ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ್ದ ವಿಜಯಪುರದ ಮಠಾಧೀಶರು; ರಾಜ್ಯೋತ್ಸವದ ಮರುದಿನವೇ ಮಹಾದೇವರ ಜನ್ಮದಿನ!

By Ravi Janekal  |  First Published Nov 2, 2023, 5:35 PM IST

ಅವರು ಒಂದು ಮಠದ ಮಠಾಧೀಶರಾಗಿ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದವರು. ಭಾರತ ಸ್ವಾತಂತ್ರ್ಯಕ್ಕಾಗಿ ಸಶಸ್ತ್ರವಾಗಿ ಬ್ರಿಟಿಷರ ವಿರುದ್ಧ ಹೋರಾಡಿದವರು. ವಿಶೇಷ ಅಂದ್ರೆ ನಾವು ನವೆಂಬರ್‌ 1ರಂದು ರಾಜ್ಯೋತ್ಸವ ಆಚರಿಸಿದರೇ, ಮರುದಿನ ನವೆಂಬರ್‌ 2 ರಂದು ಕನ್ನಡ ನಾಡಿನ ಐಕ್ಯತೆಗಾಗಿ ಹೋರಾಡಿದ ಇಂಚಗೇರಿ ಮಠದ ಮಾಧವಾನಂದ ಪ್ರಭುಜೀಗಳ ಹುಟ್ಟುಹಬ್ಬವನ್ನ ಆಚರಿಸಲಾಗುತ್ತೆ!


- ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌

ವಿಜಯಪುರ (ನ.02) : ಅವರು ಒಂದು ಮಠದ ಮಠಾಧೀಶರಾಗಿ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದವರು. ಭಾರತ ಸ್ವಾತಂತ್ರ್ಯಕ್ಕಾಗಿ ಸಶಸ್ತ್ರವಾಗಿ ಬ್ರಿಟಿಷರ ವಿರುದ್ಧ ಹೋರಾಡಿದವರು. ವಿಶೇಷ ಅಂದ್ರೆ ನಾವು ನವೆಂಬರ್‌ 1ರಂದು ರಾಜ್ಯೋತ್ಸವ ಆಚರಿಸಿದರೇ, ಮರುದಿನ ನವೆಂಬರ್‌ 2 ರಂದು ಕನ್ನಡ ನಾಡಿನ ಐಕ್ಯತೆಗಾಗಿ ಹೋರಾಡಿದ ಇಂಚಗೇರಿ ಮಠದ ಮಾಧವಾನಂದ ಪ್ರಭುಜೀಗಳ ಹುಟ್ಟುಹಬ್ಬವನ್ನ ಅವರ ಅನುಯಾಯಿಗಳು ಅದ್ದೂರಿಯಾಗಿ ಆಚರಿಸುತ್ತಾರೆ. 

Tap to resize

Latest Videos

ದೇಶ ಹಾಗೂ ನಾಡಿಗಾಗಿ ಹೋರಾಟವನ್ನೆ ಬದುಕಾಗಿಸಿಕೊಂಡಿದ್ದ ಮಾಧವಾನಂದ ಶ್ರೀಗಳ ಜೀವನ ಚರಿತ್ರೆ ಶಾಲಾ-ಕಾಲೇಜುಗಳಿಗೆ ಪಠ್ಯವಾಗಲಿ ಎಂದು ಈಗ ಮಠದ ಭಕ್ತರು ಮನವಿ ಮಾಡ್ತಿದ್ದಾರೆ.

ವಿಜಯಪುರ: ಸ್ವಾತಂತ್ರ್ಯ ಹೋರಾಟಗಾರನಿಗೆ ಗೋಲ್ಡನ್‌ ಟೆಂಪಲ್!

ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ್ದ ದೇವರು!

ಹೌದು, ಕರ್ನಾಟಕ ಏಕೀಕರಣಕ್ಕಾಗಿ ಸ್ವತಃ ದೇವರೆ ಹೋರಾಡಿದ್ದರು ಅಂದ್ರೆ ನಂಬ್ತೀರಾ. ಅವರ ಜೀವಿತಾವಧಿಯಲ್ಲಿ ನಡೆದಾಡುವ ದೇವರು ಎನಿಸಿಕೊಂಡ ಇಂಚಗೇರಿ ಮಠ(Inchageri mutt)ದ ಮಾಧವಾನಂದ ಪ್ರಭುಜಿ (Madhavananda prabuji inchageri mutt)ಗಳು, ಕರ್ನಾಟಕ ಏಕೀಕರಣಕ್ಕಾಗಿ ಉಪವಾಸ ಸತ್ಯಾಗ್ರಹದ ಮೂಲಕ ಹೋರಾಟ ನಡೆಸಿದ್ದರು. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಆಧ್ಯಾತ್ಮ ಸಾಂಪ್ರದಾಯ ಮಠದ ಪೀಠಾಧಿಕಾರಿಗಳಾಗಿದ್ದ ಮುರುಗೋಡು ಮಹಾದೇವಪ್ಪನವರು ಭಾರತ ಸ್ವಾತಂತ್ರ್ಯ, ಕರ್ನಾಟಕ ಏಕೀಕರಣ, ಮೈಸೂರು ಕರ್ನಾಟಕವಾಗಬೇಕೆಂದು ನಡೆದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಸಂಸ್ಥಾನಗಳ ಒಗ್ಗೂಡಿಸಿ ನಾಡು ಕಟ್ಟಿದ ಮಹಾತ್ಮ..!

ಸ್ವಾತಂತ್ರ್ಯ ಹೋರಾಟದ ಬಳಿಕ ಸಂಸ್ಥಾನಗಳಾಗಿ ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನ ಕಟ್ಟುವಲ್ಲಿ ಅನೇಕ ಹೋರಾಟಗಾರರ ಶ್ರಮವಿದೆ. ಅದ್ರಲ್ಲು ಜಾತ್ಯಾತೀತ ಮಠ ಅಂತಲೆ ಹೆಸರುವಾಸಿಯಾಗಿರುವ ಇಂಚಗೇರಿ ಮಠದ ಮಾಧವಾನಂದ ಶ್ರೀಗಳ ಪಾತ್ರ ಅಗ್ರಗಣ್ಯ. ಅಂದು ಸಂಸ್ಥಾನ ರೂಪದಲ್ಲಿ ತುಂಡಾಗಿದ್ದ ನಾಡು ಅಖಂಡ ಕರ್ನಾಟಕವಾಗಬೇಕು ಅಂತಾ ಮಾಧವಾನಂದ ಪ್ರಭುಜಿಗಳು 21 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದರು. ಇನ್ನು 1973ರಲ್ಲಿ ನಡೆದ ಮೈಸೂರು-ಕರ್ನಾಟಕ ಹೋರಾಟದಲ್ಲು ಮಾಧವಾನಂದ ಶ್ರೀಗಳು ಮುಂಚೂಣಿಯಲ್ಲಿದ್ದರು.

ಮರಣೋತ್ತರವಾಗಿ ಕರ್ನಾಟಕ ಸರ್ಕಾರದಿಂದ ಗೌರವ!

ಮಾಧವಾನಂದ ಪ್ರಭುಜೀಗಳು ಬದುಕಿನುದ್ದಕ್ಕೂ ದೇಶ-ನಾಡಿಗಾಗಿ ನಡೆಸಿದ ಹೋರಾಟ ಸಣ್ಣದಲ್ಲ. ಅದ್ರಲ್ಲು ಕರುನಾಡಿಗಾಗಿ, ಭಾಷಾವಾರು ಪ್ರಾಂತ್ಯಗಳ ರಚನೆ, ಸಂಸ್ಥಾನಗಳ ವಿಲೀನಿಕರಣ, ಮೈಸೂರು ರಾಜ್ಯ ಮರುನಾಮಕರಣ ಹೋರಾಟಗಳಲ್ಲಿ ಮಹಾದೇವರು ಮುಂಚುಣಿಯಲ್ಲಿದ್ದರು. ಅದ್ರಲ್ಲೂ ಓರ್ವ ಮಠಾಧೀಶರಾಗಿ ಹೋರಾಟಗಳಲ್ಲೂ ಸಕ್ರೀಯರಾಗಿದ್ದರಲ್ಲದೇ, ಮಠದ ಭಕ್ತರನ್ನು ದೇಶಕ್ಕಾಗಿ-ನಾಡಿಗಾಗಿ ದುಡಿಯಲು ಹಚ್ಚಿದ್ದು ಸಹ ಗಮನಾರ್ಹವಾಗಿತ್ತು. ಭಕ್ತರ ಪಾಲಿಗೆ ನಡೆದಾಡುವ ದೇವರು, ನಾಡು-ದೇಶದ ವಿಚಾರ ಬಂದಾಗ ಓರ್ವಸೇನಾನಿಯಂತಿದ್ದ ಮಹಾದೇವರ ಈ ಹೋರಾಟವನ್ನ ಗುರುತಿಸಿ ಕರ್ನಾಟಕ ಸರ್ಕಾರ ಸುವರ್ಣ ಕರ್ನಾಟಕ ರಾಜ್ಯೋತ್ಸವದಲ್ಲಿ ಮಾಧವಾನಂದ ಶ್ರೀಗಳಿಗೆ ಮರಣೋತ್ತರವಾಗಿ ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಿತ್ತು.

ಬ್ರಿಟಿಷ್‌, ಪೋರ್ಚುಗೀಜರ ವಿರುದ್ಧವು ಹೋರಾಟ..!

ಮಾಧವಾನಂದ ಶ್ರೀಗಳು ಕೇವಲ ಕರ್ನಾಟಕ ಏಕೀಕರಣವಷ್ಟೆ ಅಲ್ಲ, ಭಾರತ ಸ್ವಾತಂತ್ರ್ಯಕ್ಕಾಗಿ ಸ್ವತಃ ಬಂದೂಕು ಕಾರ್ಖಾನೆಗಳನ್ನ ತೆರೆದು ಭಕ್ತರ ಜೊತೆಗೂಡಿ ಬ್ರೀಟಿಷರ ವಿರುದ್ಧ ಸಶಸ್ತ್ರವಾಗಿ ಹೋರಾಡಿದ್ದರು. ಗೋವಾ ವಿಮೋಚನೆಗಾಗಿ ಪಣಜಿಯ ಪೋರ್ಚುಗೀಜ್‌ ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಸಾಹಸ ಮೆರೆದಿದ್ದರು. ಸ್ವಾತಂತ್ರ್ಯ ಹೋರಾಟದ ಬಳಿಕ ರಜಾಕರ ಹಾವಳಿ, ಭೂ ಹಿಡುವಳಿದಾರರ ವಿರುದ್ಧವು ಹೋರಾಟ ನಡೆಸಿದ್ದರು.

ಬ್ರಿಟಿಷರ ಜೊತೆಗೆ ಸಶಸ್ತ್ರವಾಗಿ ಹೋರಾಡಿದ್ದ ಇಂಚಗೇರಿ ಮಠದ ಕ್ರಾಂತಿಯೋಗಿಯ ಪುಣ್ಯಸ್ಮರಣೆ

ಮಹಾದೇವರ ಪಠ್ಯಕ್ಕಾಗಿ ಭಕ್ತರ ಆಗ್ರಹ..!

25 ಸಾವಿರಕ್ಕು ಅಧಿಕ ಅಂತರ್‌ ಧರ್ಮಿಯ, ಅಂತರ್‌ ಜಾತಿಯ ವಿವಾಹ ನಡೆಸಿ ಆಧುನಿಕ ಬಸವಣ್ಣ ಎನ್ನುವ ಕೀರ್ತಿಗು ಪಾತ್ರರಾಗಿದ್ದರು. ಈಗ ದೇಶ-ನಾಡು-ಸಮಾಜಕ್ಕೆ ಇಷ್ಟೊಂದು ಕೊಡುಗೆ ನೀಡಿದ ಮಾಧವಾನಂದರ ಶ್ರೀಗಳ ಜೀವನ-ಸಾಧನೆಯನ್ನ ಶಾಲಾ ಮಕ್ಕಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಪಾಠ್ಯವಾಗಿ ಭೋದಿಸಬೇಕು ಎನ್ನುವ ಆಗ್ರಹವನ್ನ ಮಠದ ಭಕ್ತರು ಸರ್ಕಾರದ ಮುಂದಿಡುತ್ತಿದ್ದಾರೆ. ಇನ್ನು ಮಹಾದೇವರ ಸ್ವಾತಂತ್ರ್ಯ ಹೋರಾಟದ ಕುರಿತು ಓಂ ಸಾಯಿ ಪ್ರಕಾಶ ನಿರ್ದೇಶನದಲ್ಲಿ ಕ್ರಾಂತಿಯೋಗಿ ಮಹಾದೇವರು ಸಿನಿಮಾ ಕೂಡ ತೆರೆಕಂಡಿತ್ತು. ಈಗ ಶಾಲಾ ಮಕ್ಕಳಿಗು ಶ್ರೀಗಳ ಆದರ್ಶ ಪಾಠವಾಗಬೇಕು ಅನ್ನೋದು ಕೋಟ್ಯಾಂತರ ಭಕ್ತರ ಆಶಯವಾಗಿದೆ..

click me!