ಹಿರಿಯರಿಗೆ ಗುಡ್ ನ್ಯೂಸ್ : ಏರಿತು ಮಾಸಿಕ ಪಿಂಚಣಿ

By Web DeskFirst Published Jan 17, 2019, 9:29 AM IST
Highlights

ಹಿರಿಯರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಕರ್ನಾಟಕ ಸರ್ಕಾರ ಹಿರಿಯ ನಾಗರಿಕರಿಗೆ ಕೊಡುಗೆಯನ್ನು ನೀಡುತ್ತಿದೆ. 7ನೇ ವೇತನ ಆಯೋಗದ ಅನ್ವಯ 90 ವರ್ಷ ಮೇಲ್ಪಟ್ಟವರ ಪಿಂಚಣಿ ಏರಿಕೆ ಮಾಡಲಾಗುತ್ತಿದೆ. 

ಬೆಂಗಳೂರು :  ರಾಜ್ಯ ಸರ್ಕಾರದ ನಿವೃತ್ತ ನೌಕರರ ಪೈಕಿ 90 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿರುವ ಪಿಂಚಣಿ ಪ್ರಮಾಣವನ್ನು ಸರ್ಕಾರ ಪರಿಷ್ಕರಿಸಿ ಆದೇಶ ಮಾಡಿದೆ.

6ನೇ ವೇತನ ಆಯೋಗದ ಶಿಫಾರಸಿನನ್ವಯ ಪಿಂಚಣಿ ಪ್ರಮಾಣ ಪರಿಷ್ಕರಿಸಿರುವ ರಾಜ್ಯ ಸರ್ಕಾರ, 90 ವರ್ಷದಿಂದ 95 ವರ್ಷದವರೆಗಿನ ನಿವೃತ್ತ ನೌಕರರಿಗೆ/ ನೌಕರರ ಕುಟುಂಬಕ್ಕೆ್ಕ ಈ ವರೆಗೆ ನೀಡಲಾಗುತ್ತಿದ್ದ ಮೂಲ ಪಿಂಚಣಿ ಮೊತ್ತದ ಶೇ.40ರಷ್ಟುಹೆಚ್ಚಳ ಮಾಡಿದೆ. 

95 ವರ್ಷದಿಂದ 100 ವರ್ಷದವರೆಗಿನವರಿಗೆ ನೀಡುತ್ತಿದ್ದ ಮೂಲ ಪಿಂಚಣಿ ಮೊತ್ತದಲ್ಲಿ ಶೇ.50ರಷ್ಟುಮತ್ತು 100 ವರ್ಷ ಮೇಲ್ಪಟ್ಟ ನಿವೃತ್ತಿ ನೌಕರರಿಗೆ ಮೂಲ ಪಿಂಚಿಣಿಯ ಶೇ.100ರಷ್ಟುಹೆಚ್ಚಳ ಮಾಡಿ ಹಣಕಾಸು ಇಲಾಖೆ (ಪಿಂಚಿಣಿ) ಜಂಟಿ ಕಾರ್ಯದರ್ಶಿ ವೈ.ಕೆ.ಪ್ರಕಾಶ್‌ ಇತ್ತೀಚೆಗೆ ಆದೇಶ ಮಾಡಿದ್ದಾರೆ.

click me!