆಲ್ಲರ ಸೌಭಾಗ್ಯ. ಹಿಂದೆಲ್ಲಾ ಯಾವುದೇ ಪ್ರಧಾನಿ ಯಾವುದಾದರೂ ಬೃಹತ್‌ ಯೋಜನೆಗೆ ಅಡಿಗಲ್ಲು ಹಾಕಿದರೆ ನಂತರದ ಎರಡು ಅಥವಾ ಮೂರನೇ ಪ್ರಧಾನಿ ಬಂದು ಉದ್ಘಾಟಿಸುತ್ತಿದ್ದರು. ಆದರೆ, ಅಡಿಗಲ್ಲು ಹಾಕಿದ ಮೋದಿ ಅವರೇ ಉದ್ಘಾಟನೆ ಮಾಡುತ್ತಿರುವುದು ಮೋದಿ ಅವರ ಕೆಲಸದ ವೇಗ ಎಷ್ಟಿದೆ ಎಂಬುದನ್ನು ತೋರಿಸುತ್ತದೆ ಎಂದರು.

Tap to resize

Latest Videos

ಮೋದಿ ಆಡಳಿತದಲ್ಲಿ ಮನೆಮನೆಗೂ ಸವಲತ್ತು: ಕೇಂದ್ರ ಸಚಿವ ನಾರಾಯಣಸ್ವಾಮಿ

ಲಘು ಸಾಮರ್ಥ್ಯದ ಹೆಲಿಕಾಪ್ಟರ್‌ ಉತ್ಪಾದನೆಯ ನಂತರ ಹೆವಿ ಡ್ಯೂಟಿ ರಕ್ಷಣಾ ವಲಯದ ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಗುಬ್ಬಿ ಘಟಕಕ್ಕೆ ಇದೆ. ಈ ಘಟಕ ಸ್ಥಾಪನೆಯಿಂದ 10 ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯುತ್ತದೆ. ಶೇ.90ರಷ್ಟು ರಕ್ಷಣಾ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿದ್ದ, ನಾವೀಗ ಶೇ.60ರಷ್ಟು ಹೆಲಿಕಾಪ್ಟರ್‌ ಬಿಡಿಭಾಗಗಳನ್ನು ನಾವೇ ತಯಾರಿಸಿ ರಫ್ತು ಮಾಡುತ್ತಿದ್ದೇವೆ. ಇದು ಆತ್ಮ ನಿರ್ಭರ್‌ಗೆ ಕೈಗನ್ನಡಿಯಾಗಿದೆ ಎಂದರು.

ಪ್ರಲ್ಹಾದ್ ಜೋಶಿ ಸಿಎಂ ಹೇಳಿಕೆ, ದಿಕ್ಕು ತಪ್ಪಿಸುವ ತಂತ್ರ: ಸಚಿವ ಶ್ರೀರಾಮುಲು

ಅಲ್ಲದೆ, ‘ಜಲಜೀವನ್‌ ಮಿಷನ್‌’ ಯೋಜನೆಯಡಿ ಚಿಕ್ಕನಾಯಕನಹಳ್ಳಿ, ತಿಪಟೂರಿನ 3 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಳೆದ 3 ವರ್ಷದಲ್ಲಿ 37 ಲಕ್ಷ ಮನೆಗಳಿಗೆ ಜೆಜೆಎಂ ಯೋಜನೆಯಡಿ ಮನೆ-ಮನೆಗೆ ಗಂಗೆಯನ್ನು ಹರಿಸಲಾಗಿದೆ. 2024ರ ವೇಳೆಗೆ ಎಲ್ಲಾ ಮನೆಗಳಿಗೂ ನೀರು ಕೊಡುವ ತೀರ್ಮಾನ ಕೈಗೊಳ್ಳಲಾಗಿದೆ. ಇವೆಲ್ಲದ್ದಕ್ಕೂ ಡಬಲ್‌ ಎಂಜಿನ್‌ ಸರ್ಕಾರವೇ ಕಾರಣ. ಚೆನ್ನೈ-ಬೆಂಗಳೂರು ಬಹು ಉದ್ದೇಶಿತ ಯೋಜನೆಯಿಂದಾಗಿ ಲಕ್ಷಾಂತರ ಜನರಿಗೆ ಉದ್ಯೋಗ ದೊರಕಲಿದೆ. ಬೆಂಗಳೂರಿನ ನಂತರ ವೇಗವಾಗಿ ಬೆಳೆಯುತ್ತಿರುವ ನಗರ ತುಮಕೂರು. ಮೋದಿ ಅವರ ನವಭಾರತ ಕಲ್ಪನೆಗೆ ನಾವು ಮುಂದೆ ನಿಂತು ದುಡಿಯುತ್ತೇವೆ ಮಾತ್ರವಲ್ಲ, ನವ ಕರ್ನಾಟಕ ನಿರ್ಮಾಣ ಮಾಡುತ್ತೇವೆ ಎಂದರು.

click me!