ಅಕ್ರಮ ಗೋವು ಸಾಗಾಟ; ಶ್ರೀರಾಮಸೇನೆ ಕಾರ್ಯಕರ್ತರಿಂದ 11 ಗೋವುಗಳ ರಕ್ಷಣೆ

By Ravi Janekal  |  First Published Sep 17, 2023, 4:30 PM IST

ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ಕ್ಯಾಂಟರ್  ಮೇಲೆ ಶ್ರೀರಾಮಸೇನೆ ಕಾರ್ಯಕರ್ತರು ದಾಳಿ ಮಾಡಿ 11 ಗೋವುಗಳನ್ನು ರಕ್ಷಿಸಿದ ಘಟನೆ ರಾಮನಗರ ತಾಲೂಕಿನ ಜಯಪುರ ಗೇಟ್ ಬಳಿ ನಡೆದಿದೆ.


ರಾಮನಗರ (ಸೆ.17): ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ಕ್ಯಾಂಟರ್  ಮೇಲೆ ಶ್ರೀರಾಮಸೇನೆ ಕಾರ್ಯಕರ್ತರು ದಾಳಿ ಮಾಡಿ 11 ಗೋವುಗಳನ್ನು ರಕ್ಷಿಸಿದ ಘಟನೆ ರಾಮನಗರ ತಾಲೂಕಿನ ಜಯಪುರ ಗೇಟ್ ಬಳಿ ನಡೆದಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಎಂ ದೊಡ್ಡಿಯಿಂದ ಚಿಂತಾಮಣಿಗೆ ಕ್ಯಾಂಟರ್‌ ಮೂಲಕ ಗೋವುಗಳನ್ನು ಸಾಗಿಸುತ್ತಿದ್ದ ದುಷ್ಕರ್ಮಿಗಳು. ಕಸಾಯಿಖಾನೆಗೆ ಸಾಗಿಸುತ್ತಿರುವ ಮಾಹಿತಿ ಪಡೆದು ಶ್ರೀರಾಮಸೇನೆ ಕಾರ್ಯಕರ್ತರು ದಾಳಿ. ಕ್ಯಾಂಟರ್‌ನಲ್ಲಿ ಒಟ್ಟು 11 ಗೋವುಗಳನ್ನು ಅಮಾನುಷವಾದ ರೀತಿಯಲ್ಲಿ ತುಂಬಲಾಗಿತ್ತು. ವಾಹನ ಅಡ್ಡಗಟ್ಟಿದ ಶ್ರೀರಾಮಸೇನೆ ಕಾರ್ಯಕರ್ತರು ಬಳಿಕ ರಾಮನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Tap to resize

Latest Videos

ಸ್ಥಳಕ್ಕೆ ಭೇಟಿ ನೀಡಿದ ರಾಮನಗರ ಪೊಲೀಸರು ಗೋವುಗಳನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು,  ಸಾಗಾಟಕ್ಕೆ ಬಳಸಿದ್ದ ವಾಹನವನ್ನು ಜಪ್ತಿ ಮಾಡಿದ್ದಾರೆ. ಸದ್ಯ ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

2 ಲಕ್ಷ ಗೋವುಗಳ ಹತ್ಯೆ! ಹವಾಮಾನ ಬದಲಾವಣೆ ಎದುರಿಸಲು ಐರ್ಲೆಂಡ್‌ ಸರ್ಕಾರದ ದುಸ್ಸಾಹಸ

click me!