ಮುಂದಿನ 15 ದಿನಗಳ ಕಾಲ ಮಾಲ್ ಆಫ್ ಏಷ್ಯಾ ಸಂಪೂರ್ಣ ಬಂದ್! ಕಾರಣ ಇಲ್ಲಿದೆ

By Ravi Janekal  |  First Published Dec 30, 2023, 8:33 PM IST

ಕನ್ನಡ ನಾಮಫಲಕ ವಿಚಾರವಾಗಿ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮುಂದಿನ 15 ದಿನಗಳ ಕಾಲ ಮಾಲ್ ಆಫ್ ಏಷ್ಯಾ ಸುತ್ತಮುತ್ತ  144ಸೆಕ್ಷನ್ ಜಾರಿ ಮಾಡಿ ಆದೇಶಿಸಲಾಗಿದೆ.


ಬೆಂಗಳೂರು (ಡಿ.30): ಕನ್ನಡ ನಾಮಫಲಕ ವಿಚಾರವಾಗಿ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮುಂದಿನ 15 ದಿನಗಳ ಕಾಲ ಮಾಲ್ ಆಫ್ ಏಷ್ಯಾ ಸುತ್ತಮುತ್ತ  144ಸೆಕ್ಷನ್ ಜಾರಿ ಮಾಡಿ ಆದೇಶಿಸಲಾಗಿದೆ.

ಆದೇಶದಂತೆ ಮುಂದಿನ 15 ದಿನಗಳ ಕಾಲ ಮಾಲ್ ಆಫ್ ಏಷ್ಯಾ ಸುತ್ತಮುತ್ತ 5ಕ್ಕಿಂತ ಹೆಚ್ಚು ಜನ ಸೇರೋ ಹಾಗಿಲ್ಲ. ಅಕ್ಟೋಬರ್ ವರೆಗೆ ಓಪನ್ ಆಗಿದ್ದ ಮಾಲ್ ಆಫ್ ಏಷ್ಯಾ. ವಾಣಿಜ್ಯ ಮಳಿಗೆಗಳು, ಶಾಪ್‌ಗಳು ಫ್ಯಾಕ್ಟರಿಗಳು ಕಡ್ಡಾಯವಾಗಿ ನಾಮಪಲಕ ಅಳವಡಿಸಿಕೊಳ್ಳುವಂತೆ ಬೆಂಗಳೂರಿನಾದ್ಯಂತ ಹೋರಾಟ ಮಾಡಿದ್ದ ಕರವೇ ಕಾರ್ಯಕರ್ತರು. 

Tap to resize

Latest Videos

ಆಸ್ತಿ ತೆರಿಗೆ ಪಾವತಿ ಮಾಡದ ಹಿನ್ನೆಲೆ ಕಳೆದೆರಡು ದಿನಗಳಿಂದ ಕ್ಲೋಸ್ ಆಗಿದ್ದ ಮಂತ್ರಿಮಾಲ್ ಇಂದು ಓಪನ್

ಪ್ರತಿಭಟನೆ ವೇಳೆ ಕನ್ನಡ ನಿರ್ಲಕ್ಷ್ಯ ಮಾಡಿದ್ದ ಮಾಲ್ ಆಫ್ ಏಷ್ಯಾ ಮೇಲೆ ದಾಳಿ‌ ನಡೆಸಿದ್ದ ಕರವೇ ಕಾರ್ಯಕರ್ತರು. ಈ ವೇಳೆ ನಾಮಪಲಕ ಹೊಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ರು. ಈ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾರಾಯಣಗೌಡ ಸೇರಿ ಹಲವು ಕನ್ನಡ ಪರ ಕಾರ್ಯಕರ್ತರ ಬಂಧಿಸಲಾಗಿದೆ. ನಾರಾಯಣಗೌಡರ ಬಂಧನದಿಂದ ಮತ್ತಷ್ಟು ಉಗ್ರ ಹೋರಾಟಕ್ಕೆ ಕರೆ ಕೊಟ್ಟಿರುವ ಕನ್ನಡ ಸಂಘಟನೆಗಳು. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ, ಯಾವುದೇ ಅಹಿತಕರ ಘಟನೆ ನಡೆಯದಂತೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಮುಂದಿನ 15 ದಿನಗಳ ಕಾಲ ಮಾಲ್ ಆಫ್ ಏಷ್ಯಾ ಸಂಪೂರ್ಣ ಕ್ಲೋಸ್ ಆಗಲಿದೆ.

ಏಷ್ಯಾ ಮಾಲ್‌ಗೆ ನುಗ್ಗಿ ಗಲಾಟೆ ಆರೋಪ; ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಎಫ್‌ಐಆರ್!

click me!