ನಾನಂತೂ 100 ವರ್ಷ ಬದುಕುತ್ತೇನೆ: ಸಿಎಂ ಸಿದ್ದರಾಮಯ್ಯ

Kannadaprabha News, Ravi Janekal |   | Kannada Prabha
Published : Nov 22, 2025, 10:49 AM IST
Siddaramaiah 100 years statement

ಸಾರಾಂಶ

Siddaramaiah 100 years statement:ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮಗೆ 79 ವರ್ಷ ನಡೆದಿದ್ದು, ನೂರು ವರ್ಷ ಬದುಕುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಮೂಢನಂಬಿಕೆಗಳನ್ನು ಬಿಡಬೇಕು. ತಮ್ಮ. ಅಧಿಕಾರಾವಧಿಯ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತ ಎಂದರು.

ಮೈಸೂರು (ನ.22): ನನಗೀಗ 78 ವರ್ಷ ತುಂಬಿ, 79ನೇ ವರ್ಷ ನಡೆದಿದೆ. ನಾನಂತೂ ಕನಿಷ್ಠ ನೂರು ವರ್ಷ ಬಾಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಾನಂತೂ ನೂರು ವರ್ಷ ಬದುಕುತ್ತೇನೆ:

ಮೈಸೂರಿನಲ್ಲಿ ಮಾತನಾಡಿದ ಅವರು, ನನಗೆ ಈಗ 79 ವರ್ಷ 4 ತಿಂಗಳು ಆಗಿದೆ. ನಾನಂತೂ 100 ವರ್ಷ ಬದುಕುತ್ತೇನೆ. ಗಾಂಧೀಜಿಗೆ ಒಬ್ರು ಪತ್ರ ಬರೆದು, 100 ವರ್ಷ ಬದುಕಿ ಅಂತ ಹೇಳಿದ್ದರು. ಆಗ ನಾನು 125 ವರ್ಷ ಬದುಕಬೇಕು ಅಂತಿದ್ದೇನೆ ಅಂತ ಗಾಂಧಿ ಉತ್ತರ ಕೊಟ್ಟಿದ್ದರು ಅಂತ ಸ್ಮರಿಸಿಕೊಂಡ್ರು. ನಾನೂ ಕೂಡ 100 ವರ್ಷ ಬದುಕುತ್ತೇನೆ ಎಂದು ನಗುತ್ತಾ ಸಿದ್ದರಾಮಯ್ಯ ಹೇಳಿದ್ರು.

16 ಚುನಾವಣೆಯಲ್ಲಿ ನಾಲ್ಕು ಬಾರಿ ಸೋತಿದ್ದೇನೆ:

ಜನರ ಆಶೀರ್ವಾದ ಇದ್ದಾಗಲಷ್ಟೇ ನಾವು ಅಧಿಕಾರದಲ್ಲಿರಲು ಸಾಧ್ಯ. ಒಟ್ಟು 16 ಚುನಾವಣೆ ಎದುರಿಸಿದ್ದು, ನಾಲ್ಕು ಬಾರಿ ಸೋತಿದ್ದೇನೆ’ ಎಂದರು. ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಶುಕ್ರವಾರ ವಕೀಲ ರವಿವರ್ಮಕುಮಾರ್ ಅವರಿಗೆ, ‘ಡಿ.ದೇವರಾಜ ಅರಸು–ಎಲ್‌.ಜಿ. ಹಾವನೂರು’ ಪ್ರಶಸ್ತಿ ಪ್ರದಾನ ಮಾಡಿದರು.

ಮೂಢನಂಬಿಕೆ ಬಿಡಬೇಕು:

ಹಿಂದೆ ನನ್ನ ಕಾರಿನ ಮೇಲೆ ಕಾಗೆ ಕುಳಿತಿದ್ದಕ್ಕೆ, ಕೆಲ ಜ್ಯೋತಿಷಿಗಳು ಸಿ.ಎಂ ಸ್ಥಾನವೇ ಹೋಗುತ್ತದೆ ಎಂದಿದ್ದರು. ಆಗ ಐದು ವರ್ಷ ಅಧಿಕಾರ ಪೂರೈಸಿದೆ. ಈಗ ಎರಡನೇ ಅವಧಿಯಲ್ಲಿ ಎರಡೂವರೆ ವರ್ಷ ಕಳೆದಿದೆ. ರವಿವರ್ಮಕುಮಾರ್–ಶಾರದಾ ಅಮಾವಾಸ್ಯೆ ದಿನವೇ ಮದುವೆ ಆದವರು. ನಮ್ಮಲ್ಲಿನ ಮೂಢನಂಬಿಕೆಗಳನ್ನು ಬಿಡಬೇಕು ಎಂದರು. ನೀವೇ ಐದು ವರ್ಷ ಸಿ.ಎಂ ಆಗಿರಬೇಕು ಎಂದು ಅಭಿಮಾನಿಗಳು ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿ, ‘ಅದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ’ ಎಂದು ಸಿದ್ದರಾಮಯ್ಯ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!
ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ