ನಕಲಿ ಜಿಎಸ್‌ಟಿ ನೋಂದಣಿ ತಡೆಗೆ ಆಧಾರ್‌ ಬಯೋಮೆಟ್ರಿಕ್‌ ವ್ಯವಸ್ಥೆ

By Kannadaprabha News  |  First Published Sep 11, 2024, 1:55 PM IST

ಬೆಂಗಳೂರಿನ ಗಾಂಧಿನಗರದಲ್ಲಿರುವ ಕೇಂದ್ರ ಕಚೇರಿ ಸೇರಿ ರಾಜ್ಯದ 120 ಕಡೆ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಅರ್ಜಿ ದಾರರು ಮುಂಗಡವಾಗಿ ಸಮಯ ನಿಗದಿ ಪಡಿಸಿಕೊಂಡು ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದು. ಬಯೋಮೆಟ್ರಿಕ್  ದೃಢೀಕರಣ ಮತ್ತು ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ. 


ಬೆಂಗಳೂರು(ಸೆ.11):  ನಕಲಿ ಜಿಎಸ್‌ಟಿ ನೋಂದಣಿ ತಡೆಗಟ್ಟಲು ರಾಜ್ಯದ ವಿವಿಧೆಡೆ ಆಧಾರ್‌ ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡುವ 120 'ಜಿಎಸ್‌ಟಿ ಸೇವಾ ಕೇಂದ್ರ'ಗಳನ್ನು ವಾಣಿಜ್ಯ ತೆರಿಗೆಗಳ ಇಲಾಖೆ ಆರಂಭಿಸಿದೆ. 

ನಗರದ ಗಾಂಧಿನಗರದಲ್ಲಿರುವ ಕೇಂದ್ರ ಕಚೇರಿ ಸೇರಿ ರಾಜ್ಯದ 120 ಕಡೆ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಅರ್ಜಿ ದಾರರು ಮುಂಗಡವಾಗಿ ಸಮಯ ನಿಗದಿ ಪಡಿಸಿಕೊಂಡು ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದು. ಬಯೋಮೆಟ್ರಿಕ್ ದೃಢೀಕರಣ ಮತ್ತು ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ. 

Tap to resize

Latest Videos

ಅಯೋಧ್ಯೆ ರಾಮಮಂದಿರದಿಂದ ಸಂಗ್ರಹವಾದ ಜಿಎಸ್‌ಟಿ ಹಣವೆಷ್ಟು?

ಇದರಿಂದಾಗಿ ಅಮಾಯಕ ವ್ಯಕ್ತಿಗಳ ದಾಖಲೆಗಳನ್ನು ಬಳಸಿಕೊಂಡು ನಕಲಿ ಜಿಎಸ್‌ಟಿ ನೋಂದಣಿ ತಡೆಯಲು ಸಾಧ್ಯವಾಗುತ್ತದೆ. ಜತೆಗೆ ರಾಜ್ಯದಲ್ಲಿ ಉತ್ತಮ ವ್ಯವಹಾರ ವಾತಾವರಣಕ್ಕೆ ಉತ್ತೇ ಜನ ಸಿಗುತ್ತದೆ ಎಂದು ವಾಣಿಜ್ಯ ತೆರಿಗೆಗಳ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

click me!