
ಬೆಂಗಳೂರು(ಮಾ.23): ‘1966ರಲ್ಲಿ ಭೀಕರ ಬರಗಾಲವಿದ್ದಾಗ ನನ್ನ ತಂದೆ ತೀರಿಕೊಂಡರು. ಹಿರಿಯ ಮಗನಾದ ನನ್ನ ಮೇಲೆ ಮನೆಯ ಜವಾಬ್ದಾರಿ ಬಿದ್ದಿದ್ದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗೂ ಹೋಗದೆ ಕೃಷಿಯಲ್ಲಿ(Agriculture)ತೊಡಗಿದೆ. ಆಗ ಬಿಡುಗಡೆಯಾಗಿದ್ದ ಬಂಗಾರದ ಮನುಷ್ಯ(Bangarada Manushya) ಚಿತ್ರದಲ್ಲಿ ಡಾ.ರಾಜ್‌ಕುಮಾರ್(Dr Rajkumar) ಅವರು ಕೃಷಿಯಲ್ಲಿ ಪರಿಶ್ರಮ ಪಡುವುದನ್ನು ಪ್ರೇರಣೆಯಾಗಿ ಪಡೆದು ನಾನೂ ಕೃಷಿಯಲ್ಲಿ ಯಶಸ್ವಿಯಾದೆ.’
ಸದನದಲ್ಲಿ ಮಂಗಳವಾರ ಇಲಾಖೆಗಳ ಮೇಲಿನ ಬೇಡಿಕೆಗಳ ಕುರಿತ ಚರ್ಚೆ ವೇಳೆ ಮಾಜಿ ಸಚಿವ, ಜೆಡಿಎಸ್(JDS) ಸದಸ್ಯ ಜಿ.ಟಿ.ದೇವೇಗೌಡ(GT Devegowda) ಅವರು ತಾವು ಸಂಕಷ್ಟದ ದಿನಗಳಲ್ಲಿ ಕೃಷಿ ಚಟುವಟಿಕೆ ಆರಂಭಿಸಿದ ದಿನಗಳನ್ನು ಮೆಲುಕು ಹಾಕಿದ್ದು ಹೀಗೆ.
ನಾನು ಸಹ ಕೃಷಿಕ ಸಮುದಾಯದಿಂದ ಬಂದವನು. ಆದರೆ, ನನ್ನ ತಾತ, ತಂದೆ ಎಲ್ಲರೂ ಪಟೇಲರು. ಹೊಲ ಉತ್ತವರಲ್ಲ. 1966ರಲ್ಲಿ ಭೀಕರ ಬರಗಾಲ(Drought). ನನ್ನ ತಂದೆ ತೀರಿ ಹೋಗುತ್ತಾರೆ. ನಾನೇ ಮನೆಯಲ್ಲಿ ದೊಡ್ಡ ಮಗನಾಗಿದ್ದರಿಂದ ಎಲ್ಲ ಭಾರ ನನ್ನ ಮೇಲೆ ಬೀಳುತ್ತದೆ. ಮೊದಲ ಬಾರಿಗೆ 1500 ರು. ಸಾಲ ಕೂಡ ಮಾಡಿದೆ. ಇದನ್ನು ತೀರಿಸಲು ಎಸ್ಸೆಸ್ಸೆಲ್ಸಿ ಪರೀಕ್ಷೆಗೂ ಹೋಗದೆ ಕೃಷಿಯಲ್ಲಿ ತೊಡಗುತ್ತೇನೆ. ಈ ಸಂದರ್ಭದಲ್ಲಿ ಡಾ.ರಾಜ್‌ಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ಏಕೆಂದರೆ ಆಗ ತಾನೆ ಅವರ ನಟನೆಯ ಬಂಗಾರದ ಮನುಷ್ಯ ಚಿತ್ರ ಬಿಡುಗಡೆಯಾಗಿತ್ತು. 9 ಬಾರಿ ಆ ಸಿನೆಮಾ ನೋಡಿದ್ದೇನೆ. ಅವರು ಕಷ್ಟಪಟ್ಟು ಮೇಲೆ ಬರುವುದಕ್ಕೇ ಪ್ರೇರಣೆಯಾಗಿ ನಾನೂ ಕೆಲ ಕೃಷಿ ಅಧಿಕಾರಿಗಳು, ಬ್ಯಾಂಕ್ನವರ ಸಾಲ ಸಹಕಾರದಿಂದ ಕೃಷಿಯಲ್ಲಿ ಯಶಸ್ಸು ಸಾಧಿಸಿದೆ ಎಂದು ಹೇಳಿದರು.
HD Kumaraswamy: ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮುಂದೆ ನಾನೇ ಬರ್ತೇನೆ
ಸಿದ್ದರಾಮಯ್ಯ ಹುಣಸೂರಿನಲ್ಲಿ ಸ್ಪರ್ಧೆ ಮಾಡ್ಲಿ, ಗೆಲ್ಲಿಸ್ಕೊಂಡು ಬರುವ ಜವಾಬ್ದಾರಿ ನನ್ನದು ಎಂದ ಜೆಡಿಎಸ್ ಶಾಸಕ
ಮೈಸೂರು: 2023ರ ವಿಧಾನಸಭೆ ಚುನಾವಣೆ ಇನ್ನೂ ಒಂದೂವರೆ ವರ್ಷ ಬಾಕಿ ಉಳಿದಿರುವಾಗಲೇ ದೊಡ್ಡ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಹೌದು...ಸಿದ್ದರಾಮಯ್ಯ(Siddaramaiah) ಅವರು ಮುಂದಿನ ಚುನಾವಣೆಯಲ್ಲಿ ಹುಣಸೂರಿನಲ್ಲಿ ಸ್ಪರ್ಧಿಸಬೇಕು. ಅವರನ್ನು ಹುಣಸೂರಿನಿಂದ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹೇಳಿದ್ದರು.
ಸಿದ್ದು ಸಿಎಂ ಆಗಲೆಂದು ಪೂಜೆ, ಜಿಟಿ ದೇವೇಗೌಡ್ರ ಬಾಗಿಲು ಬಂದ್ ಮಾಡಿದ ಎಚ್ಡಿಕೆ
ಕೋಲಾರದಲ್ಲಿ(Kolar) ಸುದ್ದಿಗಾರರೊಂದಿಗೆ ಮಾತನಾಡಿದ್ದ ಜಿಟಿಡಿ, ಸಿದ್ದರಾಮಯ್ಯ ಎಲ್ಲಿ ಸ್ಪರ್ದಿಸಬೇಕು ಅನ್ನೋ ವಿಚಾರ ಚರ್ಚೆ ಆಗಿಲ್ಲ. ಹುಣಸೂರಿನಲ್ಲಿ ನಿಲ್ಲಿ ಎಂದು ಅವರಿಗೆ ಆಫರ್ ಇದೆ. ಮಂಜುನಾಥ್ ಗೆ MLC ಮಾಡಿ ಸಿದ್ದರಾಮಯ್ಯ ಚುನಾವಣೆಗೆ ನಿಲ್ಲಲಿ. ಅವರನ್ನು ಹುಣಸೂರಿನಿಂದ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು. ನಾನು ಮಾತ್ರ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸ್ಪರ್ದಿಸೋದು ಎಂದು ಸ್ಪಷ್ಟಪಡಿಸಿದ್ದರು.ನಾನಿನ್ನು ಕಾಂಗ್ರೆಸ್ ಪಕ್ಷಕ್ಕೆ ಹೋಗಿಲ್ಲ,ಇದರ ಬಗ್ಗೆ ಏನೂ ಮಾತಾಡೋಕ್ಕೆ ಆಗುತ್ತೆ ? ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ಪಂಚರಾಜ್ಯ ಚುನಾವಣೆಯ ಫಲಿತಾಂಶ ನೋಡಿ ತೀರ್ಮಾನ ಮಾಡ್ತೇನೆ ಎಂದು ಅಚ್ಚರಿ ಹೇಳಿಕೆ ನೀಡಿದ್ದರು.
ಗೆದ್ದ ಮೇಲೆ ಪಕ್ಷ ಸೇರುವ ವ್ಯಕ್ತಿ ನಾನಲ್ಲ. ನಾನು ಯಾವುದೇ ಪಕ್ಷಕ್ಕೆ ಹೋದ್ರು ಗೆಲ್ಲಿಸಿಕೊಂಡು ಬರುವ ವ್ಯಕ್ತಿ. ನಾನು ಜೆಡಿಎಸ್ ನಲ್ಲೇ ಇರ್ತೀನೋ, ಬಿಜೆಪಿ ಅಥವಾ ಕಾಂಗ್ರೆಸ್ ಸೇರುತ್ತಿನೊ ಗೊತ್ತಿಲ್ಲ ಎಂದರು. ಚುನಾವಣೆಯಲ್ಲಿ ಸ್ಪರ್ದಿಸಲೇಬೇಕು ಅಂತ ನನಗೆ ಮತ್ತೆ ನನ್ನ ಮಗನಿಗೆ ಕಾರ್ಯಕರ್ತರ ಒತ್ತಡ ಇದೆ. ಇಬ್ಬರಿಗೂ ಟಿಕೇಟ್ ನೀಡಿದ್ರೆ ಕಾಂಗ್ರೆಸ್ ಸೇರುತ್ತೇವೆ ಅಂತ ಸಿದ್ದರಾಮಯ್ಯ ನವರಿಗೆ ತಿಳಿಸಿರೋದು ನಿಜ. ಇದುವರೆಗೂ ಜೆಡಿಎಸ್ ಪಕ್ಷದಲ್ಲಿ ಯಾರು ನನ್ನನು ಕರೆದು ಮಾತನಾಡಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ