ಐಐಎಸ್‌ಸಿಯಲ್ಲಿ 'ಓಪನ್ ಡೇ' ಕಾರ್ಯಕ್ರಮ; ಇಂದು ಸಾರ್ವಜನಿಕರಿಗೆ ಮುಕ್ತ ಪ್ರವೇಶ!

By Kannadaprabha News  |  First Published Feb 24, 2024, 5:45 AM IST

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಫೆ. 24ರಂದು ಆಯೋಜಿಸಿರುವ ‘ಓಪನ್‌ ಡೇ’ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವ ಸಾಧ್ಯತೆ ಹಿನ್ನೆಲೆ ನಗರ ಸಂಚಾರ ಪೊಲೀಸರು ಐಐಎಸ್ಸಿ ಸುತ್ತಮುತ್ತಲ ರಸ್ತೆಗಳ ಸಂಚಾರ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ಮಾಡಿದ್ದಾರೆ.


ಬೆಂಗಳೂರು (ಫೆ.24): ನಗರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಫೆ. 24ರಂದು ಆಯೋಜಿಸಿರುವ ‘ಓಪನ್‌ ಡೇ’ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವ ಸಾಧ್ಯತೆ ಹಿನ್ನೆಲೆ ನಗರ ಸಂಚಾರ ಪೊಲೀಸರು ಐಐಎಸ್ಸಿ ಸುತ್ತಮುತ್ತಲ ರಸ್ತೆಗಳ ಸಂಚಾರ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ಮಾಡಿದ್ದಾರೆ.
ಬೆಳಗ್ಗೆ 9 ಗಂಟೆಯಿಂದ ಸಂಜೆ 6 ರವರೆಗೆ ಈ ಓಪನ್‌ ಡೇ ಕಾರ್ಯಕ್ರಮ ಜರುಗಲಿದೆ. 

ಕಾರ್ಯಕ್ರಮದ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸುಮಾರು 100ರಿಂದ 150 ಬಸ್‌ಗಳು, 250-350 ಕಾರುಗಳು ಹಾಗೂ ದ್ವಿಚಕ್ರ ವಾಹನಗಳಲ್ಲಿ ಸುಮಾರು 60-80 ಸಾವಿರ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಗಮಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ವಾಹನ ಸಂಚಾರ, ವಾಹನ ನಿಲುಗಡೆ ಸೇರಿದಂತೆ ಕೆಲ ವ್ಯವಸ್ಥೆಗಳನ್ನು ಮಾಡಲಾಗಿದೆ.

Tap to resize

Latest Videos

ಶ್ವಾಸಕೋಶದ ಕ್ಯಾನ್ಸರ್ ಆರೈಕೆಯಲ್ಲಿ ಮಹತ್ವದ ಸಾಧನೆ ಮಾಡಿದ IISc

ಯಾವ ವಾಹನ ಎಲ್ಲಿ ನಿಲುಗಡೆ?

ಶಾಲಾ ಬಸ್/ನಾಲ್ಕು ಚಕ್ರ ವಾಹನಗಳು:

ಮಹಾರಾಣಿ ಲಕ್ಷ್ಮೀ ಅಮ್ಮಣ್ಣ ಕಾಲೇಜು ಬಳಿ ಮೈದಾನದ ಎದುರು ನಿಲುಗಡೆ ಮಾಡಬೇಕು. ಬಳಿಕ ಕಾಲು ನಡಿಗೆಯಲ್ಲಿ ಸರ್ಕಲ್‌ ಮಾರಮ್ಮ ಜಂಕ್ಷನ್‌ಗೆ ಬಂದು ಸಬ್‌ ವೇ ಸೊಸೈಟಿ ಫಾರ್‌ ಇನೋವೇಶನ್‌ ಆ್ಯಂಡ್‌ ಡೆವಲಪ್‌ಮೆಂಟ್‌(ಎಸ್‌ಐಡಿ) ಮುಖಾಂತರ ಐಐಎಸ್ಸಿ ಕ್ಯಾಂಪಸ್‌ ತಲುಪಬೇಕು.

ದ್ವಿಚಕ್ರ ವಾಹನಗಳು:ಐಐಎಸ್ಸಿ ಜಮಖಾನಾ ಮೈದಾನದ ಬದಿಯಲ್ಲಿ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಬೇಕು. ಬಳಿಕ ಪ್ರೊ.ಸಿ.ಎನ್‌.ರಾವ್‌ ವೃತ್ತದಲ್ಲಿರುವ ಐಐಎಸ್ಸಿ ಮುಖ್ಯಗೇಟ್‌ ಮುಖಾಂತರ ಐಐಎಸ್ಸಿ ಕ್ಯಾಂಪಸ್‌ ತಲುಪಬೇಕು.

ಬದಲಿ ಮಾರ್ಗ- ಕಾರ್ಯಕ್ರಮ ಹೊರತುಪಡಿಸಿ ಇತರೆ ಸ್ಥಳಗಳಿಗೆ ತೆರಳುವ ರಸ್ತೆ ಬಳಕೆದಾರರು ಬದಲಿ ಮಾರ್ಗ ಬಳಸಿ
*ಸರ್.ಸಿ.ವಿ.ರಾಮನ್ ರಸ್ತೆ: ಮೇಕ್ರಿ ಸರ್ಕಲ್‌ನಿಂದ ಬಿಎಚ್ಇಎಲ್ ಸರ್ಕಲ್ ವರೆಗೆ

ನ್ಯೂಬಿಇಎಲ್ ರಸ್ತೆ: ಸದಾಶಿವನಗರ ಪಿ.ಎಸ್ ಜಂಕ್ಷನ್‌ನಿಂದ ರೈಲ್ವೇ ಬ್ರಿಡ್ಜ್ ವರೆಗೆ
*ಟಿ.ಚೌಡಯ್ಯ ರಸ್ತೆ: ಸಿ.ಎನ್.ಆರ್.ರಾವ್ ಅಂಡರ್‌ಪಾಸ್‌ನಿಂದ ಕಾವೇರಿ ಜಂಕ್ಷನ್ ವರೆಗೆ

ಮಾರ್ಗೋಸಾ ರಸ್ತೆ: ಮಾರಮ್ಮ ಸರ್ಕಲ್‌ನಿಂದ ಮಲ್ಲೇಶ್ವರಂ 18ನೇ ಕ್ರಾಸ್ ವರೆಗೆಈ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ
- ಸರ್.ಸಿ.ವಿ.ರಾಮನ್ ರಸ್ತೆ: ಮೇಕ್ರಿ ಸರ್ಕಲ್‌ನಿಂದ ಬಿಎಚ್ಇಎಲ್ ಸರ್ಕಲ್ ವರೆಗೆ ರಸ್ತೆಯ ಎರಡೂ ಬದಿ 

- ನ್ಯೂಬಿಇಎಲ್ ರಸ್ತೆ: ಸದಾಶಿವನಗರ ಪಿ.ಎಸ್ ಜಂಕ್ಷನ್‌ನಿಂದ ರೈಲ್ವೇ ಬ್ರಿಡ್ಜ್ ವರೆಗೆ ರಸ್ತೆಯ ಎರಡೂ ಬದಿ
- ಟಿ.ಚೌಡಯ್ಯ ರಸ್ತೆ: ಸಿ.ಎನ್.ಆರ್.ರಾವ್ ಅಂಡರ್‌ಪಾಸ್‌ನಿಂದ ಕಾವೇರಿ ಜಂಕ್ಷನ್ ವರೆಗೆ ರಸ್ತೆ ಎರಡೂ ಬದಿ

- ಮಾರ್ಗೋಸಾ ರಸ್ತೆ: ಮಾರಮ್ಮ ಸರ್ಕಲ್‌ನಿಂದ ಮಲ್ಲೇಶ್ವರಂ 18ನೇ ಕ್ರಾಸ್ ವರೆಗೆ 

ವಿಶ್ವದ ಟಾಪ್‌ ವಿವಿ ಪಟ್ಟಿ ಬಿಡುಗಡೆ, 91 ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಅಗ್ರಸ್ಥಾನ ಪಡೆದ ಐಐಎಸ್‌ಸಿ ಬೆಂಗಳೂರು

ಸರಕು ಸಾಗಣೆ ವಾಹನ ಸಂಚಾರ ನಿಷೇಧ

ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆ ಮತ್ತು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಭಾರೀ ಸರಕು ಸಾಗಾಣೆ ವಾಹನಗಳ ನಗರ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಎಲ್ಲೆಲ್ಲಿ ಮಾರ್ಗ ಬದಲಾವಣೆ?

ಯಶವಂತಪುರ ಸರ್ಕಲ್: ಸುಬ್ರಮಣ್ಯನಗರ, ರಾಜಕುಮಾರ್ ರಸ್ತೆ ಕಡೆಗೆಮೇಕ್ರಿಸರ್ಕಲ್: ಸದಾಶಿವನಗರ ಪಿ.ಎಸ್. ಜಂಕ್ಷನ್ ಕಡೆಗೆ, ಹೆಬ್ಬಾಳದ ಕಡೆಗೆ
 

click me!