ವೈಯಕ್ತಿಕ ಆದಾಯ ತೆರಿಗೆಗೆ ಇರುವಂತೆ ಕೈಗಾರಿಕೆಗಳಿಗೂ ತೆರಿಗೆ ಪದ್ಧತಿಯನ್ನು ಸರಳೀಕರಣಗೊಳಿಸಿ ಸ್ವಯಂ ಘೋಷಿತ ತೆರಿಗೆ ಪದ್ಧತಿ ಜಾರಿಗೊಳಿಸಲಾಗುವುದು. ಜತೆಗೆ ಆರ್ ಆ್ಯಂಡ್ ಡಿ ನೀತಿ ಕುರಿತು ಮುಂದಿನ ಅಧಿವೇಶನದಲ್ಲಿ ಚರ್ಚಿಸಿ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿ (ಜು.17): ವೈಯಕ್ತಿಕ ಆದಾಯ ತೆರಿಗೆಗೆ ಇರುವಂತೆ ಕೈಗಾರಿಕೆಗಳಿಗೂ ತೆರಿಗೆ ಪದ್ಧತಿಯನ್ನು ಸರಳೀಕರಣಗೊಳಿಸಿ ಸ್ವಯಂ ಘೋಷಿತ ತೆರಿಗೆ ಪದ್ಧತಿ ಜಾರಿಗೊಳಿಸಲಾಗುವುದು. ಜತೆಗೆ ಆರ್ ಆ್ಯಂಡ್ ಡಿ ನೀತಿ ಕುರಿತು ಮುಂದಿನ ಅಧಿವೇಶನದಲ್ಲಿ ಚರ್ಚಿಸಿ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗಳ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕೈಗಾರಿಕೆಗಳು ಆಸ್ತಿ ತೆರಿಗೆ ಸಮಸ್ಯೆ ಎದುರಿಸುವುದು ಗಮನಕ್ಕಿದೆ. ಎರಡು ಬಗೆಯ ತೆರಿಗೆ ವ್ಯವಸ್ಥೆ ತೆಗೆದು ಏಕರೂಪದ ತೆರಿಗೆ ಪದ್ಧತಿ ಜಾರಿಗೆ ತರುತ್ತೇವೆ. ಅದರಲ್ಲೂ ತೆರಿಗೆ ಸರಳೀಕರಣ ಮಾಡಿ, ಸ್ವಯಂ ಘೋಷಿತ ತೆರಿಗೆ ಪದ್ಧತಿ ಜಾರಿಗೊಳಿಸಲಾಗುವುದು. ಈ ಕುರಿತು ಉನ್ನತ ಮಟ್ಟದ ಸಭೆ ನಡೆಸಿ ಫಿಟ್ಮೆಂಟ್ ಅಂತಿಮಪಡಿಸುತ್ತೇವೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಆರ್ ಆ್ಯಂಡ್ ಡಿ ನೀತಿ ಹಾಗೂ ಉದ್ಯೋಗ ನೀತಿ ಅಂಗೀಕರಿಸಲಾಗುವುದು. ದೇಶದಲ್ಲೆ ಮೊದಲ ಬಾರಿಗೆ ಈ ನೀತಿ ಸಮಗ್ರವಾಗಿ ಜಾರಿಯಾಗಲಿದೆ ಎಂದರು.
ಮಲೆನಾಡಿನ ಅತಿವೃಷ್ಠೀ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಭೇಟಿ: ಪರಿಶೀಲನೆ
ನವಕರ್ನಾಟಕದಿಂದ ನವಭಾರತ ನಿರ್ಮಾಣ: ಹೆಚ್ಚು ಉದ್ಯೋಗ ನೀಡುವ ಕೈಗಾರಿಕೆಗಳಿಗೆ ಪ್ರೋತ್ಸಾಹ ಹೆಚ್ಚಿಸಲಾಗುವುದು. ಜತೆಗೆ ಮಹಿಳೆಯರಿಗೆ ಹೆಚ್ಚು ಉದ್ಯೋಗ ನೀಡುವ, ಸಾಹಸಿ ಪ್ರವೃತ್ತಿಯ ಕೈಗಾರಿಕೆಗಳ ಬೆನ್ನಿಗೆ ಸರ್ಕಾರ ನಿಲ್ಲಲಿದೆ. ಕೈಗಾರಿಕೆಗಳು ಎದುರಿಸುತ್ತಿರುವ ಜಿಎಸ್‌ಟಿ ಸಮಸ್ಯೆ ವಿಶೇಷವಾಗಿ ಆಹಾರೋದ್ಯಮಗಳಿಗೆ ಉಂಟಾಗಿರುವ ತೊಂದರೆ ನಿವಾರಿಸಲು ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಭರವಸೆ ನೀಡಿದರು. ನ. 2 ಹಾಗೂ 3ರಂದು ಬೆಂಗಳೂರಿನಲ್ಲಿ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನದಲ್ಲಿ ಸ್ಥಳೀಯ ಕನ್ನಡಿಗ ಉದ್ದಿಮೆದಾರರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕು. ಉದ್ಯಮದ ಎಲ್ಲ ರಂಗಗಳಲ್ಲಿ ಕನ್ನಡಿಗರು ಅಗ್ರಸ್ಥಾನದಲ್ಲಿ ಇರಬೇಕು. ನವಕರ್ನಾಟಕದಿಂದ ನವಭಾರತ ನಿರ್ಮಾಣ ಘೋಷಣೆ ಸಾಕಾರಕ್ಕೆ ಸರ್ಕಾರ ಕೈಗಾರಿಕೋದ್ಯಮಿಗಳ ಬೆನ್ನಿಗೆ ನಿಲ್ಲಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಆರು ಹೊಸ ಟೌನ್‌ಶಿಪ್ ಅಭಿವೃದ್ಧಿ: ರಾಜ್ಯದಲ್ಲಿ ಹೊಸ ಆರು ಟೌನ್‌ಶಿಪ್ ಅಭಿವೃದ್ಧಿಪಡಿಸಲಾಗುವುದು ಎಂದ ಬೊಮ್ಮಾಯಿ, ನವೀಕರಿಸಬಹುದಾದ ಇಂಧನಗಳ ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇ. 43ರಷ್ಟಿದೆ. ಎಥೆನಾಲ್ ಹಾಗೂ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ರಾಜ್ಯವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ವಾಣಿಜ್ಯೋದ್ಯಮ ಸಂಸ್ಥೆಗಳು ಸರ್ಕಾರ, ಉದ್ಯಮ ಹಾಗೂ ಉದ್ಯೋಗ ಸೃಜನೆಯ ನಡುವೆ ಕೊಂಡಿಗಳಾಗಬೇಕು. ಸರ್ಕಾರ ಎಲ್ಲ ನೆರವು, ಪ್ರೋತ್ಸಾಹ ನೀಡಲಿದೆ ಎಂದರು.
ದ್ವೀಪದಂತಾಗಿರುವ ಉಕ್ಕಡಗಾತ್ರಿ ಕ್ಷೇತ್ರ: ಭಕ್ತರು ಎಚ್ಚರ ವಹಿಸುವಂತೆ ಜಿಲ್ಲಾಡಳಿತ ಸೂಚನೆ
ಜಾಗತೀಕರಣ ಮುಕ್ತ ಆರ್ಥಿಕ ನೀತಿಗಳು ನೇರವಾಗಿ ಜನಸಾಮಾನ್ಯನ ಮೇಲೆ ಪರಿಣಾಮ ಬೀರಿವೆ. ನಮ್ಮ ಎಲ್ಲ ನಿರ್ಣಯಗಳ ಹಿಂದೆ ಲಾಭ-ನಷ್ಟದ ಉದ್ದೇಶ ಮಾತ್ರವಲ್ಲದೇ ಸಾಮಾಜಿಕ ದೃಷ್ಟಿಯ ಅರಿವು ಸ್ಪಷ್ಟವಾಗಿರಬೇಕು. ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ನಡುವೆ ಅಂತಃಕರಣ ಮರೆ ಆಗಬಾರದರು. ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರಗಳು ಪರಸ್ಪರ ಪೂರಕವಾಗಿ ಸಾಗಬೇಕು. ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ದೊಡ್ಡ ಪ್ರಮಾಣದ ಪ್ರತಿಭೆ ಇದೆ. ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಿ ಪ್ರತಿಭೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.