ಒತ್ತಡದಿಂದಾಗಿ ಪತ್ರಕರ್ತರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗ್ತಿದೆ ಕಡಿಮೆ ವಯಸ್ಸಿನಲ್ಲೆ ಶುಗರ್, ಬಿಪಿ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ವಿಜಯಪುರದಲ್ಲಿ ನಡೆದ ಪತ್ರಕರ್ತರ ಸಮ್ಮೇಳನದಲ್ಲಿ ವೈದ್ಯರು ನಡೆಸಿದ ಸಾಮೂಹಿಕ ಆರೋಗ್ಯ ತಪಾಸಣೆಯಲ್ಲಿ ಇಂತಹ ಅಂಶ ಬೆಳಕಿಗೆ ಬಂದಿದೆ.
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಫೆ.6): ಬಹುತೇಕ ಪತ್ರಕರ್ತರು ಒತ್ತಡಗಳ ನಡುವೆ ಕೆಲಸ ನಿರ್ವಹಿಸೋದು ಕಾಮನ್. ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕೆಲಸ ಮಾಡುವವರ ಜೀವನ ಕ್ರಮ ಒಂದು ರೀತಿಯಾದ್ರೆ, ಇನ್ನು ಮುದ್ರಣ ಮಾಧ್ಯಮಗಳಲ್ಲಿ ಕೆಲಸ ಮಾಡುವ ಪತ್ರಕರ್ತರ ಜೀವನ ಕ್ರಮ ಇನ್ನೊಂದು ರೀತಿಯಲ್ಲಿರುತ್ತೆ. ಎರೆಡು ಆಯಾಮಗಳಲ್ಲಿ ಕೆಲಸ ನಿರ್ವಹಿಸುವ ಪತ್ರಕರ್ತರು ಡೆಡ್ ಲೈನ್‌ಗಳಿಗಾಗಿ ಒತ್ತಡ ಅನುಭವಿಸುವುದು ಇದೆ. ಈ ಒತ್ತಡದಿಂದಾಗಿ ಪತ್ರಕರ್ತರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗ್ತಿದೆ ಕಡಿಮೆ ವಯಸ್ಸಿನಲ್ಲೆ ಶುಗರ್, ಬಿಪಿ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಗುಮ್ಮಟನಗರಿ ವಿಜಯಪುರದಲ್ಲಿ ನಡೆದ ಪತ್ರಕರ್ತರ ಸಮ್ಮೇಳನದಲ್ಲಿ ವೈದ್ಯರು ನಡೆಸಿದ ಸಾಮೂಹಿಕ ಆರೋಗ್ಯ ತಪಾಸಣೆಯಲ್ಲಿ ಇಂತಹ ಅಂಶ ಬೆಳಕಿಗೆ ಬಂದಿದೆ.
undefined
ಪತ್ರಕರ್ತರ ಆರೋಗ್ಯ ಪರೀಕ್ಷೆಯಲ್ಲಿ ಆತಂಕದ ಮಾಹಿತಿ:
ಪೊಲೀಸರಂತೆ, ಕಾರ್ಯನಿರತ ಪತ್ರಕರ್ತರು ಒತ್ತಡಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಎಲೆಕ್ಟ್ರಾನಿಕ್ ಮಾಧ್ಯಮ, ಮುದ್ರಣ ಮಾಧ್ಯಮಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಟ್ರೆಸ್ ಅನ್ನೋದು ಪಿಕ್ಸ್. ಡೆಡ್ ಲೈನ್ ಗಳ ಬೆನ್ನಟ್ಟಿ ಸುದ್ದಿಗಳನ್ನ ಕಚೇರಿಗಳಿಗೆ ಮುಟ್ಟಿಸುವವರೆಗು ಒತ್ತಡ ಇದ್ದೆ ಇರುತ್ತೆ. ವರ್ಕ್ ಟೆನ್ಷನ್ ಜೊತೆ ಜೊತೆಗೆ ಊಟ, ನಿದ್ರೆ, ವಿಶ್ರಾಂತಿಗಾಗಿ ಸಮಯದ ಕೊರತೆಯಿಂದ ದೈನಂದಿನ ಜೀವ ಹಳಿ ತಪ್ಪೋದೆ ಹೆಚ್ಚು. ಇದರಿಂದಾಗಿ ಇನ್ನಿಲ್ಲದ ಕಾಯಿಲೆಗಳು ಬೆಂಬಿಡದೆ ಕಾಡುತ್ವೆ. ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪತ್ರಕರ್ತರ ಆರೋಗ್ಯ ಪರೀಕ್ಷೆ ನಡೆಸಿದ ವೈದ್ಯರು ಕೆಲ ಆತಂಕಗಳನ್ನ ಹೊರಹಾಕಿದ್ದಾರೆ.
ಸಮ್ಮೇಳನದಲ್ಲಿ ಪತ್ರಕರ್ತರ ಆರೋಗ್ಯ ಪರೀಕ್ಷೆ:
37ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಗುಮ್ಮಟನಗರಿ ವಿಜಯಪುರದಲ್ಲಿ ನಡೆಯಿತು. ಸಮ್ಮೇಳನದಲ್ಲಿ ನಗರದ ಪ್ರಸಿದ್ಧ ಬಿಎಲ್ಡಿ ಆಸ್ಪತ್ರೆಯ ವೈದ್ಯರು ಪತ್ರಕರ್ತರ ಉಚಿತ ಆರೋಗ್ಯ ತಪಾಸಣಾ ಶಿಬಿರ ಕೈಗೊಂಡಿದ್ದರು. ಪತ್ರಕರ್ತರ ಆರೋಗ್ಯ ಪರೀಕ್ಷೆಯ ವೇಳೆ ಕೆಲ ಆತಂಕದ ಸಂಗತಿಗಳು ಬೆಳಕಿಗೆ ಬಂದಿವೆ. ಸಮ್ಮೇಳನಕ್ಕೆ ಆಗಮಿಸಿದ್ದ ಪತ್ರಕರ್ತರು ಪ್ರೀ ಹೆಲ್ತ ಕ್ಯಾಂಪ್‌ನ ಸದುಪಯೋಗ ಪಡೆಸಿಕೊಂಡರು.
ಶೇ.15ರಷ್ಟು ಯುವ ಪತ್ರಕರ್ತರಲ್ಲಿ ಬಿಪಿ, ಶುಗರ್ ಪತ್ತೆ:
ಬಿಪಿ, ಶುಗರ್ ಅನ್ನೋದು ಈಗ ಕಾಮನ್ ಅನ್ನೋ ಹಾಗಾಗಿದೆ. ಒತ್ತಡದ ನಡುವೆ ಕಾರ್ಯನಿರ್ವಹಿಸುವ ಪತ್ರಕರ್ತರನ್ನು ಬಿಪಿ ಶುಗರ್ ಅನ್ನೋದು ಬಿಟ್ಟಿಲ್ಲ. ಉಚಿತ ಆರೋಗ್ಯ ತಪಾಸಣೆಯ ವೇಳೆ ಶೇಕಡ 15 ರಿಂದ 18 ಪತ್ರಕರ್ತರಲ್ಲಿ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಪತ್ತೆಯಾಗಿದೆ. ಆತಂಕದ ವಿಚಾರ ಅಂದ್ರೆ ಇದೆ ಮೊದಲ ಬಾರಿಗೆ ಆರೋಗ್ಯ ತಪಾಸಣೆ ಮಾಡಿಕೊಂಡ 40 ವರ್ಷದ ಒಳಗಿನ ಶೇ 12 ರಷ್ಟು ಜನರಲ್ಲಿ ಬಿಪಿ ಹಾಗೂ ಶುಗರ್ ಪತ್ತೆಯಾಗಿದೆ.
700 ಜನರ ಪರೀಕ್ಷೆ 130 ಜನರಿಗೆ ಬಿಪಿ,ಶುಗರ್:
ಸಮ್ಮೇಳನದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆಯಲ್ಲಿ 700 ಪತ್ರಕರ್ತರ ಆರೋಗ್ಯ ತಪಾಸಣೆ ಮಾಡಲಾಯಿತು. ಈ ವೇಳೆ 130 ಜನರಲ್ಲಿ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ರೋಗ ಇರೋದು ಪತ್ತೆಯಾಗಿದೆ. ಈ ಪೈಕಿ 90 ಜನರಲ್ಲಿ ಹೊಸದಾಗಿ ರಕ್ತದೊತ್ತಡ ಹಾಗೂ 40 ಪ್ರಕರ್ತರಲ್ಲಿ ಹೊಸದಾಗಿ ಸಕ್ಕರೆ ಕಾಯಿಲೆ ಪತ್ತೆಯಾಗಿದೆ. ಈ ವಿಚಾರ ಆತಂಕ ಸೃಷ್ಟಿಸಿದೆ.
ನವಮಾಧ್ಯಮಕ್ಕೆ ಗೇಟ್‌ಕೀಪರ್ ವ್ಯವಸ್ಥೆ ಅಗತ್ಯ: ಪತ್ರಕರ್ತರ ಸಮ್ಮೇಳನದಲ್ಲಿ ರವಿ ಹೆಗಡೆ ಸಲಹೆ
ಒತ್ತಡದ ಕಾರ್ಯನಿರ್ವಹಣೆ ಕಾರಣ:
ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದ ಬಿಎಲ್ಡಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ವಿಜಯಕುಮಾರ್ ವಾರದ್ ಪತ್ರಕರ್ತರ ಆರೋಗ್ಯದ ಬಗ್ಗೆ ಆತಂಕ ವ್ಯಕ್ತ ಪಡೆಸಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿದ ಡಾ. ವಾರದ್ ಒತ್ತಡದ ಜೀವನ ಶೈಲಿ, ವಿಶ್ರಾಂತಿ ಇಲ್ಲದ ದೈನಂದಿನ ಬದುಕು ಆರೋಗ್ಯದಲ್ಲಿ ಬಹಳಷ್ಟು ವ್ಯತ್ಯಾಸಗಳನ್ನ ಉಂಟು ಮಾಡುತ್ತವೆ. ಬಿಡುವಿಲ್ಲದ ಕೆಲಸಗಳಿಂದ, ಸರಿಯಾದ ಊಟ, ನಿದ್ರೆ, ವಿಶ್ರಾಂತಿಯ ಕೊರತೆಯಿಂದ ಬಿಪಿ, ಶುಗರ್ ಕಾಯಿಲೆಗಳು ಆವರಿಸಿಕೊಳ್ಳುತ್ತವೆ. ಸೂಕ್ತ ಸಮಯದಲ್ಲಿ ವೈದ್ಯರ ಸಲಹೆ, ಮೇಲಿಂದ ಮೇಲೆ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಪತ್ರಕರ್ತರು ಯೋಗ, ಧ್ಯಾನ, ವ್ಯಾಯಾಮಗಳ ಮೂಲಕ ಒತ್ತಡ ನಿರ್ವಹಣೆ ಮಾಡಿಕೊಳ್ಳಬೇಕು ಎಂದಿದ್ದಾರೆ. ಅಲ್ಲದೆ ಆರೋಗ್ಯ ಸ್ಥಿತಿಯಲ್ಲಿ ತುಂಬಾ ವ್ಯತ್ಯಾಸಗಳು ಕಂಡು ಬಂದಲ್ಲಿ ವೈದ್ಯರ ಸಲಹೆ ಪಡೆಯಲು ಸೂಚಿಸಿದ್ದಾರೆ.
ವಿಜಯಪುರದಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನ: ಗಮನ ಸೆಳೆದ ಛಾಯಾಚಿತ್ರ ಪ್ರದರ್ಶನ
ಪತ್ರಕರ್ತರಿಗೆ ಯಾಕೆ ಇಷ್ಟು ಒತ್ತಡಗಳು:
ಮಾಧ್ಯಮಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಅವರ ಕೆಲಸ ಮುಗಿಸಲು ಅವರಿಗೆ ಒಂದು ಟೈಂ ಪಿಕ್ಸ್ ಇರುತ್ತದೆ. ಅದನ್ನೆ ಪತ್ರಿಕಾ ಭಾಷೆಯಲ್ಲಿ ಡೆಡ್ ಲೈನ್ ಎನ್ನುತ್ತಾರೆ. ಎಲೆಕ್ಟ್ರಾನಿಕ್ ಮಾಧ್ಯಮಗಳ ಪತ್ರಕರ್ತರಿಗೆ ಡೆಡ್ ಲೈನ್ ಅನ್ನೋದು ನಿಮಿಷ, ಸೆಕೆಂಡ್ ಲೆಕ್ಕಗಳಲ್ಲಿ ಇರುತ್ತೆ. ಸುದ್ದಿಗಳನ್ನ ಇಷ್ಟೆ ಸಮಯದಲ್ಲಿ ಕಳುಹಿಸಿ ಕೊಡಲೇ ಬೇಕಾದ ಅನಿವಾರ್ಯತೆ ಇರುತ್ತೆ. ಈ ಒತ್ತಡ ಮುದ್ರಣ ಮಾಧ್ಯಮದವರನ್ನು ಬಿಟ್ಟಿಲ್ಲ. ಮುದ್ರಣ ಮಾಧ್ಯಮಗಳಲ್ಲಿ ಕೆಲಸ ಮಾಡುವ ಬಹುತೇಕರು ತಡರಾತ್ರಿ ಪತ್ರಿಕೆ ಪ್ರಿಂಟ್ ಆಗುವವರೆಗು ಕೆಲಸ ನಿರ್ವಹಿಸುತ್ತಾರೆ. ಇತ್ತ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕೆಲಸ ನಿರ್ವಹಿಸುವವರು ಕೆಲ ಬಾರಿ ದಿನದ 24 ಗಂಟೆ ಕೆಲಸ ನಿರ್ವಹಿಸಬೇಕಾಗುತ್ತೆ. ಹೀಗೆ ಒತ್ತಡಗಳ ನಡುವೆ ಕೆಲಸ ನಿರ್ವಹಣೆಯಿಂದ ಸಹಜವಾಗಿಯೇ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತೆ.