ಜಾಗತಿಕ ವಿವಿ ಪಟ್ಟಿ: ಬೆಂಗಳೂರಿನ ಐಐಎಸ್ಸಿಗೆ 14ನೇ ರ‍್ಯಾಂಕ್​

By Web DeskFirst Published Jan 17, 2019, 11:57 AM IST
Highlights

ಜಾಗತಿಕ ವಿವಿ ಪಟ್ಟಿ: ಬೆಂಗಳೂರಿನ ಐಐಎಸ್ಸಿಗೆ 14ನೇ ರ‍್ಯಾಂಕ್​

ಲಂಡನ್‌[ಜ.17]: ಲಂಡನ್‌ ಮೂಲದ ಟೈಮ್ಸ್‌ ಹೈಯರ್‌ ಎಜುಕೇಶನ್‌ ಸಂಸ್ಥೆ ಪ್ರಕಟಿಸಿರುವ ಜಾಗತಿಕ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ 49 ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ. ಅವುಗಳ ಪೈಕಿ 25 ವಿಶ್ವವಿದ್ಯಾಲಯಗಳು ಅಗ್ರ 200ರ ಪಟ್ಟಿಯಲ್ಲಿವೆ.

ಟೈಮ್ಸ್‌ ಹೈಯರ್‌ ಎಜುಕೇಶನ್‌ ಪ್ರಕಟಿಸಿರುವ 2019ರ ಪಟ್ಟಿಯಲ್ಲಿ ಚೀನಾ ಮೊದಲ ಸ್ಥಾನ ಪಡೆದಿದೆ. ಟಿಶಿಂಗ್ಹು ವಿಶ್ವವಿದ್ಯಾಲಯ ಮೊದಲ ಸ್ಥಾನ ಪಡೆದುಕೊಂಡಿದೆ. ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ 14ನೇ ಸ್ಥಾನ ಪಡೆದಿದೆ. ಬಳಿಕ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬಾಂಬೆ 27ನೇ ಸ್ಥಾನದಲ್ಲಿದೆ. 43 ದೇಶಗಳ 450 ವಿಶ್ವವಿದ್ಯಾಲಯಗಳನ್ನು ಆಧರಿಸಿ ಈ ಪಟ್ಟಿಯನ್ನು ಪ್ರಕಟಿಸಲಾಗಿದ್ದು, 2018ರಲ್ಲಿ ಭಾರತದ 42 ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿದ್ದಕ್ಕೆ ಹೋಲಿಸಿದರೆ, ಈ ಬಾರಿ 49 ವಿಶ್ವವಿದ್ಯಾಲಯಗಳು ಪಟ್ಟಿಯಲ್ಲಿವೆ. ಅಗ್ರ 200 ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆದ ವಿಶ್ವವಿದ್ಯಾಲಯಗಳ ಸಂಖ್ಯೆ 17ರಿಂದ 25ಕ್ಕೆ ಏರಿಕೆಯಾಗಿದೆ.

click me!