Border Dispute: ಮಹಾರಾಷ್ಟ್ರ ಸಚಿವರು ಕರ್ನಾಟಕಕ್ಕೆ ಬಂದರೆ ಸೂಕ್ತ ಕ್ರಮ : ಸಿಎಂ ಬೊಮ್ಮಾಯಿ

By Sathish Kumar KH  |  First Published Dec 5, 2022, 11:01 AM IST

ಮಹಾರಾಷ್ಟ್ರ- ಕರ್ನಾಟಕ ಜನರ ನಡುವೆ ಸಾಮರಸ್ಯ ಇದ್ದ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ ಗಡಿ ವಿವಾದದ ಕುರಿತಾಗಿ ಸುಪ್ರೀಂ ಕೋರ್ಟಗೆ ಅರ್ಜಿ ಹಾಕಲಾಗಿದೆ. ಈಗ ಎರಡೂ ರಾಜ್ಯಗಳಲ್ಲಿ ಗಡಿ ವಿವಾದ ಆರಂಭವಾಗಿದೆ. ಇಂತಹ ವೇಳೆ ಮಹಾರಾಷ್ಟ್ರದ ಸಚಿವರು ರಾಜ್ಯಕ್ಕೆ ಆಗಮಿಸುವುದು ಬೇಡವೆಂದು ಸೂಚಿಸಲಾಗಿದೆ. ಒಂದು ವೇಳೆ ಆಗಮಿಸಿದರೆ ನಮ್ಮ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.


ಹುಬ್ಬಳ್ಳಿ (ಡಿ.5): ಮಹಾರಾಷ್ಟ್ರ- ಕರ್ನಾಟಕ ಜನರ ನಡುವೆ ಸಾಮರಸ್ಯ ಇದ್ದ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ ಗಡಿ ವಿವಾದದ ಕುರಿತಾಗಿ ಸುಪ್ರೀಂ ಕೋರ್ಟಗೆ ಅರ್ಜಿ ಹಾಕಲಾಗಿದೆ. ಈಗ ಎರಡೂ ರಾಜ್ಯಗಳಲ್ಲಿ ಗಡಿ ವಿವಾದ ಆರಂಭವಾಗಿದೆ. ಇಂತಹ ವೇಳೆ ಮಹಾರಾಷ್ಟ್ರದ ಸಚಿವರು ರಾಜ್ಯಕ್ಕೆ ಆಗಮಿಸಿದರೆ ಕಾನೂನು ಸುವ್ಯವಸ್ಥೆ ಹದಗೆಡಲಿದೆ. ಹಾಗಾಗಿ, ಸಚಿವರು ಕರ್ನಾಟಕಕ್ಕೆ ಆಗಮಿಸುವುದು ಬೇಡವೆಂದು ಸೂಚಿಸಲಾಗಿದೆ. ಒಂದು ವೇಳೆ ಆಗಮಿಸಿದರೆ ನಮ್ಮ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವ ಕುರಿತು ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಕುರಿತು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸಚಿವರು ಕರ್ನಾಟಕಕ್ಕೆ ಬರೋದು ಬೇಡ. ಈಗಾಗಲೇ ನಮ್ಮ ಮುಖ್ಯ ಕಾರ್ಯದರ್ಶಿಗಳು, ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಲಿಖಿತವಾಗಿ ಪತ್ರವನ್ನು ಬರೆದು ತಿಳಸಿದ್ದಾರೆ. ಈಗಿರುವ ವಾತಾವರಣದಲ್ಲಿ ಸಚಿವರು ಬರೋದು ಬೇಡ ಎಂದು ತಿಳಿಸಲಾಗಿದೆ. ಅವರು ಬಂದಲ್ಲಿ ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಆಗತ್ತದೆ. ಹೀಗಾಗಿ ಅವರು ಬರುವುದು ಉಚಿತ ಅಲ್ಲ ಎಂದು ಸ್ಪಷ್ಟವಾಗಿ ಪತ್ರದ ಮೂಲಕ ತಿಳಿಸಲಾಗಿದೆ. ಆದರೂ ಅಲ್ಲಿನ ಸಚಿವರು ರಾಜ್ಯಕ್ಕೆ ಬರುತ್ತೇನೆ ಎಂದು ಹೇಳುವುದು ಸರಿಯಾದ ಕ್ರಮ ಅಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

Tap to resize

Latest Videos

ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಬರಬೇಡಿ: ಸಿಎಂ ಬೊಮ್ಮಾಯಿ

ಸಚಿವರ ಮೇಲೆ ಕ್ರಮಕ್ಕೆ ಸೂಚನೆ: ಎರಡೂ ರಾಜ್ಯಗಳು ಸಾಮರಸ್ಯದಿಂದ ಇದ್ದ ಸಂದರ್ಭದಲ್ಲಿ ಗಡಿವಿವಾದ ಎಬ್ಬಿಸಿದೆ. ಆದರೆ, ಎರಡೂ ರಾಜ್ಯಗಳ ನಡುವಿನ ಗಡಿವಿವಾದ ಕರ್ನಾಟಕದ ಪ್ರಕಾರ ಮುಗಿದು ಹೋಗಿರುವ ಅಧ್ಯಾಯವಾಗಿದೆ. ಆದರೆ, ಮಹಾರಾಷ್ಟ್ರ ಪದೇ ಪದೇ ಖ್ಯಾತೆ ತಗೆದು, ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ. ಜೊತೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮುಖಂಡರು ಮತ್ತು ಕಾರ್ಯಕರ್ತರು ಮನವಿ ಮೇರೆಗೆ ರಾಜ್ಯಕ್ಕೆ ಬರುವಂತಹ ಸಾಹಸ ಮಾಡುತ್ತಿದ್ದಾರೆ. ಅವರು ಆಗಮಿಸಿದಲ್ಲಿ ನಮ್ಮ ಅಧಿಕಾರಿಗಳು ಕ್ರಮ ಕೈಗೊಳ್ತಾರೆ. ಈ ಬಗ್ಗೆ ನಾನು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನು ಪ್ರತಿಭಂದಕ ಕಾಯ್ದೆ ಜಾರಿ ಮಾಡೋ ವಿಚಾರವಾಗಿ ಈ ಹಿಂದೆ ಇದೇ ತರಹ ಘಟನೆಗಳು ನಡೆದಾಗ ಸರ್ಕಾರ ಯಾವ ಕ್ರಮ ಕೈಗೊಂಡಿದೆಯೋ, ಅಂತಹ ಎಲ್ಲ ಕ್ರಮಗಳನ್ನು ಈಗಲೂ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಕೇಸರಿ ಶಾಲೆ ವಿಚಾರ ಚರ್ಚೆ ಮಾಡೊಲ್ಲ: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೇಸರಿ ಶಾಲೆಗಳನ್ನು ತೆರೆಯುವ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಪರ- ವೊರೋಧ ಚರ್ಚೆ ಆಗುತ್ತಿದೆ. ಆದರೆ, ಇದರ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾನು ಈ ಬಗ್ಗೆ ಚರ್ಚೆ ಮಾಡುವುದಕ್ಕೆ ಹೋಗುವುದಿಲ್ಲ. ಮೊದಲು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡೋದು ನಮ್ಮ ಲಕ್ಷ್ಯ ಇದೆ ಎಂದು ತಿಳಿಸಿದರು.

ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ತರ್ಲೆ ಮಾಡೋಕೆ ಬಂದರೆ ಕಠಿಣ ಕ್ರಮ: ಎಡಿಜಿಪಿ ವಾರ್ನಿಂಗ್

ನಾಳೆ ಮಹಾರಾಷ್ಟ್ರ ಸಚಿವರ ಆಗಮನಕ್ಕೆ ಭಾರಿ ವಿರೋಧ: ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಪ್ರಕರಣ ನಾಳೆ ಸುಪ್ರೀಂಕೋರ್ಟ್‌ನಲ್ಲಿ ಇದೆ. ಈ ಮಧ್ಯೆ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್ ಹಾಗೂ ಶಂಭುರಾಜೇ ದೇಸಾಯಿ ಅವರು ಬೆಳಗಾವಿಗೆ ಅಗಮಿಸಿ ಎಂಇಎಸ್ ಕಾರ್ಯಕರ್ತರ ಜೊತೆ ಚರ್ಚಿಸುವಂತೆ ಪತ್ರ ಬರೆಯಲಾಗಿತ್ತು. ಎಂಇಎಸ್ ಮನವಿಗೆ ಸ್ಪಂದಿಸಿದ ಚಂದ್ರಕಾಂತ ಪಾಟೀಲ್ ಡಿ. 3ರಂದು ಸಚಿವ ಶಂಭುರಾಜೇ ದೇಸಾಯಿ ಅವರೊಂದಿಗೆ ಬೆಳಗಾವಿಗೆ ಆಗಮಿಸುವುದಾಗಿ ಟ್ಚೀಟ್ ಮಾಡಿದ್ದಾರೆ. ಪುನಃ ಈ ನಿರ್ಧಾರವನ್ನು ಬದಲಿಸಿ ಡಿ.6ರಂದು ಕರ್ನಾಟಕಕ್ಕೆ ಬಂದು ಎಂಇಎಸ್‌ ಕಾರ್ಯಕರ್ತರೊಂದಿಗೆ ಚರ್ಚೆ ಮಾಡುವುದಾಗಿ ತಿಳಿಸಿದ್ದರು. ಇದಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಯಾವುದೇ ಕಾರಣಕ್ಕೂ ಬೆಳಗಾವಿಗೆ ಮಹಾರಾಷ್ಟ್ರದ ಸಚಿವರು ಆಗಮಿಸದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಜೊತೆಗೆ ಬೆಳಗಾವಿಗೆ ತೆರಳಿ ಹಲವು ಸಂಘಟನೆಗಳು ಮಹಾರಾಷ್ಟ್ರ ಸಚಿವರು ರಾಜ್ಯಕ್ಕೆ ಆಗಮಿಸದಂತೆ ತಡೆಯಬೇಕು ಎಂದು ಪ್ರತಿಭಟನೆ ಮಾಡಿದ್ದಾರೆ.

click me!