ಬಿಗ್​ ಬ್ರೇಕಿಂಗ್: ಕರ್ನಾಟಕದಲ್ಲಿ 500ಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ

By Suvarna News  |  First Published Apr 25, 2020, 5:44 PM IST

ಹಂತ-ಹಂತವಾಗಿ ಲಾಕ್‌ಡೌನ್ ಸಡಿಲಿಕೆ ಮಧ್ಯೆ ರಾಜ್ಯದಲ್ಲಿ ಕೊರೋನಾ ವೈರಸ್ ಮಾಹಾಮಾರಿ ಅಟ್ಟಹಾಸ ಮುಂದುವರಿದಿದೆ.


ಬೆಂಗಳೂರು, (ಏ.25): ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ 26 ಜನರು ಕೊರೊನಾ ಸೋಂಕಿಗೊಳಗಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆಯಾಗಿದೆ. 

ಇಲ್ಲಿವರೆಗೆ 158 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 18 ಜನರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.

26 new cases have been confirmed for in Karnataka from 24 April, 5 pm to 25 April, 5 pm. Total positive cases in the state stand at 500 which includes 18 deaths and 158 discharges: Health Department, Karnataka pic.twitter.com/i6QGwsF7Yt

— ANI (@ANI)

Latest Videos

undefined

ಇನ್ನು ಚಿಕಿತ್ಸೆಯಿಂದ ಗುಣಮುಖರಾದವರು ಮತ್ತು ಸಾವಿಗೀಡಾದವರ ಹೊರತಾಗಿ ರಾಜ್ಯದಲ್ಲಿ 324 ಆ್ಯಕ್ಟಿವ್ ಪ್ರಕರಣಗಳಿವೆ. ಇವುಗಳಲ್ಲಿ 317 ಮಂದಿ ಸಾಮಾನ್ಯ ವಾರ್ಡ್​ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಮಂದಿ ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಬುಲೆಟಿನ್ ಹೊರಡಿಸಿದೆ.

ಶನಿವಾರ ಜಿಲ್ಲಾವಾರು ಪತ್ತೆಯಾದ ಸೋಂಕಿತರ ಅಂಕಿ ಸಂಖ್ಯೆ
ಬೆಂಗಳೂರು- 13
ಬೆಳಗಾವಿ- 9
ಮಂಡ್ಯ- 1
ಮೈಸೂರು- ನಂಜನಗೂಡು- 1
ಚಿಕ್ಕಬಳ್ಳಾಪುರ- 1 ಮತ್ತು ದಕ್ಷಿಣ ಕನ್ನಡದಲ್ಲಿ ಒಬ್ಬರು ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ.

click me!