ರಾಜ್ಯದಲ್ಲಿ ಮೂವರಿಂದ 133 ಮಂದಿಗೆ ಸೋಂಕು!

Published : Apr 26, 2020, 07:14 AM ISTUpdated : Apr 26, 2020, 07:53 AM IST
ರಾಜ್ಯದಲ್ಲಿ ಮೂವರಿಂದ 133 ಮಂದಿಗೆ ಸೋಂಕು!

ಸಾರಾಂಶ

ರಾಜ್ಯದಲ್ಲಿ ಮೂವರಿಂದ 133 ಮಂದಿಗೆ ಸೋಂಕು!| ಕೊರೋನಾ ವೇಗ ಹೆಚ್ಚಿಸುತ್ತಿರುವ ಸೋಂಕು ವಾಹಕರು| ನಂಜನಗೂಡು ವ್ಯಕ್ತಿ, ಬಿಹಾರಿ, ಅಜ್ಜಿಯಿಂದ ಸೋಂಕು| ನಂಜನಗೂಡಿನ ವ್ಯಕ್ತಿಯಿಂದ 72 ಮಂದಿಗೆ ಸೋಂಕು| ಬಿಹಾರ ವ್ಯಕ್ತಿಯಿಂದ 29 ಮಂದಿಗೆ ಸೋಂಕು| 32 ಮಂದಿಗೆ ಸೋಂಕು ಹಂಚಿದ ವಿಜಯಪುರ ಅಜ್ಜಿ

ಬೆಂಗಳೂರು(ಏ.26): ದಕ್ಷಿಣ ಕೊರಿಯಾದಲ್ಲಿ ಸಾವಿರಾರು ಮಂದಿಗೆ ಸೋಂಕು ಹರಡಲು ಕಾರಣವಾದ ‘ಪೇಷೆಂಟ್‌-31’ ಎಂಬ ಹೆಸರು ಪಡೆದಿದ್ದ ಮಹಿಳಾ ಸೋಂಕಿತೆಯ ಮಾದರಿಯಲ್ಲಿ ಕರ್ನಾಟಕದಲ್ಲೂ ಕೇವಲ ಮೂರು ಮಂದಿ ಇತರ 133 ಜನರಿಗೆ ಸೋಂಕು ತಗುಲಿಸಿದ್ದಾರೆ. ನೂರಾರು ಮಂದಿಗೆ ಸೋಂಕು ಹಬ್ಬಿಸಿ ಇವರು ‘ಸೂಪರ್‌ ಸ್ಪ್ರೆಡರ್ಸ್‌’ (ಸೋಂಕು ವಾಹಕರು) ಎನಿಸಿಕೊಂಡಿದ್ದಾರೆ.

ಬೆಂಗಳೂರಿನ ಹೊಂಗಸಂದ್ರದಲ್ಲಿ ಬಿಹಾರ ಪ್ರಯಾಣ ಹಿನ್ನೆಲೆ ಹೊಂದಿರುವ ಒಬ್ಬ ವ್ಯಕ್ತಿಯಿಂದ ಬರೋಬ್ಬರಿ 29 ಮಂದಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ. ಹಾಗೆಯೇ ನಂಜನಗೂಡು ವ್ಯಕ್ತಿಯಿಂದ 72 ಮಂದಿಗೆ, ವಿಜಯಪುರದ ಅಜ್ಜಿಯೊಬ್ಬರಿಂದ 32 ಮಂದಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಪತ್ತೆಯಾಗಿರುವ 500 ಕೇಸುಗಳಲ್ಲಿ ಈ ಮೂವರಿಂದಲೇ 133 ಮಂದಿಗೆ ತಗುಲಿದಂತಾಗಿದೆ. ಇನ್ನು ರಾಜ್ಯದಲ್ಲಿ ದೆಹಲಿ ಮೂಲದಿಂದ ಬರೋಬ್ಬರಿ 173 ಸೋಂಕು (ದೆಹಲಿ ಹಾಗೂ ತಬ್ಲೀಘಿ ಹಿನ್ನೆಲೆ) ಆಮದಾಗಿದೆ.

ಸೋಂಕಿನ ಮೂಲದ ಬಗ್ಗೆ ಬಾಯಿ ಬಿಡದ ಬಿಹಾರಿ!

ಒಬ್ಬರಿಂದಲೇ 4 ಜಿಲ್ಲೆಗೆ ವೈರಸ್‌:

ನಂಜನಗೂಡು ಔಷಧ ಕಂಪೆನಿಯಲ್ಲಿ ಮೊದಲ ಸೋಂಕಿಗೆ ಗುರಿಯಾದ 35 ವರ್ಷದ ವ್ಯಕ್ತಿಯಿಂದ ಈವರೆಗೆ ಆತನ ಪತ್ನಿ, ಸಹೋದ್ಯೋಗಿಗಳು ಸೇರಿದಂತೆ 37 ಮಂದಿಗೆ ನೇರವಾಗಿ ಹಾಗೂ 34 ಮಂದಿಗೆ ದ್ವಿತೀಯ, ತೃತೀಯ ಹಂತದ ಸಂಪರ್ಕದಿಂದಾಗಿ ಸೋಂಕು ಹರಡಿದೆ. ಕೇವಲ ಮೈಸೂರು ಮಾತ್ರವಲ್ಲದೆ ಬಳ್ಳಾರಿ, ಮಂಡ್ಯ ಹಾಗೂ ಬೆಂಗಳೂರಿನಲ್ಲೂ ಪ್ರಕರಣದಿಂದ ಸೋಂಕು ಹರಡಿದೆ.

ಹೊಂಗಸಂದ್ರದ 29 ಮಂದಿಗೆ:

ಬೆಂಗಳೂರಿನ ಹೊಂಗಸಂದ್ರದ ಜನತೆಯ ನಿದ್ದೆಗೆಡಿಸಿರುವ ಬಿಹಾರ ಪ್ರಯಾಣ ಹಿನ್ನೆಲೆ ಹೊಂದಿರುವ ಸೋಂಕಿತನಿಂದ 6 ವರ್ಷದ ಪುಟ್ಟಮಗು ಸೇರಿದಂತೆ ಒಟ್ಟು 29 ಮಂದಿಗೆ ಸೋಂಕು ಹರಡಿದೆ. ವಿಚಾರಣೆ ವೇಳೆ ಬೆಂಗಳೂರಿನ ಇನ್ನೂ ಹಲವು ಪ್ರದೇಶಗಳಿಗೆ ಭೇಟಿ ನೀಡಿರುವುದಾಗಿ ಬಿಹಾರಿ ಸೋಂಕಿತ ಬಾಯಿ ಬಿಟ್ಟಿದ್ದು, ಸ್ಥಳೀಯ ಜನತೆ ಹಾಗೂ ಬಿಬಿಎಂಪಿ ನಿದ್ದೆಗೆಡಿಸಿದೆ.

32 ಮಂದಿಗೆ ಸೋಂಕು ಹಂಚಿದ ಅಜ್ಜಿ:

ವಿಜಯಪುರದಲ್ಲಿ 221ನೇ ರೋಗಿಯಾದ 60 ವರ್ಷದ ಅಜ್ಜಿಗೆ ಮೊದಲು ಸೋಂಕು ದೃಢಪಟ್ಟಿತ್ತು. ಬಳಿಕ 13 ವರ್ಷದ ಬಾಲಕನಿಗೆ ಸೋಂಕು ಹರಡಿತ್ತು. ಈ ಇಬ್ಬರೂ ಮಹಾರಾಷ್ಟ್ರದ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬಂದಿದ್ದರು. ಬಳಿಕ ಇವರ ಕುಟುಂಬದರು ಹಾಗೂ ನೆರೆ ಮನೆಯವರು ಸೇರಿ ಬರೋಬ್ಬರಿ 32 ಮಂದಿಗೆ ಸೋಂಕು ಹಂಚಿದ್ದಾರೆ. ವಿಜಯಪುರದಲ್ಲಿ ವರದಿಯಾಗಿರುವ 37 ಪ್ರಕರಣಗಳಲ್ಲಿ ಗುರುವಾರ ವರದಿಯಾಗಿರುವ 1 ಪ್ರಕರಣ ಸೇರಿ 32 ಮಂದಿಗೆ ಅಜ್ಜಿಯೇ ಸೋಂಕು ಹಂಚಿದ್ದಾರೆ.

ಬಿಹಾರ ಕಾರ್ಮಿಕನಿಂದ ಸಮುದಾಯಕ್ಕೆ ಸೋಂಕು?

ದೆಹಲಿಯಿಂದ 173 ಸೋಂಕು ಆಮದು!:

ರಾಜ್ಯದಲ್ಲಿ ಪ್ರಮುಖ ಕ್ಲಸ್ಟರ್‌ಗಳಲ್ಲಿ ತಬ್ಲೀಘಿ ಜಮಾತ್‌ ಹಾಗೂ ದೆಹಲಿ ಪ್ರಯಾಣ ಹಿನ್ನೆಲೆ ಹೊಂದಿರುವವರು ಪ್ರಮುಖರು. ದೆಹಲಿ ಪ್ರಯಾಣ ಹಿನ್ನೆಲೆ ಹೊಂದಿದ್ದ 23 ಮಂದಿಯಿಂದ ಪ್ರಾಥಮಿಕ, ದ್ವಿತೀಯ ಹಂತದ ಸಂಪರ್ಕ ಸೇರಿ 92 ಮಂದಿಗೆ ರಾಜ್ಯದಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ದೇಶಾದ್ಯಂತ ಆತಂಕ ಸೃಷ್ಟಿಸಿದ್ದ ತಬ್ಲೀಘಿ ಜಮಾತ್‌ನಲ್ಲಿ ಭಾಗವಹಿಸಿದ್ದ 28 ಮಂದಿಗೆ ಹಾಗೂ ಅವರಿಂದ ಬಂದಿರುವ ಸೋಂಕು ಸೇರಿ 81 ಮಂದಿಗೆ ಸೋಂಕು ಹರಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡೀಮ್ಡ್‌ ಅರಣ್ಯ ಪ್ರದೇಶದ ಪುನರ್‌ ಪರಿಶೀಲನೆಗಾಗಿ ಸಮಿತಿ: ಸಚಿವ ಈಶ್ವರ್‌ ಖಂಡ್ರೆ
ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!