2047ಕ್ಕೆ ಭಾರತ ಸೂಪರ್ ಪವರ್ ರಾಷ್ಟ್ರ: ಪದ್ಮವಿಭೂಷಣ ಡಾ.ವಿ.ಕೆ.ಆತ್ರೆ

By Govindaraj S  |  First Published Sep 11, 2024, 6:11 PM IST

2047ಕ್ಕೆ ಅಭಿವೃದ್ಧಿ ಹೊಂದಿದ ರಾಷ್ಟವಾಗುವ ಗುರಿಯತ್ತ ಭಾರತ ಹೆಜ್ಜೆ ಹಾಕುತ್ತಿದೆ. ಗುರಿ ಸಾಧನೆಗೆ ಭಾರತ ಆರ್ಥಿಕ ಸದೃಡತೆ,ಸ್ವಾವಲಂಬಿ ರಾಷ್ಟ್ರ, ಜ್ಞಾನ ಕೇಂದ್ರವಾಗಬೇಕು. ಭಾರತ ಜ್ಞಾನದ ವಿಶ್ವಗುರುವಾಗಲು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಿಂದ ಮಾತ್ರ ಸಾಧ್ಯ. 


ವರದಿ: ನಟರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಸೆ.11): 2047ಕ್ಕೆ ಅಭಿವೃದ್ಧಿ ಹೊಂದಿದ ರಾಷ್ಟವಾಗುವ ಗುರಿಯತ್ತ ಭಾರತ ಹೆಜ್ಜೆ ಹಾಕುತ್ತಿದೆ. ಗುರಿ ಸಾಧನೆಗೆ ಭಾರತ ಆರ್ಥಿಕ ಸದೃಡತೆ,ಸ್ವಾವಲಂಬಿ ರಾಷ್ಟ್ರ, ಜ್ಞಾನ ಕೇಂದ್ರವಾಗಬೇಕು. ಭಾರತ ಜ್ಞಾನದ ವಿಶ್ವಗುರುವಾಗಲು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಿಂದ ಮಾತ್ರ ಸಾಧ್ಯ. ಭಾರತ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಸೂಪರ್ ಪವರ್ ರಾಷ್ಟ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಪದ್ಮವಿಭೂಷಣ ಡಾ.ವಿ.ಕೆ.ಆತ್ರೆ ವಿಶ್ವಾಸ ವ್ಯಕ್ತಪಡಿಸಿದರು. ಕರ್ನಾಟಕ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್‌ಮೆಂಟ್ ಆಫ್ ಸೈನ್ಸ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ವಿಜ್ಞಾನ ವೇದಿಕೆ ಸಹಯೋಗದಲ್ಲಿ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಪದ್ಮವಿಭೂಷಣ ಡಾ.ವಿ.ಕೆ ಆತ್ರೆ, ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಡಾ.ಎಂ.ಆರ್.ದೊರೆಸ್ವಾಮಿ ಮತ್ತು ಕೈಗಾರಿಕೋದ್ಯಮಿ ಎಸ್.ರುದ್ರೇಗೌಡರವರಿಗೆ  ಗೌರವ ಫೆಲೋಶಿಪ್ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

Tap to resize

Latest Videos

ಗೌರವ ಫೆಲೋಶಿಪ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪದ್ಮವಿಭೂಷಣ ಡಾ.ವಿ.ಕೆ.ಆತ್ರೆ ರವರು " ಸಾಧಾರಣ ವ್ಯಕ್ತಿಗಳು ಅಸಾಧಾರಣ ಕಾರ್ಯಗಳನ್ನು ಸಾಧಿಸಬಹುದು.ವಿಶ್ವೇಶರಯ್ಯ, ಐನ್ಸ್ಟೈನ್, ಸಿ.ವಿ.ರಾಮನ್‌ರಂತ ಅಸಾಮಾನ್ಯ ವ್ಯಕ್ತಿಗಳಿಂದ ಮಾತ್ರ ಸದೃಡ ರಾಷ್ಟ್ರ‌ ನಿರ್ಮಾಣವಾಗುವುದಿಲ್ಲ. ಸಣ್ಣ‌ ಕಾಲೇಜೊಂದರ ಅತಿ ಸಾಮಾನ್ಯ ವಿದ್ಯಾರ್ಥಿ ತನ್ನ ಕರ್ತವ್ಯ, ಗುರಿಗಳನ್ನು ಅರಿತು ಕಾರ್ಯ ನಿರ್ವಹಿಸಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ. ಸತತ ಪರಿಶ್ರಮ, ಸಮಸ್ಯೆ ಬಗೆಹರಿಸುವ ಬುದ್ದಿವಂತಿಕೆ, ಚಾಕಚಕ್ಯತೆ, ಕೊಟ್ಟ ಕೆಲಸ ಯಶಸ್ವಿಯಾಗಿಸುವ ತಂತ್ರ ಅರಿತು ಬಿಟ್ಟರೆ ಸಾಮಾನ್ಯರು ಅಸಮಾನ್ಯರಾಗಬಹುದು.

ಎತ್ತಿನಹೊಳೆ ಯೋಜನೆಗೆ ಬಿಜೆಪಿ ಸರ್ಕಾರ ತಾರತಮ್ಯ: ಗೃಹ ಸಚಿವ ಪರಮೇಶ್ವರ್

ಭಾರತದ ಮುಂದಿನ 2 ದಶಕಗಳು ಅತಿ ನಿರ್ಣಾಯಕವಾಗಿದೆ. ಭಾರತದ ಜನಸಂಖ್ಯೆಯ ಸರಾಸರಿ ವಯಸ್ಸು 45 -50 ದಾಟಲಿದೆ.ಆ ನಿಟ್ಟಿನಲ್ಲಿ ಭಾರತವನ್ನು ಸದೃಡ ರಾಷ್ಟ್ರವಾಗಿಸಲು ಇಡೀ ಸಮೂಹ ಒಂದಾಗಿ ಶ್ರಮಿಸಬೇಕು.ಎಲ್ಲಾ ಆಯಾಮಗಳಿಂದಲೂ ಕೊಡುಗೆ ನೀಡಬೇಕು.76 ವರ್ಷಗಳ ಹಿಂದೆ ಸ್ವಾತಂತ್ರ್ಯ ಸಂದರ್ಭದಲ್ಲಿ ಭಾರತ ಕಡುಬಡತನದ ರಾಷ್ಟ್ರವಾಗಿತ್ತು. ಶಿಕ್ಷಣ,ವಿಜ್ಞಾನ, ತಂತ್ರಜ್ಞಾನಗಳತ್ತ ಗಮನಹರಿಸಲು ಸಾಧ್ಯವಾಗದೇ ಅನ್ನಕ್ಕಾಗಿ ನೆರೆರಾಷ್ಟಗಳತ್ತ ಅವಲಂಬಿಸುವ ಸ್ಥಿತಿ ಇತ್ತು. ಆದರೆ ಇಂದು ಭಾರತ ಬದಲಾಗಿದೆ,ಸಾವಿರಾರು ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದೆ.ಸಂಶೋಧನೆ ,ಆವಿಷ್ಕಾರಗಳಲ್ಲಿ ನಿರತವಾಗಿದೆ. ಭಾರತ ಚಂದ್ರನ ಅಂಗಳದಲ್ಲಿ ಕಾಲೂರಿ ಸಾಧನೆ ಮೆರೆದಿದೆ.

ಇಡೀ ವಿಶ್ವ ಭಾರತದ ನಾಯಕತ್ವವನ್ನು ಎದುರು ನೋಡುತ್ತಿದೆ. ಭಾರತ ಕೂಡ ಆ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದೆ ಆದರೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಿಂದ ಮಾತ್ರ ಸಾಧ್ಯ.ಈ ಹಿನ್ನೆಲೆ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆಗ ಭಾರತ ಸೂಪರ್ ಪವರ್ ರಾಷ್ಟ್ರವಾಗುವದರಲ್ಲಿ ಯಾವ ಸಂಶಯವಿಲ್ಲ ಎಂದು ಆಶಯ ವ್ಯಕ್ತಪಡಿಸಿದರು. ಗೌರವ ಫೆಲೋಶಿಪ್ ಸ್ವೀಕರಿಸಿದ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ಎಂ.ಆರ್.ದೊರೆಸ್ವಾಮಿ ಮಾತನಾಡಿ "ಈ ಗೌರವ, ಹೆಮ್ಮೆ ತಂದಿದೆ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ಅನೇಕ ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿದ್ದು,ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆಗೆ ಶ್ರಮಿಸಿರುವೆ.ಸರ್ಕಾರಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿ ಸರ್ಕಾರದ ಸಹಯೋಗದೊಂದಿಗೆ ಪಿಇಎಸ್ ವಿಶ್ವವಿದ್ಯಾಲಯದ ವತಿಯಿಂದ 1600 ಸರ್ಕಾರಿ ಶಾಲೆಗಳ ಮೂಲಸೌಕರ್ಯ ಸೇರಿದಂತೆ ಸಂಪೂರ್ಣ ಅಭಿವೃದ್ಧಿ ಮಾಡಿದ್ದೇವೆ.

ಕುಲಪತಿಗಳ ಹುದ್ದೆ ಮಾರಾಟಕ್ಕಲ್ಲ, ಕುಲಪತಿಗಳ ಆಯ್ಕೆ ಮೆರಿಟ್ ಆಧಾರವಾಗಿರಬೇಕು ಎಂದು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದೆ. ಕುಲಪತಿ ಸಮರ್ಪಕವಾಗಿದ್ದರೆ ವಿಶ್ವವಿದ್ಯಾಲಯ ಗಟ್ಟಿಯಾಗಿರಲಿದೆ ಎಂದು ಪ್ರತಿಪಾದಿಸಿದೆ. ಈಗಲೂ ಪಿಇಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ, ಕೌಶಲ್ಯ ತರಭೇತಿ, ವಿದ್ಯಾರ್ಥಿ-ಶಿಕ್ಷಕರ ಸಂಬಂಧ ಸುಧಾರಣೆಗಳಿಗೆ ಆದ್ಯತೆ ನೀಡಿದ್ದೇವೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ಈ ಪ್ರಯತ್ನ ಮಾಡಬೇಕು. ಶಿಕ್ಷಣ ಕ್ಷೇತ್ರ ಬದಲಾದರೆ ರಾಷ್ಟ್ರವೇ ಬದಲಾಗಲಿದೆ. ಸಮೃದ್ದ, ಸದೃಡ ರಾಷ್ಟ್ರ‌ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ದೊಡ್ಡದು. ಆ ಶಿಕ್ಷಕರ ಪ್ರತಿನಿಧಿಯಾಗಿ ಈ ಪ್ರಶಸ್ತಿ ಸ್ವೀಕರಿಸಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ನಿಮಗೆ ಕೈ ಮುಗಿಯುತ್ತೇನೆ, ಪ್ಲೀಸ್‌, ಸಿಎಂ ಬದಲಾವಣೆ ವಿಚಾರ ಕೇಳ್ಬೇಡಿ: ಸಚಿವ ಸತೀಶ್‌ ಜಾರಕಿಹೊಳಿ

ಕಾರ್ಯಕ್ರಮದಲ್ಲಿ ಕುಲಪತಿ ಡಾ.ಜಯಕರ ಎಸ್ ಎಂ, KAAS ಅಧ್ಯಕ್ಷರು ಡಾ.ಕೆ.ಸಿದ್ದಪ್ಪ, ಡಾ.ಅಶೋಕ್ ಡಿ ಹಂಜಗಿ, ಪ್ರೊ.ಬಿ.ಸಿ.ಪ್ರಭಾಕರ್, ಪ್ರೊ.ಎನ್.ನಾಗಯ್ಯ ಉಪಸ್ಥಿತರಿದ್ದರು. ತ್ರಿವಳಿ ರತ್ನಗಳಿಗೆ ಗೌರವ ಫೆಲೋಶಿಪ್ ಪ್ರಶಸ್ತಿ ನೀಡಿರುವುದು ಗೌರವ ಮತ್ತು ಹೆಮ್ಮೆಯ ವಿಷಯ. ಈ ಮೂಲಕ ಹೊಸ ಪೀಳಿಗೆಯ ಯುವಕರು ಸ್ಪೂರ್ತಿ ಹೊಂದಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಬೇಕು. ಸಮಾಜದಲ್ಲಿನ ಸಮಸ್ಯೆ, ಕೊರತೆಗಳಿಗೆ ಪರಿಹಾರ ಒದಗಿಸುವುದೇ ವಿಜ್ಞಾನ, ತಂತ್ರಜ್ಞಾನದ ಗುರಿ. ಆ ನಿಟ್ಟಿನಲ್ಲಿ ಸಂಶೋಧನೆ, ಆವಿಷ್ಕಾರಗಳು ಹೆಚ್ಚಾಗಬೇಕು. ಆತ್ಮನಿರ್ಭರತೆಗೆ ಆದ್ಯತೆ ಹೆಚ್ಚಾಗಿದ್ದು ಸರ್ಕಾರಗಳು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಕ್ಕೆ ಆರ್ಥಿಕ ಸಹಾಯ ಮತ್ತು ಅನುದಾನ ಹೆಚ್ಚಿಸಬೇಕು ಅಂತ ಕುಲಪತಿ ಡಾ.ಜಯಕರ ಎಸ್ .ಎಂ ಹೇಳಿದ್ರು.

click me!