INDIA@75: ಬೆಂಗಳೂರಿಗರಿಗೆ ಬಂಪರ್ ಗಿಫ್ಟ್ ನೀಡಿದ ಬಿಎಂಟಿಸಿ! ಫ್ರೀ ಪ್ರಯಾಣ ಮಜಾ ಉಡಾಯಿಸಿ

By Ravi NayakFirst Published Aug 11, 2022, 3:18 PM IST
Highlights

ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಬಿಎಂಟಿಸಿ ರಜತ ಮಹೋತ್ಸವ ಪ್ರಯುಕ್ತ ಬಿಎಂಟಿಸಿ ಪ್ರಯಾಣಿಕರಿಗೆ ನಿಗಮ ಬಂಪರ್ ಗಿಫ್ಟ್ ನೀಡಿದೆ. ಆಗಸ್ಟ್ ೧೫ ರಂದು ಒಂದು ದಿನ ಪೂರ್ತಿ ಉಚಿತ ಪ್ರಯಾಣ. ಬಿಎಂಟಿಸಿಯಲ್ಲಿ ಎಲ್ಲಿಂದ ಎಲ್ಲಿಗೆ ಸಂಚಾರ ಮಾಡಬಹುದು! ಇನ್ನೇಕೆ ತಡ ಬೆಂಗಳೂರು ಸುತ್ತಾಡಲು ಸಿದ್ಧರಾಗಿ!

ವರದಿ; ಮಮತಾ ಮರ್ಧಾಳ ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಆ11); ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಬಿಎಂಟಿಸಿ ರಜತ ಮಹೋತ್ಸವ ಪ್ರಯುಕ್ತ ಬಿಎಂಟಿಸಿ ಪ್ರಯಾಣಿಕರಿಗೆ ನಿಗಮ ಬಂಪರ್ ಗಿಫ್ಟ್ ನೀಡಿದೆ.  ೭೫ ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಬಿಎಂಟಿಸಿ ಗೆ ೨೫ ವರ್ಷ ತುಂಬಿದ ಹಿನ್ನೆಲೆ ಬೆಂಗಳೂರಿಗರಿಗೆ ಬಿಎಂಟಿಸಿ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ದಿನ ಪೂರ್ತಿ ಬೆಂಗಳೂರಿಗರು ಒಂದು ರೂಪಾಯಿ ಬಸ್ ಚಾರ್ಜ್ ನೀಡದೆ ಪ್ರಯಾಣ ಮಾಡಲು ಅವಕಾಶ ಕಲ್ಪಿಸಿದೆ. 

Bengaluru ತಳ್ಳೋಗಾಡಿಯಾದ ಬಿಎಂಟಿಸಿ ಬಸ್, ಟ್ರಾಫಿಕ್ ಜಾಮ್ ..!

ಯೆಸ್ ಯಶಸ್ವಿಯಾಗಿ ೨೫ ವರ್ಷ ಪೂರೈಸಿದ ಬಿಎಂಟಿಸಿಯ ರಜತ ಮಹೋತ್ಸವ ಹಿನ್ನೆಲೆ ಆಗಸ್ಟ್ ೧೫ ರಂದು ಒಂದು ದಿನ ಪೂರ್ತಿ ಬೆಂಗಳೂರಿಗರು ಬಿಎಂಟಿಸಿಯಲ್ಲಿ ಎಲ್ಲಿಂದ ಎಲ್ಲಿಗೆ ಸಂಚಾರ ಮಾಡಿದ್ರು, ಯಾವುದೇ ಹಣ ಪಾವತಿ ಮಾಡಬೇಕಿಲ್ಲ. ಎಸಿ ನಾನ್ ಎಸಿ ಯಾವುದೇ ಬಸ್ ಆದ್ರೂ ಕೂಡ ಆಗಸ್ಟ್ ೧೫ರ ಒಂದು ದಿನ 24 ಗಂಟೆಯೂ ಉಚಿತವಾಗಿ ಓಡಾಟ ಮಾಡಬಹುದು. ಬಿಎಂಟಿಸಿಯ ಒಂದು ದಿನದ ಆದಾಯ ೩.೫ ಕೋಟಿಯಷ್ಟು ಇದ್ದು, ಆ ಇಡೀ ಆದಾಯವನ್ನ ಸಾರ್ವಜನಿಕರಿಗೆ ಉಚಿತ ಸೇವೆಗೆ ಮೀಸಲಿಡಲಿಟ್ಟಿದ್ದು ಖುಷಿಯ ವಿಚಾರ. ಈ ವಿಚಾರದ ಕುರಿತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಇದು ಪ್ರಯಾಣಿಕರಿಗಾಗಿ ನಾವು ಸರ್ಕಾರ ಹಾಗೂ ನಿಗಮ ಜೊತೆಯಾಗಿ ಮಾಡ್ತಿರೋ ಸಣ್ಣ ಗಿಫ್ಟ್ ಅಷ್ಟೆ.ಈ ವಿಚಾರಕ್ಕೆ ಸರ್ಕಾರ ಸಹ ಒಪ್ಪಿದ್ದು, ಪ್ರತಿ ಪ್ರಯಾಣಿಕರು ಇದರ ಲಾಭಪಡೆಯಬೇಕಾಗಿ ವಿನಂತಿ ಮಾಡಿದ್ದಾರೆ. 

ಇಷ್ಟೇ ಅಲ್ಲ ಪ್ರಯಾಣಿಕರ ಜೊತೆಗೆ ಸಿಬ್ಬಂದಿಗಳಿಗೂ ಗುಡ್ ನ್ಯೂಸ್ ಇದೆ. ಕಳೆದ ಒಂದು ವರ್ಷದಿಂದ ಯಾವುದೇ ಅಪಘಾತ ಮಾಡದ ಮತ್ತು ಕೆಲಸದಲ್ಲಿ ಶಿಸ್ತು ಕಾಪಾಡಿಕೊಂಡಿರುವ ಸಿಬ್ಬಂದಿಗೆ ಚಿನ್ನದ ನಾಣ್ಯ ಮತ್ತು ಬೆಳ್ಳಿ ನಾಣ್ಯ ವಿತರಣೆಗೆ ಸಿದ್ದತೆ ಮಾಡಲಾಗಿದೆ. ಈ ಕಾರ್ಯಕ್ರಮ ಆಗಸ್ಟ್ ೧೬ ರಂದು ನಡೆಯಲಿದ್ದು ೧೬೮ ಸಿಬ್ಬಂದಿಗೆ ಚಿನ್ನ, ೨೯೬೮ ಸಿಬ್ಬಂದಿಗೆ ಬೆಳ್ಳಿ ನಾಣ್ಯ ವಿತರಣೆ ಮಾಡಲಾಗುವುದು. 

ಬರೀ 20 ರೂಪಾಯಿ ಟಿಕೆಟ್‌, ಒಲಾ-ಉಬರ್‌ಗೆ ಟಾಂಗ್‌ ನೀಡಿದ ಬೆಂಗಳೂರು ಪ್ರಯಾಣಿಕ!

ಇನ್ನು 75 ನೇ ಅಮೃತ ಮಹೋತ್ಸವ ಹಿನ್ನಲೆ ಆಗಸ್ಟ್ 14 ರಂದು 75 ಎಲೆಕ್ಟ್ರಿಕ್ ಬಸ್ ಲೋಕಾರ್ಪಣೆಯಾಗಲಿದೆ. ಈಗಾಗಲೇ  90 ಎಲೆಕ್ಟ್ರಿಕ್ ಬಸ್ಗಳು ಕಾರ್ಯಾಚರಣೆ ನಾಡೆಸ್ತಿವೆ. ಅದರ ಜೊತೆಗೆ ಹೊಸ 75 ಎಲೆಕ್ಟ್ರಿಕ್ ಬಸ್ ಸೇರ್ಪಡೆಯಾಗಲಿವೆ. ಅಮೃತ ಮಹೋತ್ಸವದ ಸಂಭ್ರಮದ ಜೊತೆಗೆ ಬಿಎಂಟಿಸಿ  ರಜತ ಮಹೋತ್ಸವ ಸಂಭ್ರಮವು ಜೋರಾಗಿದ್ದು ಸಾರಿಗೆ ನಿಗಮದಲ್ಲಿ ಸಂಭ್ರಮ ಕಳೆಗಟ್ಟಿದೆ.

click me!