ಅವ್ರು ಹಿಬಾಜ್ ಧರಿಸಿದ್ರೆ ನಾವು ಕೇಸರಿ ಶಾಲು ಧರಿಸುತ್ತೇವೆ: ಕಲ್ಲಡ್ಕ ಪ್ರಭಾಕರ್ ಭಟ್ ಸವಾಲು

By Govindaraj S  |  First Published Dec 25, 2023, 7:43 AM IST

ಸರ್ಕಾರ ಹಿಬಾಜ್ ಧರಿಸಲು ಅವಕಾಶ ನೀಡಿದರೆ ನಾವು ಕೇಸರಿ ಶಾಲು ಧರಿಸುತ್ತೇವೆ. ಟೋಪಿ ಧರಿಸಿ ಶಾಲೆಗೆ ಬರುತ್ತೇವೆ. ಅಲ್ಲಾ ಹು ಅಕ್ಬರ್ ಅಂದರೇ ನಾವು ಜೈ ಶ್ರೀರಾಮ್ ಎನ್ನುತ್ತೇವೆ. 


ಶ್ರೀರಂಗಪಟ್ಟಣ (ಡಿ.25): ಸರ್ಕಾರ ಹಿಬಾಜ್ ಧರಿಸಲು ಅವಕಾಶ ನೀಡಿದರೆ ನಾವು ಕೇಸರಿ ಶಾಲು ಧರಿಸುತ್ತೇವೆ. ಟೋಪಿ ಧರಿಸಿ ಶಾಲೆಗೆ ಬರುತ್ತೇವೆ. ಅಲ್ಲಾ ಹು ಅಕ್ಬರ್ ಅಂದರೇ ನಾವು ಜೈ ಶ್ರೀರಾಮ್ ಎನ್ನುತ್ತೇವೆ. ಶಾಲೆಗಳಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗುತ್ತೇವೆ. ತಾಕತ್ತು ಇದ್ದರೆ ತಡೆಯಿರಿ ಎಂದು ಪ್ರಾಂತ ಕಾರ್ಯಕಾರಿಣಿ ಅಮಂತ್ರಿತ ಸದಸ್ಯ ಮತ್ತು ಶ್ರೀರಾಮ ವಿದ್ಯಾಸಂಸ್ಥೆ ಸ್ಥಾಪಕ ಕಲ್ಲಡ್ಕ ಪ್ರಭಾಕರ್ ಭಟ್ ಸವಾಲು ಹಾಕಿದರು. ಪಟ್ಟಣದಲ್ಲಿ ಗಂಜಾಂನ ನಿಮಿಷಾಂಭ ದೇವಾಲಯದ ಬಳಿ ಹಿಂದೂ ಸಂಘಟನೆಗಳ ಸಹಯೋಗದಲ್ಲಿ ನಿರ್ಮಿಸಿದ್ದ ಬೃಹತ್ ಸಮಾವೇಶದಲ್ಲಿ ಹನುಮ ದೇವಾಲಯದ ಬಳಿ ಹನುಮಾ ಮಾಲಾಧಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆದು ಪ್ರತ್ಯೇಕತೆ ಬೀಜ ಬಿತ್ತುತ್ತೀರಾ. ಯಾರಲ್ಲೂ ಭೇದಭಾವ ಬರಬಾರದೆಂದು ಸಮವಸ್ತ್ರ ಇದೆ. ಹಿಜಾಬ್ ತರುವ ತಾಕತ್ ಇದೆಯಾ. ತಾಕತ್ ಇದ್ದರೆ ಹಿಜಾಬ್ ವಾಪಸ್ ತರುವ ಪ್ರಯತ್ನ ಮಾಡಿ ಎಂದು ಆಗ್ರಹಿಸಿದರು. ಮಂಡ್ಯದಲ್ಲಿ ಈ ಹಿಂದೆ ಕಾಲೇಜು ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಅಲ್ಲಾ ಹು ಅಕ್ಬರ್ ಘೋಷಣೆ ಹೇಳಿದ್ದಳು. ನೀನು ನಿನ್ನ ಮನೆ, ಮಸೀದಿಯಲ್ಲಿ ಈ ಘೋಷಣೆ ಕೂಗಿಕೋ. ಇದು ಹಿಂದುಗಳ ನಾಡು, ಈ ದೇಶದಲ್ಲಿ ರಾಮ್ ರಾಮ್ ಎಂದು ಹೇಳಬೇಕು. 

Tap to resize

Latest Videos

ಈ ದೇಶದಲ್ಲಿ ಇರಬೇಕಾದರೆ ಎಲ್ಲರಂತೆ ನೀನು ಸಹ ಇರಬೇಕು ಎಂದು ಸಲಹೆ ಮಾಡಿದರು. ಮುಸ್ಕಾನ್‌ಗೆ ಹಣ, ಶಹಬ್ಬಾಶ್‌ಗಿರಿ ಕೊಟ್ಟದ್ದು ಭಯೋತ್ಪಾದಕ ಸಂಘಟನೆ ಅಲ್‌ ಖೈದಾ. ಆ ಸಂಘಟನೆ ಜೊತೆ ಸಂಪರ್ಕದಲ್ಲಿರುವ ಹೆಣ್ಣು ಮಗಳು ಮಂಡ್ಯದಲ್ಲಿದ್ದಾಳೆ. ಹುಷಾರಿಗರಬೇಕು. ನಾಳೆಯಿಂದ ಕಾಲೇಜಿಗೆ ಹೋಗುವುದಾಗಿ ಆಕೆ ಹೇಳಿದ್ದಾಳೆ. ತಾಕತ್ ಇದ್ದರೆ ಅವಳು ಕಾಲೇಜಿಗೆ ಹೋಗಲಿ ಎಂದು ಎಚ್ಚರಿಸಿದರು. ವಿದ್ಯಾರ್ಥಿಗಳಲ್ಲಿ ಭೇದ ಭಾವ ಬರಬಾರದೆಂಬ ಉದ್ದೇಶದಿಂದ ಶಾಲಾ, ಕಾಲೇಜುಗಳಲ್ಲಿ ಸಮವಸ್ತ್ರ ಇದೆ. 

ಹಿಜಾಬ್‌ ಸಭೆ ಗೊತ್ತಿಲ್ಲ, ಸಮವಸ್ತ್ರ ವಿಚಾರದಲ್ಲಿ ಗೊಂದಲವಿಲ್ಲ: ಸಚಿವ ಮಧು ಬಂಗಾರಪ್ಪ

ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಹಿಜಾಬ್ ಜಾರಿಗೆ ತರುತ್ತೇವೆ ಎಂಬ ಹೇಳಿಕೆ ನೀಡಿ ವಿದ್ಯಾರ್ಥಿಗಳಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡಲು ಮುಂದಾಗುತ್ತಿದ್ದಾರೆ ಎಂದು ಕಿಡಿಕಾರಿದರು. ವೇದಿಕೆಯಲ್ಲಿ ಹಿಂದೂ ಜಾಗರಣಾ ವೇದಿಕೆ ಸಂಚಾಲಕ ಮಾರ್ಕಂಡೇಯ, ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ, ಪ್ರಾಂಥ ಸಂಚಾಲಯ ಕೇಶವ ಮೂರ್ತಿ, ಜಿಲ್ಲಾ ಸಹ ಸಂಚಾಲಕ ಚಂದನ್, ಜೋ. ಕುಮಾರಸ್ವಾಮಿ ಸೇರಿದಂತೆ ಹಿಂದೂಪರ ಸಂಘಟನೆಗಳ ಮುಂಖಡರು ಹಾಗೂ 10 ಸಾವಿರಕ್ಕೂ ಹೆಚ್ಚು ಮಾಲಾಧಾರಿಗಳು ಇದ್ದರು.

click me!