ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ನಿಲುವು ಸ್ಪಷ್ಟವಾಗಿದ್ದು, ಯಥಾ ಸ್ಥಿತಿ ಕಾಯ್ದುಕೊಳ್ಳುವುದು, ಇಲ್ಲವೇ ಮಹಾಜನ ವರದಿ ಜಾರಿಗೆ ಆಗ್ರಹಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ. ಪಾಟೀಲ ಸರ್ಕಾರಕ್ಕೆ ಸಲಹೆಯನ್ನ ನೀಡಿದ್ದಾರೆ.
ಗದಗ (ನ.30) : ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ನಡೆಯಲ್ಲ. ರಾಜ್ಯಗಳ ಗಡಿ ವಿಚಾರ ಪಾರ್ಲಿಮೆಂಟ್ ವಿಷಯವಾಗಿದೆ. ನ್ಯಾಯಾಲಯದಲ್ಲಿ ಪರಿಗಣಿಸಬೇಕಾ ಬೇಡವೋ ಎನ್ನುವುದೇ ಚರ್ಚೆಯಲ್ಲಿದೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಗಡಿ ವಿಷಯವಾಗಿ ಖ್ಯಾತೆ ತೆಗೆದಿದೆ. ಆದರೆ, ಕರ್ನಾಟಕದ ನಿಲುವು ಸ್ಪಷ್ಟವಾಗಿದ್ದು, ಯಥಾ ಸ್ಥಿತಿ ಕಾಯ್ದುಕೊಳ್ಳುವುದು, ಇಲ್ಲವೇ ಮಹಾಜನ ವರದಿ ಜಾರಿಗೆ ಆಗ್ರಹಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ. ಪಾಟೀಲ ಸರ್ಕಾರಕ್ಕೆ ಸಲಹೆಯನ್ನ ನೀಡಿದ್ದಾರೆ.
ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ರಾಜ್ಯಗಳ ಗಡಿ ವಿವಾದದ ಸಂದರ್ಭದಲ್ಲಿ ಸರ್ಕಾರದವರು ನಿರ್ಧಾರ ತೆಗೆದುಕೊಳ್ಳಬೇಕು. ಈಗಾಗಲೇ ಗಡಿ ವಿವಾದದ ಕುರಿತಾಗಿ ಯಾವ ಕಾರಣಕ್ಕೂ ಯಾವುದೇ ರೀತಿಯ ರಾಜಕೀಯ ಮಾತುಕಥೆ ಸಾಧ್ಯವಿಲ್ಲ. ಜೊತೆಗೆ ಗಡಿ ವಿಚಾರದಲ್ಲಿ ಯಥಾ ಸ್ಥಿತಿ ಇಲ್ಲವೇ ಮಹಾಜನ ವರದಿ ಜಾರಿಗೊಳಿಸಬೇಕು ಎನ್ನುವದರ ಬಗ್ಗೆ ವಿಧಾನ ಸಭೆ, ವಿಧಾನ ಪರಿಷತ್ತಿನಲ್ಲಿ ಸರ್ವಾನುಮತದಿಂದ ನಿರ್ಣಯ ಮಾಡಿದ್ದೇವೆ. ಆದರೆ, ನಮ್ಮ ಮುಖ್ಯಮಂತ್ರಿಗಳು ಗಡಿ ವಿವಾದದ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಮತ್ತೊಬ್ಬರು, ಮಹಾರಾಷ್ಟ್ರದೊಂದಿಗಿನ ಮಾತುಕತೆ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಈ ರೀತಿ ಗಡಿ ವಿಚಾಋವಾಗಿ ಅಪಸ್ವರ, ಲೂಜ್ ಸ್ಟೇಟ್ಮೆಂಟ್ ಮಾಡುವುದು ದುರ್ದೈವ ಎಂದು ಹೇಳಿದರು.
ಗಡಿ ಸಂಘರ್ಷಕ್ಕೆ ಕಿಚ್ಚು: ಡಿ.3ಕ್ಕೆ 2 ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ, ಎಂಇಎಸ್ ಜತೆ ಚರ್ಚೆ
ರಾಜ್ಯಪಾಲರಿಗೇಕೆ ಗಡಿ ಬಗ್ಗೆ ಆಸಕ್ತಿ: ಇತ್ತೀಚೆಗೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಗವರ್ನರ್ ಭಗತ್‌ಸಿಂಗ್ ಕೋಶಾಯರಿ ಅವರೊಂದಿಗೆ ಕರ್ನಾಟಕದ ಗವರ್ನರ್ ಥಾವರಚೆಂದ ಗೆಹ್ಲೋಟ್ ಮಾತುಕತೆ ನಡೆಸಿದ್ದಾರೆ. ಅಷ್ಟಕ್ಕೂ ರಾಜ್ಯಪಾಲರಿಗೆ ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ ರಾಜ್ಯಪಾಲರೊಂದಿಗೆ ಮಾತನಾಡಲು ಯಾರು ಅನುಮತಿ ನೀಡಿದರು. ಸರ್ಕಾರಕ್ಕೆ ಈ ಕೆಲಸ ಮಾಡುವುದಕ್ಕೆ ಆಗುವುದಿಲ್ಲವೇ? ರಾಜ್ಯಪಾಲರ ಪಾಲ್ಗೊಳ್ಳುವಿಕೆ ಸರ್ಕಾರಕ್ಕೆ ಅಗತ್ಯವಿದೆಯೇ? ಮಹಾರಾಷ್ಟ್ರದಲ್ಲಿ ಸಭೆಯಲ್ಲಿ ರಾಜ್ಯಪಾಲರು ಏನು ಮಾತನಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು. ಜೊತೆಗೆ, ಮುಖ್ಯಮಂತ್ರಿಗಳು ಗಡಿ ಉಸ್ತುವಾರಿ ಸಚಿವರನ್ನ ನಿಯೋಜಿಸಬೇಕು, ಗಡಿ ಸಮಸ್ಯೆಗಳಿದ್ದರೆ ಸಚಿವರನ್ನ ಕಳುಹಿಸಬಹುದು ಎಂದು ಆಗ್ರಹಿಸಿದರು.
Border Dispute: ಗಡಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡದಂತೆ ಸೂಚನೆ : ಪ್ರಹ್ಲಾದ್ ಜೋಶಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ವಪಕ್ಷ ಸಭೆ ಕರೆಯಬೇಕು ಎಂದಿದ್ದಾರೆ. ಮಹಾರಾಷ್ಟ್ರದ ಯಾವುದೋ ಒಂದು ಹಳ್ಳಿಯಲ್ಲಿ ಠರಾವು ಮಾಡಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡುವ ಮೂಲಕ ಈಗಾಗಲೇ ಸದನದ ಕೈಗೊಳ್ಳಲಾದ ನಿರ್ಣಯದ ವಿರೋಧವಾಗಿ ಕೆಲಸ ಮಾಡಲಾಗುತ್ತದೆಯೇ? ಮಹಾಜನ ವರದಿಯಿಂದ ರಾಜ್ಯಕ್ಕೆ ಬರುವ ಜಾಗವನ್ನ ತೆಗೆದುಕೊಳ್ಳೋದಕ್ಕೆ ತಯಾರಿದ್ದೇವೆ. ಈ ವರದಿಯಿಂದ ನಮಗೂ ಕೆಲವು ನಷ್ಟ ಆದರೂ ಅಂತಿಮವಾಗಿ ಒಪ್ಪಿಕೊಳ್ಳುತ್ತೇವೆ. ಇಲ್ಲದಿದ್ದರೆ ಯಥಾ ಸ್ಥಿತಿ ಕಾಯ್ದುಕೊಳ್ಳಬೇಕು. ಇದನ್ನು ಸಿಎಂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.