Karnataka Assembly Session ಒಮಿಕ್ರೋನ್‌ ಹೆಚ್ಚಾದರೆ ಅಧಿವೇಶನ ಮೊಟಕು?

By Kannadaprabha News  |  First Published Dec 13, 2021, 6:16 AM IST
  • ದೇಶದಲ್ಲೇ ಮೊದಲ ಒಮಿಕ್ರೋನ್‌ ಪ್ರಕರಣಗಳು ರಾಜ್ಯದಲ್ಲಿ ಪತ್ತೆ
  • ಇದರ ನಡುವೆ ಅಧಿವೇಶನ ನಡೆಯುತ್ತಿರುವುದು ಬೆಳಗಾವಿ ಅಧಿವೇಶನದ ಮೇಲೆ ಕಾರ್ಮೋಡ 

ಬೆಳಗಾವಿ(ಡಿ.13) : ದೇಶದಲ್ಲೇ ಮೊದಲ ಒಮಿಕ್ರೋನ್‌ (omicron) ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದ್ದು, ಇದರ ನಡುವೆ ಅಧಿವೇಶನ ನಡೆಯುತ್ತಿರುವುದು ಬೆಳಗಾವಿ ಅಧಿವೇಶನದ (Belagavai assembly Session) ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ. ಇದೀಗ ದಕ್ಷಿಣ ಆಫ್ರಿಕಾದಿಂದ(dakshina africa) ಬೆಂಗಳೂರಿಗೆ ಆಗಮಿಸಿದ ಮತ್ತೊಬ್ಬ ವ್ಯಕ್ತಿಗೆ ಭಾನುವಾರ ರಾಜ್ಯದಲ್ಲಿ ಒಮಿಕ್ರೋನ್‌ ದೃಢಪಟ್ಟಿದೆ. ಒಮಿಕ್ರೋನ್‌ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಾದರೆ ಅವಧಿಗೆ ಮೊದಲೇ ಅಧಿವೇಶನ ಮೊಟಕುಗೊಳ್ಳುವ ಸಾಧ್ಯತೆ ಇದೆ.

ಬೆಳಗಾವಿ ಉತ್ತರಾಧಿವೇಶನಕ್ಕೆ ಸುವರ್ಣಸೌಧ ಸಜ್ಜು

Tap to resize

Latest Videos

 ಕುಂದಾನಗರಿಯಲ್ಲಿ ಎರಡು ವರ್ಷದ ನಂತರ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧವು ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.

ಇಡೀ ಸುವರ್ಣ ವಿಧಾನ ಸೌಧವನ್ನು (Vidhan Soudha)  ಸ್ವಚ್ಛಗೊಳಿಸಿ ಹೂವಿನಿಂದ ಅಲಂಕರಿಸಲಾಗಿದೆ. ಪಶ್ಚಿಮ ದ್ವಾರದಲ್ಲಿ ಕೆಂಪು ಹಾಸಿಗೆ ಹಾಕಿ ಹೂವಿನ ಕುಂಡಗಳನ್ನಿಟ್ಟು ಶೃಂಗರಿಸಲಾಗಿದೆ. ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ಸುವ್ಯವಸ್ಥಿತವಾಗಿ ಸಿದ್ಧಗೊಳಿಸಲಾಗಿದೆ. ಪ್ರತಿ ಕೊಠಡಿಯನ್ನು ಸ್ವಚ್ಛಗೊಳಿಸಿ ಹೊಸ ಮೆರಗು ನೀಡಲಾಗಿದೆ. ಕೋವಿಡ್‌ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕಳೆದ ಒಂದು ತಿಂಗಳಿನಿಂದ ಸುವರ್ಣ ವಿಧಾನ ಸೌಧದ ನಿರ್ವಹಣೆ ಮಾಡಲಾಗುತ್ತಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ 23 ಕಚೇರಿಗಳನ್ನು (office) ಕೆಳಮಹಡಿಗೆ ಸ್ಥಳಾಂತರಿಸಲಾಗಿದೆ. ಅವರಣದಲ್ಲಿ ವಾಹನ ನಿಲುಗಡೆಗೆ (Vehicle parking) ನೆಲಸಮ ತಟ್ಟುಗೊಳಿಸಲಾಗುತ್ತಿದೆ. ಇಂಟರ್‌ನೆಟ್‌, ವೆಬ್‌ ಕಾಸ್ಟಿಂಗ್‌ಗೆ ಅವಕಾಶ ಮಾಡಲಾಗಿದೆ. ಆಧಿವೇಶನ ಆಚ್ಚಕಟ್ಟಾಗಿ ಅಯೋಜಿಸಲಾಗಿದೆ. ಅಧಿವೇಶನ ವೇಳೆ ತಾಲೂಕು ಮಟ್ಟದಲ್ಲಿ ತಹಸೀಲ್ದಾರರು, ತಾಲೂಕು ಪಂಚಾಯಿತಿ (Taluk Panchayat) ಕಾರ್ಯ ನಿರ್ವಾಹಕ ಅಧಿಕಾರಿಗಳು, ಪುರಸಭೆಯ ಅಧಿಕಾರಿಗಳು ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಸಮಸ್ಯೆ ನಿವಾರಣೆ ಕೋರಿ ಜನರು ಸುವರ್ಣಸೌಧಕ್ಕೆ ಬಾರದಂತೆ ಎಚ್ಚರಿಕೆ ವಹಿಸುವಂತೆ ನಿರ್ದೇಶನ ನೀಡಲಾಗಿದೆ.

ಮಧ್ಯಾಹ್ನ ಊಟಕ್ಕಷ್ಟೇ ವ್ಯವಸ್ಥೆ:  ಇನ್ನು, ಶಾಸಕರ ವಿಶೇಷ ಕಾರ್ಯದರ್ಶಿ ಹೊರತುಪಡಿಸಿ ಆಪ್ತ ಸಹಾಯಕರು ಸೇರಿದಂತೆ ಇತರರಿಗೆ ಸುವರ್ಣ ವಿಧಾನಸೌಧದಲ್ಲಿ ಮಧ್ಯಾಹ್ನ ಮಾತ್ರ ಊಟದ ವ್ಯವಸ್ಥೆ (Food)  ಮಾಡಲಾಗಿದೆ. ಬೆಳಗ್ಗೆ ಮತ್ತು ರಾತ್ರಿ ವೇಳೆ ಸ್ವಂತ ವೆಚ್ಚದಲ್ಲಿ ತಿಂಡಿ, ಊಟ ಮಾಡಿಕೊಳ್ಳಬೇಕಿದೆ ಎಂದು ಮೂಲಗಳು ಹೇಳಿವೆ. ಈ ಹಿಂದೆ ಮೂರು ಹೊತ್ತು ತಿಂಡಿ ಮತ್ತು ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಸ್ವಂತ ಖರ್ಚಿನಲ್ಲಿಯೇ ತಿಂಡಿ, ಊಟ ಮಾಡುವಂತೆ ಸರ್ಕಾರ ಹೇಳಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಹಲವು ವಿಚಾರ ಚರ್ಚೆ :   ಬೆಳಗಾವಿಯಲ್ಲಿ(Belagavi) ಚಳಿಗಾಲದ ಅಧಿವೇಶ(Winter Session) ಆರಂಭವಾಗುತ್ತದೆ. ಈ ಸಂಬಂಧ ಈಗಾಗಲೇ ಎಲ್ಲಾ ತಯಾರಿಯನ್ನ ಮಾಡಿದ್ದೇವೆ. ಅಧಿವೇಶದಲ್ಲಿ ಉತ್ತರ ಕರ್ನಾಟಕ(North Karnataka) ಭಾಗದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತೇವೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ. 

"

ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ(Conversion Prohibition Act) ಮಂಡನೆ ವಿಚಾರ‌ದ ಬಗ್ಗೆ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ರೈಸ್ತ(Christian) ಸಮುದಾಯದವರು ನನ್ನನ್ನು ಭೇಟಿ ಮಾಡಿದ್ರು, ಅವರಿಗೆ ತುಂಬಾ ಸ್ಪಷ್ಟವಾಗಿ ಹೇಳಿದ್ದೇನೆ. ಹಿಂದೂ(Hindu), ಇಸ್ಲಾಂ(Islam), ಕ್ರಿಶ್ಚಿಯನ್, ಸಿಖ್(Sikh) ಸೇರಿದಂತೆ ಎಲ್ಲಾ ಧರ್ಮಗಳು ಸಂವಿಧಾನಾತ್ಮಕವಾಗಿ ರಚನೆಯಾಗಿವೆ. ಅವರಿಗೆ ಯಾವುದೇ ಆತಂಕ ಬೇಡ. ಅವರಿಗೆ ಯಾವುದೇ ತೊಂದರೆಯಾಗಲ್ಲ. ಬದಲಾಗಿ ಬಡತನವನ್ನ ದುರುಪಯೊಗ ಮಾಡಿಕೊಂಡು ಮತಾಂತರ(Conversion) ಮಾಡೋದು ತಪ್ಪು. ಆಸೆ ಆಮೀಷ ಒಡ್ಡಿ ಮತಾಂತರ ಆಗೋದಕ್ಕೆ ಅವಕಾಶವಿಲ್ಲ. ಮತಾಂತರ ಕಾಯ್ದೆ ಚರ್ಚೆಗೂ ಮೊದಲು ಒಂದು ಕಮೀಟಿ ಮಾಡಿದ್ದೇವೆ. ಕಾನೂನು ಇಲಾಖೆಯ ಕಮೀಟಿ ಪರಿಶೀಲನೆ ಮಾಡುತ್ತಿದೆ ಅಂತ ಹೇಳಿದ್ದಾರೆ. 

Belagavi Winter Session: ಅಧಿವೇಶನದ ಮೊದಲ ದಿನವೇ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ

ಕಮೀಟಿ ನೀಡುವ ವರದಿ ನಮ್ಮ ಕ್ಯಾಬಿನೆಟ್‌ಗೆ ಬರುತ್ತೆ. ಈ ಸಂಬಂಧ ಬೆಳಗಾವಿಯಲ್ಲಿ ಸಂಪುಟ ಸಭೆ ನಡೆಸುತ್ತೇವೆ. ಅಲ್ಲಿಂದ ಅಸೆಂಬ್ಲಿಗೆ ಬಂದ್ರೆ ಬೆಳಗಾವಿಯಲ್ಲೇ ಚರ್ಚೆ ಮಾಡುತ್ತೇವೆ. ಯಾವ ಧರ್ಮಕ್ಕೂ(Religion) ಆತಂಕವಾಗಬಾರದು‌. ಮತಾಂತರ ಅನ್ನೋದು ಸಮಾಜಕ್ಕೆ ಒಳ್ಳೆಯದಲ್ಲ. ಕಾನೂನು ತರುವ ಪ್ರಯತ್ನವನ್ನ ನಮ್ಮ ಸರ್ಕಾರ ಮಾಡುತ್ತಿದೆ ಅಂತ ತಿಳಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ(Narendra Modi)ಟ್ವಿಟರ್ ಹ್ಯಾಕ್(Twitter Hack) ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಪ್ರಧಾನಿಗಳು ರಿಯಾಕ್ಟ್ ಮಾಡಿದ್ದಾರೆ. ಅದರ ವಿರುದ್ಧ ಕಾರ್ಯಾಚರಣೆ ಕೂಡ ಮಾಡಿದ್ದಾರೆ. ಈ ರೀತಿ ಅಲ್ಲಲ್ಲಿ ಘಟನೆಗಳು ಆಗುತ್ತಿವೆ. ತಾಂತ್ರಿಕ ಬಲದಿಂದ ಅವುಗಳನ್ನ ರಕ್ಷಣೆ ಮಾಡುವ ಕೆಲಸ ಮಾಡುತ್ತೇವೆ ಅಂತ ಹೇಳಿದ್ದಾರೆ. 

click me!