BBMP: ಬರೊಬ್ಬರಿ 45 ಸಾವಿರ ಆಸ್ತಿಗೆ ಅಕ್ರಮ ‘ಎ’ ಖಾತಾ!

Published : Jul 22, 2023, 04:23 AM ISTUpdated : Jul 22, 2023, 04:35 AM IST
BBMP: ಬರೊಬ್ಬರಿ 45 ಸಾವಿರ ಆಸ್ತಿಗೆ ಅಕ್ರಮ ‘ಎ’ ಖಾತಾ!

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎಂಟು ವರ್ಷದಲ್ಲಿ ಬರೋಬ್ಬರಿ 45 ಸಾವಿರಕ್ಕೂ ಅಧಿಕ ಆಸ್ತಿಗಳಿಗೆ ಅಕ್ರಮವಾಗಿ ‘ಎ’ ಖಾತಾ ಪ್ರಮಾಣ ಪತ್ರ ನೀಡಿರುವುದು ಪತ್ತೆಯಾಗಿದೆ.

ಬೆಂಗಳೂರು (ಜು.22) :  ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎಂಟು ವರ್ಷದಲ್ಲಿ ಬರೋಬ್ಬರಿ 45 ಸಾವಿರಕ್ಕೂ ಅಧಿಕ ಆಸ್ತಿಗಳಿಗೆ ಅಕ್ರಮವಾಗಿ ‘ಎ’ ಖಾತಾ ಪ್ರಮಾಣ ಪತ್ರ ನೀಡಿರುವುದು ಪತ್ತೆಯಾಗಿದೆ.

ನಗರದಲ್ಲಿ ‘ಬಿ’ ಖಾತಾ ಆಸ್ತಿಗಳಿಗೆ ಅಕ್ರಮವಾಗಿ ‘ಎ’ ಖಾತೆ ನೀಡುವ ಕುರಿತಂತೆ ಸಾಕಷ್ಟುದೂರುಗಳು ಬಂದ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ ನಾಲ್ವರು ಅಧಿಕಾರಿಗಳ ಸಮಿತಿ ರಚಿಸಿ ವರದಿ ನೀಡುವಂತೆ ಮುಖ್ಯ ಆಯುಕ್ತರು ನಿರ್ದೇಶಿಸಿದ್ದರು.

ಅದರಂತೆ ಹಣಕಾಸು ವಿಭಾಗದ ವಿಶೇಷ ಆಯುಕ್ತರ ತಂಡವು ಅಂಜನಾಪುರದ ಬಿಬಿಎಂಪಿಯ ಕಂದಾಯ ಉಪ ವಿಭಾಗಕ್ಕೆ ಭೇಟಿ ನೀಡಿ ಅಕ್ರಮ ಎ ಖಾತಾ ನೀಡಿದ ಎರಡು ವಾರ್ಡ್‌ಗಳ ದಾಖಲೆ ಪರಿಶೀಲನೆ ಮಾಡಿತ್ತು. ಈ ವೇಳೆ ಎರಡು ವಾರ್ಡ್‌ನಲ್ಲಿಯೇ 698 ಅಕ್ರಮ ‘ಎ’ ಖಾತಾ ಪ್ರಮಾಣ ಪತ್ರ ನೀಡಿರುವುದು ಕಂಡು ಬಂದಿತ್ತು.

ಬ್ರ್ಯಾಂಡ್‌ ಬೆಂಗಳೂರು’ ಅಭಿಯಾನ: 70 ಸಾವಿರಕ್ಕೂ ಅಧಿಕ ಜನರ ಸಲಹೆ!

ಹೀಗಾಗಿ, ಸಮಗ್ರ ತನಿಖೆಗೆ ಮುಂದಾದ ಸಮಿತಿಯು ಬಿಬಿಎಂಪಿಯ 64 ಕಂದಾಯ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳೇ ಸ್ವತಃ ತಮ್ಮ ಉಪ ವಿಭಾಗದಲ್ಲಿ ಅಕ್ರಮವಾಗಿ ‘ಎ’ ಖಾತಾ ನೀಡಿರುವ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ನೀಡುವಂತೆ ಸೂಚಿಸಲಾಗಿತ್ತು. ಆ ಪ್ರಕಾರ ಇದೀಗ 45 ಸಾವಿರಕ್ಕೂ ಅಧಿಕ ‘ಬಿ’ ಖಾತಾ ಆಸ್ತಿಗಳಿಗೆ ಅಕ್ರಮವಾಗಿ ‘ಎ’ ಖಾತಾ ನೀಡಿರುವುದು ಪತ್ತೆಯಾಗಿದೆ.

45,133 ಪ್ರಕರಣ ಪತ್ತೆ

ಕಂದಾಯ ಇಲಾಖೆಯು ಕಾನೂನು ಬದ್ಧ ಭೂಪರಿವರ್ತನೆಗೆ ಆರ್‌ ಕೋಡ್‌-130 ಬಳಸಿಕೊಂಡು ಅಭಿವೃದ್ಧಿ ಶುಲ್ಕ ಪಡೆದುಕೊಂಡು ‘ಎ’ ಖಾತಾ ನೀಡುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ, ಆರ್‌ ಕೋಡ್‌-130 ಕಾಯ್ದೆ ಮತ್ತು ನಿಯಮ ಉಲ್ಲಂಘಿಸಿ ಅಕ್ರಮವಾಗಿ ‘ಬಿ’ ಖಾತಾ ಆಸ್ತಿಗೆ ‘ಎ’ ಖಾತಾ ನೀಡಲಾಗಿದೆ. ಈ ಪೈಕಿ .1 ಲಕ್ಷಕ್ಕಿಂತ ಕಡಿಮೆ ಅಭಿವೃದ್ಧಿ ಶುಲ್ಕ ಪಡೆದು ಅಕ್ರಮವಾಗಿ 37,968 ಆಸ್ತಿಗಳಿಗೆ ‘ಎ’ ಖಾತಾ ನೀಡಲಾಗಿದೆ. .1 ಲಕ್ಷದಿಂದ .10 ಲಕ್ಷಕ್ಕೂ ಅಧಿಕ ಮೊತ್ತ ಪಡೆ​ದು 7165 ಆಸ್ತಿಗಳಿಗೆ ಅಕ್ರಮವಾಗಿ ‘ಎ’ ಖಾತಾ ನೀಡಿರುವುದು ಬೆಳಕಿಗೆ ಬಂದಿದೆ.

ಈ ಪೈಕಿ .1 ಲಕ್ಷ​ದ ಒಳಗೆ ಅಭಿವೃದ್ಧಿ ಶುಲ್ಕ ಪಾವತಿಸಿ ‘ಎ’ ಖಾತಾ ಪ್ರಮಾಣ ಪತ್ರ ಪಡೆದ 37,968 ಆಸ್ತಿಗಳಲ್ಲಿ ಶೇ.98ರಷ್ಟುಆಸ್ತಿಗಳು ಅಕ್ರಮವಾಗಿ ‘ಎ’ ಖಾತಾ ನೀಡಲಾಗಿದೆ. .1 ಲಕ್ಷದಿಂದ .10 ಲಕ್ಷವರೆಗೆ ಅಭಿವೃದ್ಧಿ ಶುಲ್ಕ ಪಾವತಿಸಿದ 7,165 ಆಸ್ತಿಗಳಲ್ಲಿ ಶೇ.50ರಷ್ಟುಆಸ್ತಿಗಳು ಅಕ್ರಮವಾಗಿ ಎ ಖಾತಾ ಪ್ರಮಾಣ ಪತ್ರ ನೀಡಲಾಗಿದೆ ಎಂದು ವಿಶೇಷ ಆಯುಕ್ತ ಜಯರಾಮ ರಾಯಪುರ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಅಕ್ರಮ ಖಾತಾ ಆಸ್ತಿ ಮತ್ತೆ ‘ಬಿ’ಗೆ ಖಾತಾ

2015-16ರಿಂದ ಈವರೆಗೆ ಅಕ್ರಮವಾಗಿ ‘ಎ’ ಖಾತಾ ಪ್ರಮಾಣಪತ್ರ ನೀಡಿದ ಎಲ್ಲಾ ಆಸ್ತಿಗಳನ್ನು ಮರಳಿ ‘ಬಿ’ ಖಾತಾ ವಹಿಗೆ ಸೇರ್ಪಡೆ ಮಾಡುವುದಕ್ಕೆ ಬಿಬಿಎಂಪಿಯ ವಲಯ ಆಯುಕ್ತರಿಗೆ ನಿರ್ದೇಶಿಸಲಾಗಿದೆ. ಅದಕ್ಕಾಗಿ ಕಂದಾಯ ಅಧಿಕಾರಿಗಳ ತಂಡ ರಚನೆ ಮಾಡಿಕೊಳ್ಳುವಂತೆ ರಾಯಪುರ ಆದೇಶದಲ್ಲಿ ತಿಳಿಸಿದ್ದಾರೆ.

ಹಣ ಕಟ್ಟಿ​ದವರಿಗೆ ಪಿಕಲಾಟ ಶುರು

2015-16ರಿಂದ ಈವರೆಗೆ ‘ಬಿ’ ಖಾತಾ ಆಸ್ತಿಗಳನ್ನು ‘ಎ’ ಖಾತಾಗೆ ಸೇರಿಸಿರುವುದರಿಂದ .898.70 ಕೋಟಿ ವಸೂಲಿ ಆಗಿದೆ. ಇದೀಗ ಅಕ್ರಮ ‘ಎ’ ಖಾತಾ ಆಸ್ತಿಗಳನ್ನು ‘ಬಿ’ ಖಾತಾಗೆ ಸೇರಿಸಲಾಗುತ್ತಿದೆ. ಇದರಿಂದ ಖಾತಾ ಬದಲಾವಣೆಗೆ ಹಣ ನೀಡಿದ ಆಸ್ತಿ ಮಾಲಿಕರು ಪಿಕಲಾಟಕ್ಕೆ ಸಿಲುಕಿದ್ದಾರೆ. ಅವರಿಗೆ ವಾಪಾಸ್‌ ಹಣ ನೀಡುವ ಬಗ್ಗೆ ಸರ್ಕಾರ ನಿರ್ಧರ ಮಾಡಬೇಕಿದೆ.

ಜತೆಗೆ, ಆಸ್ತಿ ಮಾಲಿಕರಿಂದ ಹಣ ಪಡೆದು ಅಕ್ರಮವಾಗಿ ‘ಬಿ’ ಖಾತಾ ಆಸ್ತಿಗೆ ‘ಎ’ ಖಾತಾ ಮಾಡಿಕೊಟ್ಟಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳ ವಿರುದ್ಧ ಕ್ರಮದ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ವಿಶೇಷ ಆಯುಕ್ತ ಜಯರಾಮ ರಾಯಪುರ ತಿಳಿಸಿದ್ದಾರೆ.

 

ಅಕ್ರಮ ಲೇ ಔಟ್‌ಗಳ ಆಸ್ತಿಗೆ ಬಿ ಖಾತಾ?: ಸಿಎಂ ಜತೆ ಚರ್ಚಿಸಿ ಶೀಘ್ರ ನಿರ್ಧಾರ, ಸಚಿವ ಬೈರತಿ

ಬಿಬಿಎಂಪಿ ವ್ಯಾಪ್ತಿಯಲ್ಲಿ 2015ರಿಂದ ಈವರೆಗೆ ಒಟ್ಟು 43 ಸಾವಿರಕ್ಕೂ ಅಧಿಕ ಆಸ್ತಿಗಳಿಗೆ ಅರ್ಹತೆ ಇಲ್ಲದಿದ್ದರೂ ನಿಯಮ ಬಾಹಿರವಾಗಿ ಅಭಿವೃದ್ಧಿ ಶುಲ್ಕ ಪಡೆದು ಅಕ್ರಮವಾಗಿ ‘ಎ’ ಖಾತಾ ಪ್ರಮಾಣ ಪತ್ರ ನೀಡಿರುವುದು ಪತ್ತೆಯಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ‘ಬಿ’ ಖಾತಾಗೆ ಸೇರಿಸುವಂತೆ ಸೂಚಿಸಲಾಗಿದೆ.

-ಜಯರಾಮ್‌ ರಾಯಪುರ, ಅಧ್ಯಕ್ಷ, ಅಕ್ರಮ ಖಾತಾ ಪರಿಶೀಲಿನಾ ಸಮಿತಿ

ವಲಯವಾರು ಅಕ್ರಮ ಖಾತಾ ವಿವರ

ವಲಯ ಅಕ್ರಮ ಖಾತಾ ಪ್ರಕರಣ ಸಂಗ್ರಹಿಸಿದ ಮೊತ್ತ(ಕೋಟಿ .)

  • ಬೊಮ್ಮನಹಳ್ಳಿ 6413 129.31
  • ದಾಸರಹಳ್ಳಿ 3927 31.28
  • ಪೂರ್ವ 6136 21.46
  • ಮಹದೇವಪುರ 12,334 427.69
  • ಆರ್‌ಆರ್‌ನಗರ 3,422 92.17
  • ದಕ್ಷಿಣ 2157 8.13
  • ಪಶ್ಚಿಮ 4623 8.43
  • ಯಲಹಂಕ 6,121 180.22
  • ಒಟ್ಟು 45,133 898.70

ಯಾವ ವರ್ಷ ಎಷ್ಟುಅಕ್ರಮ ಖಾತಾ?

ವರ್ಷ ಅಕ್ರಮ ಖಾತಾ

  • 2015-16 3,242
  • 2016-17 5,427
  • 2017-18 5,780
  • 2018-19 6,742
  • 2019-20 6,011
  • 2020-21 5412
  • 2021-22 5331
  • 2022-23 6371
  • 2023-24 817
  • ಒಟ್ಟು 45,133

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ