
ಬೆಂಗಳೂರು(ಮೇ. 03): ದೇಶದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಲು ಕಾರಣ ಎಂದು ಆಪಾದಿಸಲಾಗಿರುವ ತಬ್ಲೀಘಿ ಜಮಾತ್ ಸಂಘಟನೆಯನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್, ‘ನನಗೆ ಸರ್ಕಾರ ಈ ಕುರಿತು ನೀಡಿರುವ ಶೋಕಾಸ್ ನೋಟಿಸ್‌ಗೆ ನಿಯಮಾನುಸಾರ ಉತ್ತರಿಸುವೆ’ ಎಂದಿದ್ದಾರೆ. ಪಿಟಿಐ ಸುದ್ದಿಸಂಸ್ಥೆ ಜತೆ ಶನಿವಾರ ಮಾತನಾಡಿದ ಅವರು, ‘ಹೌದು. ನನಗೆ ನೋಟಿಸ್ ಬಂದಿದೆ. ನಿಯಮದ ಪ್ರಕಾರ ಉತ್ತರಿಸುವೆ’ ಎಂದರು.
‘ನಾನು ಖಾಸಗಿ ಸುದ್ದಿವಾಹಿನಿಯ ಸುದ್ದಿಯ ತುಣುಕೊಂದನ್ನು ಷೇರ್ ಮಾಡಿದ್ದೆ ಅಷ್ಟೆ. ಆದರೆ ಈ ಬಗ್ಗೆ ಅಷ್ಟೇಕೆ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ತಿಳಿಯುತ್ತಿಲ್ಲ’ ಎಂದರು. ‘ನಿಮ್ಮ ವಿರುದ್ಧ ಸಂಚು ನಡೆದಿದೆಯೇ’ ಎಂದು ಕೇಳಿದಾಗ, ‘ಎಲ್ಲರನ್ನೂ ನಾನು ತೃಪ್ತಿಪಡಿಸಲು ಆಗದು’ ಎಂದು ಉತ್ತರಿಸಿದ್ದಾರೆ.
ತಬ್ಲಿಘಿಗಳನ್ನು ಹೀರೋಗಳು ಎಂದ ಕರ್ನಾಟಕ ಕೇಡರ್ IAS ಅಧಿಕಾರಿ!
‘300ಕ್ಕೂ ತಬ್ಲೀಘಿ ಜಮಾತ್ ಹೀರೋಗಳು ದೇಶ ಸೇವೆಗಾಗಿ ಪ್ಲಾಸ್ಮಾ ದಾನ ಮಾಡುತ್ತಿದ್ದಾರೆ. ಆದರೆ ‘ಗೋದಿ ಮೀಡಿಯಾ’ ಏನು ಮಾಡುತ್ತಿದೆ? ಈ ಹೀರೋಗಳು ಮಾಡಿದ ಸಮಾಜ ಸೇವೆಯನ್ನು ಇವರು ತೋರಿಸಲ್ಲ’ ಎಂದು ಏ.27ರಂದು ಮೊಹ್ಸಿನ್ ಟ್ವೀಟ್ ಮಾಡಿದ್ದರು. ಕಳೆದ ವರ್ಷ ಏಪ್ರಿಲ್‌ನಲ್ಲಿ ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರನ್ನು ತಪಾಸಿಸಿ ವಿವಾದಕ್ಕೀಡಾಗಿದ್ದರು. ಆಗ ಅವರನ್ನು ಚುನಾವಣಾ ಆಯೋಗ ಅಮಾನತು ಮಾಡಿತ್ತು. ಮೊಹ್ಸಿನ್ ಅವರು ಬಿಹಾರ ಮೂಲದ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ