ರೋಹಿಣಿ ಸಿಂಧೂರಿ ವಿರುದ್ಧ ಬೆಳಗ್ಗೆ 19 ಆರೋಪಗಳ ಪಟ್ಟಿ ಪೋಸ್ಟ್ ಮಾಡಿದ್ದ ರೂಪ ಅವರು ಈಗ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ರೋಹಿಣಿ ಸಿಂಧೂರಿ ಅವರ ಕೆಲವು ಖಾಸಗಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು (ಫೆ.19): ರೋಹಿಣಿ ಸಿಂಧೂರಿ ವಿರುದ್ಧ ಬೆಳಗ್ಗೆ 19 ಆರೋಪಗಳ ಪಟ್ಟಿ ಪೋಸ್ಟ್ ಮಾಡಿದ್ದ ರೂಪ ಅವರು ಈಗ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ರೋಹಿಣಿ ಸಿಂಧೂರಿ ಅವರ ಕೆಲವು ಖಾಸಗಿ ಫೋಟೋಗಳನ್ನು ಹಂಚಿಕೊಂಡಿದ್ದು, ಇದರ ಅರ್ಥ ಏನಿರಬಹುದು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕರಿಗೆ ಪ್ರಶ್ನೆ ಕೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಮತ್ತು ಐಪಿಎಸ್ ಅಧಿಕಾರಿ ಡಿ.ರೂಪ (D Roopa) ಪೋಸ್ಟ್ ವಾರ್ ಮುಂದುವರೆದಿದೆ. ಇಂದು ಬೆಳಗ್ಗೆ ರಜೆ ಮೂಡ್‌ನಲ್ಲಿದ್ದ ಜನರಿಗೆ ಐಪಿಎಸ್ ಅಧಿಕಾರಿ ಡಿ. ರೂಪ ಅವರು, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ 19 ಆರೋಪಗಳ ಪಟ್ಟಿ ಪೋಸ್ಟ್ ಮಾಡುವ ಮೂಲಕ ಕಿಚ್ಚು ಹಚ್ಚಿದ್ದರು. ಈಗ ರೂಪ ಅವರು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ರೋಹಿಣಿ ಸಿಂಧೂರಿ ಅವರ ಕೆಲವು ಖಾಸಗಿ ಫೋಟೋಗಳನ್ನು ಹರಿಬಿಟ್ಟಿದ್ದಾರೆ. ಇನ್ನು ಮತ್ತೊಂದೆಡೆ ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಫೋಸ್ಟ್ ವಾರ್ ವಿಚಾರಕ್ಕೆ ಸಂಬಂಧಿಸಿ ಏಷ್ಯಾನೆಟ್ ಸುವರ್ಣ ಟಿವಿಗೆ ಐಪಿಎಸ್ ಅಧಿಕಾರಿ ಡಿ.ರೂಪಾ ಪ್ರತಿಕ್ರಿಯೆ ನೀಡಿದ್ದಾರೆ.
ಅಧಿಕಾರಿಯಾಗಿ ರಾಜಕಾರಣಿಗಳ ಜೊತೆಗೆ ಸಂಧಾನ ಯಾಕೆ: ರೋಹಿಣಿ ಸಿಂಧೂರಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ ಡಿ. ರೂಪಾ
ರೋಹಿಣಿ ಸಿಂಧೂರಿ ಖಾಸಗಿ ಚಿತ್ರಗಳ ಫೋಸ್ಟ್: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಡಿ. ರೂಪ ಅವರು ರೋಹಿಣಿ ಸಿಂಧೂರಿ ಅವರ ಕೆಲವು ಖಾಸಗಿ ಚಿತ್ರಗಳನ್ನು ಫೋಸ್ಟ್ ಮಾಡಿದ್ದು ಪ್ರಶ್ನೆಗಳನ್ನು ಮಾಡಿದ್ದಾರೆ. ಈ ರೀತಿಯ ಪಿಕ್ಚರ್ಸ್ normal ಅನ್ನಿಸಬಹುದು. ಆದರೆ, ಒಬ್ಬ ಮಹಿಳಾ ಐಎಎಸ್ ಅಧಿಕಾರಿ ಒಂದಲ್ಲ, ಎರಡಲ್ಲ ಮೂರು ಐಎಎಸ್ ಪುರುಷ ಅಧಿಕಾರಿಗಳಿಗೆ ಆಗಾಗ ಇವುಗಳನ್ನು ಹಾಗೂ ಈ ರೀತಿಯ ಅನೇಕ ಪಿಕ್ಸ್ ಗಳನ್ನು one to one ಕಳಿಸ್ತಾರೆ ಅಂದ್ರೆ ಅದಕ್ಕೆ ಏನರ್ಥ? ಇದು ಆಕೆಯ private matter ಆಗುವುದಿಲ್ಲ. ಐಎಎಸ್ SERVICE CONDUCT RULES ಪ್ರಕಾರ ಅಪರಾಧ. ಈ ಪಿಕ್ಸ್ ಗಳ ನೈಜತೆ ಬಗ್ಗೆ ಯಾವುದೇ ತನಿಖಾ ಸಂಸ್ಥೆ ಕೂಡಾ investigate ಮಾಡಬಹುದು. ಸಲೂನ್ haircut chitra, ತಲೆದಿಂಬು ಇತ್ತು ಮಲಗಿ ತೆಗೆದಿರುವ ಚಿತ್ರ. Normal ಅನ್ನಿಸಬಹುದು ಕೆಲವರಿಗೆ. ಕಳಿಸಿರುವ ಸನ್ನಿವೇಶ speaks otherwise. ಎಂದು ತಮ್ಮ ಫೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
undefined
ವಿವಿಧ ರೀತಿಯ ಕಮೆಂಟ್‌ಗಳ ಸುರಿಮಳೆ: ಇನ್ನು ಈ ಪೋಸ್ಟ್‌ಗೆ ರಿಪ್ಲೈ ಮಾಡಿರುವ ಕಾಮೆಂಟಿಗರಾದ Shekhar Chandra ಎನ್ನುವವರು, ರೂಪಾ ಮ್ಯಾಡಮ್, ನಾನು ಇಷ್ಟು ದಿನ ಅವರ (ರೋಹಿಣಿ ಸಿಂದೂರಿ) ಬಗ್ಗೆ ಹೆಮ್ಮೆ ಇತ್ತು.... ಆದರೆ ನೀವು ಮಾಡಿರೋ ಪ್ರಶ್ನೆ ಮತ್ತು ಈ ಚಿತ್ರಗಳನ್ನು ನೋಡಿದ ಮೇಲೆ ಅವರ ಬಗ್ಗೆ ಅನುಮಾನ ಬರ್ತಾ ಇದೆ.... ಏನೇ ಆಗ್ಲಿ ನೀವು ನಿಮ್ಮ ಹಿರಿಯ ಅಧಿಕಾರಿಗಳಿಗೆ ನಿಮ್ಮೆಲ್ಲ ಪ್ರಶ್ನೆ ಮತ್ತು ನಿಮ್ಮ ಬಳಿ ಇರುವ ದಾಖಲೆಯನ್ನು ಕೊಡಿ. ನೋಡೋಣ ಏನ್ ಮಾಡ್ತಾರೆ ಅಂತ.
ಸಾ.ರಾ. ಮಹೇಶ್ ಜೊತೆ ರಾಜಿಗೆ ರೋಹಿಣಿ ಸಿಂಧೂರಿ ಯತ್ನ
ಮತ್ತೊಮ್ಮೆ ವ್ಯಕ್ತಿ Ajith Gowda: ಯಾವುದೇ ಕಾರಣಕ್ಕೂ ಇವು Normal pics ಆಗಿರೋದಕ್ಕೆ ಸಾಧ್ಯವೇ ಇಲ್ಲ. ಇವೆಲ್ಲಾ ಯಾರನ್ನೋ ಮಂಕು ಮಾಡಲಿಕ್ಕಾಗಿಯೇ ತೆಗೆದ ಫೋಟೋಗಳು ಅನ್ನೋದು ಸುಲಭವಾಗಿಯೇ ಅರ್ಥವಾಗುತ್ತದೆ. Well done ಮೇಡಂ. ಇಂಥಾ ಗೋಮುಖ ನರಿಗಳನ್ನ ಹೊರಗೆ ಎಳೆತಂದಿದ್ದು ಬಹಳ ಒಳ್ಳೆಯದಾಯಿತು. ಅಗ್ರ ಪಂಕ್ತಿಯ ರಾಜಕೀಯ ನಾಯಕರುಗಳನ್ನ ತನ್ನ ಬುಟ್ಟಿಗೆ (ತೆಕ್ಕೆಗೆ) ಹಾಕಿಕೊಂಡು. ಅಮಾಯಕ ಜನರ ಮುಂದೆ ಮಹಾನ್ ಸಾಧ್ವಿಯಂತೆ ಪೋಸು ಕೊಡ್ತಿದ್ದ ಈ ಕಡುಭ್ರಷ್ಟ ಅಧಿಕಾರಿಯ ನಿಜ ರೂಪ ತೋರಿಸಿದ್ದಕ್ಕೆ ಅಭಿನಂದನೆಗಳು.