Chaitra Kundapur Case: ನನಗೂ ಗಗನ್‌ ಕಡೂರಿಗೂ ಸಂಬಂಧ ಇಲ್ಲ: ಸಾಲುಮರದ ತಿಮ್ಮಕ್ಕ

By Kannadaprabha News  |  First Published Sep 21, 2023, 1:34 PM IST

ಗೋವಿಂದ ಬಾಬು ಪೂಜಾರಿ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಗಗನ್ ಕಡೂರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ತಮ್ಮ ವಿರುದ್ಧ ಊಹಾಪೋಹ ಸುದ್ದಿಗಳನ್ನು ಬಿತ್ತರ ಮಾಡಲಾಗುತ್ತಿದೆ ಎಂದು ಸಾಲುಮರದ ತಿಮ್ಮಕ್ಕ ಹೇಳಿದರು. 


ಬೇಲೂರು (ಸೆ.21): ಗೋವಿಂದ ಬಾಬು ಪೂಜಾರಿ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಗಗನ್ ಕಡೂರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ತಮ್ಮ ವಿರುದ್ಧ ಊಹಾಪೋಹ ಸುದ್ದಿಗಳನ್ನು ಬಿತ್ತರ ಮಾಡಲಾಗುತ್ತಿದೆ ಎಂದು ಸಾಲುಮರದ ತಿಮ್ಮಕ್ಕ ಹೇಳಿದರು. ಪಟ್ಟಣ ಸಮೀಪದ ಬಳ್ಳೂರು ಗ್ರಾಮದಲ್ಲಿರುವ ಸಾಲುಮರದ ತಿಮ್ಮಕ್ಕನವರ ದತ್ತುಪುತ್ರ ಉಮೇಶ್‌ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು, ಟಿವಿಯಲ್ಲಿ ನಮ್ಮ ಬಗ್ಗೆ ಏನೇನೋ ಬರ್ತಿದೆ, ನಾವು ಗಿಡ ನೆಡ್ತಾ, ಹೇಗೋ ಜೀವನ ಮಾಡ್ತಿದ್ದೇವೆ. ನಾವು ಸರ್ಕಾರಕ್ಕೆ ಹೆದರಿ ಬದುಕುವ ಜನ, ನಾವು ಅಂತಹ ವಿಚಾರಕ್ಕೆ, ಗಲಾಟೆಗೆ ಹೋಗುವವರಲ್ಲ, ಇದೆಲ್ಲಾ ನಂಗೆ ಏನು ಗೊತ್ತಾಗಲ್ಲ ಎಂದು ಹೇಳಿದರು.

ಸಾಲುಮರದ ತಿಮ್ಮಕ್ಕ ದತ್ತು ಪುತ್ರ ಬಳ್ಳೂರು ಉಮೇಶ್ ಮಾತನಾಡಿ, ನಾವು ಗಗನ್‌ ಕಡೂರು ಅವರ ಮದುವೆಗೆ ಹೋಗಿದ್ದು ನಿಜ, ಅವರು ಭಾರತೀಯ ಅಯ್ಯಪ್ಪ ಸೇವಾ ಸಮಿತಿಯ ಸದಸ್ಯರು, ನಾನು ಅದರ ಅಧ್ಯಕ್ಷನಾಗಿದ್ದೇನೆ, ಪ್ರತಿಷ್ಠಿತ ಸುದ್ದಿವಾಹಿನಿಯೊಂದು ಗಗನ್‌ ಅವರು ತಿಮ್ಮಕ್ಕ ಅವರ ಕಾರು ದುರ್ಬಳಕೆ ಮಾಡಿಕೊಂಡಿರುವ, ವಿಧಾನಸೌಧದ ಕೊಠಡಿಯನ್ನು ನವೀಕರಣ ಮಾಡಿಕೊಟ್ಟಿರುವ ಸಾಧ್ಯತೆ ಇದೆ ಎಂದು ಸುದ್ದಿ ಮಾಡುವಾಗ ಗಮನಿಸಿ ಸುದ್ದಿ ಮಾಡಬೇಕು.

Tap to resize

Latest Videos

undefined

ಬಿಜೆಪಿ- ಜೆಡಿಎಸ್ ಮೈತ್ರಿಗೆ ಠಕ್ಕರ್‌ ನೀಡಲು ಸಂಸದ ಡಿಕೆಸು ಮನೆಯಲ್ಲಿ ಸಭೆ

ದೇಶದಲ್ಲಿ ತಿಮ್ಮಕ್ಕ ಅವರ ಅಭಿಮಾನಿಗಳು ಕೊಟ್ಯಂತರ ಜನರಿದ್ದಾರೆ, ಅವರು ಬಂದು ಫೋಟೋ ತೆಗೆಸಿಕೊಳ್ಳುತ್ತಾರೆ, ಮದುವೆಗೆ ಕರೆಯುತ್ತಾರೆ, ಪ್ರೀತಿಯಿಂದ ಕರೆದಾಗ ಹೋಗಬೇಕಾಗುತ್ತದೆ. ನಾವು ಅಭಿಮಾನಿಗಳಿಗೆ ಗಿಡ ನೆಡಿ ಪರಿಸರ ಉಳಿಸಿ ಎಂದು ಹೇಳುತ್ತೇವೆ, ಅದೇ ರೀತಿ ಗಗನ್ ಅವರ ಮದುವೆಗೂ ಹೋಗಿದ್ದೇವೆ ಅಷ್ಟೆ, ಅವರು ತಪ್ಪು ಮಾಡಿದ್ದರೆ ಅದು ಅಕ್ಷಮ್ಯ ಅಪರಾಧ, ಅವರಿಗೆ ತಕ್ಕ ಶಿಕ್ಷೆಯಾಗಲಿ ಆದರೆ ಇದರಲ್ಲಿ ನಮ್ಮ ಹೆಸರು ಪ್ರಸ್ತಾಪ ಮಾಡಿರುವುದು ಬಹಳ ತಪ್ಪು.

ತಿಮ್ಮಕ್ಕ ಅವರ ಕೊಠಡಿಯನ್ನು ನವೀಕರಣ ಮಾಡಲು ಗಗನ್ ಯಾರು? ಅವರು ಸರ್ಕಾರನಾ? ನವೀಕರಣವನ್ನು ಸರ್ಕಾರ ಮಾಡಿಕೊಡುತ್ತದೆ. ಗಗನ್‌ ತಿಮ್ಮಕ್ಕ ಅವರ ಕಾರು ಬಳಸಿದರೆ ಅದಕ್ಕೆ ದಾಖಲೆ ಕೊಡಿ.‌ ನಾವು ಸಮಾಜಕ್ಕಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ ಹೊರತು ಸಮಾಜಕ್ಕೆ ದ್ರೋಹ, ಅಘಾತವಾಗುವಂತಹ ಕೆಲಸ ಮಾಡುವುದಿಲ್ಲ. ಸಂಕಷ್ಟದ ದಿನಗಳಲ್ಲೇ ನಾವು ತಪ್ಪು ಮಾಡಿಲ್ಲ, ಈಗ ಸರ್ಕಾರ ನಮಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನ ನೀಡಿ ಗೌರವಿಸಿದೆ. ಇಡೀ ಸಮಾಜ ಗೌರವಿಸುತ್ತಿದೆ ಈಗ ತಪ್ಪು ಮಾಡುತ್ತೀವಾ ಎಂದು ಪ್ರಶ್ನಿಸಿದರು.

ನನ್ನ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕೊಟ್ಟಿದ್ದೆ: ಎಚ್‌.ಡಿ.ಕುಮಾರಸ್ವಾಮಿ

ಗಗನ್ ಜೊತೆ ಸಂಬಂಧ ಬೆಸೆದು ಸುದ್ದಿ ಮಾಡಿರುವ ಸುದ್ದಿ ವಾಹಿನಿಯ ವರದಿಗಾರನ ವಿರುದ್ಧ ಮಾನನಷ್ಟ ಮೂಕದ್ದಮೆ ಹೂಡಲಾಗುವುದು ಎಂದು ತಿಳಿಸಿದರು. ತಿಮ್ಮಕ್ಕನವರಿಗೆ ಸಚಿವ ಸಂಪುಟ ಸ್ಥಾನಮಾನ ಸಿಕ್ಕಿರುವುದು ಕೆಲವರಿಗೆ ಅಸೂಯೆ ತಂದಿದ್ದು, ಅವರು ನಮಗೆ ಕಳಂಕ ತರುವ ಉದ್ದೇಶದಿಂದ ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಶೀಘ್ರದಲ್ಲೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಗೃಹಸಚಿವ ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಈ ವಿಷಯದ ಬಗ್ಗೆ ಮಾತನಾಡಲಾಗುವುದು ಎಂದು ತಿಳಿಸಿದರು.

click me!