ಹೆಬ್ಬೆ ಫಾಲ್ಸ್‌ನಲ್ಲಿ ಕಾಲುಜಾರಿ ಬಿದ್ದು ಯುವಕ ಸಾವು; ಸೆಲ್ಫಿ ವೇಳೆ ನಡೆದೋಯ್ತು ದುರಂತ

By Sathish Kumar KH  |  First Published Jun 10, 2024, 6:04 PM IST

ಹೈದರಾಬಾದ್‌ನಿಂದ ಚಿಕ್ಕಮಗಳೂರಿಗೆ ಬೈಕ್‌ನಲ್ಲಿ ಸೋಲೋ ರೈಡ್ ಬಂದಿದ್ದ ಯುವಕ, ಹೆಬ್ಬೆ ಫಾಲ್ಸ್ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಬಿದ್ದು ದಾರುಣ ಸಾವಿಗೀಡಾಗಿದ್ದಾನೆ.


ಚಿಕ್ಕಮಗಳೂರು (ಜೂ.10): ಮಳೆಗಾಲ ಆರಂಭವಾಗುತ್ತಿದ್ದಂತೆ ಜಲಪಾತ ವೀಕ್ಷಣೆಗೆಂದು ಹೈದರಾಬಾದ್ (Hyderabad) ಚಿಕ್ಕಮಗಳೂರಿಗೆ ಬಂದಿದ್ದ ಯುವಕ ಹೆಬ್ಬೆ ಫಾಲ್ಸ್‌ನಲ್ಲಿ (Chikkamagaluru hebbe Falls) ಸೆಲ್ಫಿ ತೆಗೆದುಕೊಳ್ಳವ ವೇಳೆ ಕಾಲು ಜಾರಿ ಬಿದ್ದು, ದುರಂತ ಸಾವಿಗೀಡಾದ ಘಟನೆ ನಡೆದಿದೆ.

ರಾಜ್ಯದಲ್ಲಿ ಪ್ರಸಕ್ತ ಸಾಲಿನ ಮಳೆಗಾಲ ಆರಂಭವಾಗುತ್ತಿದ್ದಂತೆ ರಾಜ್ಯದಲ್ಲಿರುವ ವಿವಿಧ ಜಲಪಾತಗಳು (Water Falls) ಮತ್ತೆ ತಮ್ಮ ನೈಸರ್ಗಿಕ ಸೌಂದರ್ಯವನ್ನು (Nature Beauty)  ಮರು ಸೃಷ್ಟಿಸಿವೆ. ಜಲಪಾತಗಳ ರಮಣೀಯ ಸೌಂದರ್ಯವನ್ನು ನೋಡಲು ಪ್ರವಾಸಿಗರ ದಂಡು ಕೂಡ ಹೆಚ್ಚಾಗುತ್ತಿದೆ. ಅದರಲ್ಲಿಯೂ ಹತ್ತಾರು ಜಲಪಾತಗಳನ್ನು ಒಳಗೊಂಡಿರುವ ಹಾಗೂ ಪ್ರವಾಸಿಗರ ಸ್ವರ್ಗವೆಂದೇ (Tourist Heaven) ಖ್ಯಾತವಾಗಿರುವ ಚಿಕ್ಕಮಗಳೂರು ಜಿಲ್ಲೆಗೆ ಮಳೆಗಾಲದಲ್ಲಿ ಹೋಗುವ ಪ್ರವಾಸಿಗರ ಸಂಖ್ಯೆಗೆ ಕಡಿಮೆಯಿಲ್ಲ. ನಮ್ಮ ರಾಜ್ಯ ಮಾತ್ರವಲ್ಲದೇ ನೆರೆ ಹೊರೆ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಹಾಗೂ ಕೇರಳ ಸೇರಿದಂತೆ ಹಲವು ರಾಜ್ಯಗಳ ಜನರು ಕರ್ನಾಟಕದ ಜಲಪಾತಗಳ ವೀಕ್ಷಣೆಗೆ ಆಗಮಿಸುತ್ತಾರೆ.

Tap to resize

Latest Videos

undefined

ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ: ಎಸ್‌ಐಟಿಯಿಂದ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್

ಅದೇ ರೀತಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ಫಾಲ್ಸ್  (Hebbe Falls) ವೀಕ್ಷಣೆಗೆ ಬಂದ ಹೈದರಾಬಾದ್ ಮೂಲದ ಯುವಕ ಶ್ರವಣ್ (25) ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ. ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಲಿಂಗದಹಳ್ಳಿ ಪೊಲೀಸರು ಭೇಟಿ ಪರಿಶೀಲನೆ  ಮಾಡಿದ್ದು, ಮೃತನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ರಾಯಚೂರು: ಖಿನ್ನತೆಯಿಂದ ತಾಯಿ ಮಗಳು ಆತ್ಮಹತ್ಯೆ 

ಬೆಂಗಳೂರು, ಹೈದರಾಬಾದ್, ಚೆನ್ನೈ, ಮುಂಬೈ, ಮಂಗಳೂರು ಸೇರಿದಂತೆ ವಿವಿಧ ಮೆಟ್ರೋಪಾಲಿಟಿನ್ ಸಿಟಿಗಳಲ್ಲಿ ಕೆಲಸ ಮಾಡುವ ಯುವಜನರು ಆಗಿಂದಾಗ್ಗೆ ಮಳೆಗಾಲದಲ್ಲಿ ಬಿಡುವು ಪಡೆದು ಸೋಲೋ ರೈಡ್ (Solo Bike Ride) ಎಂದು ಬೈಕ್‌ನಲ್ಲಿ ಅಥವಾ ಸ್ನೇಹಿತರ ಜೊತೆಗೆ ಜಾಲಿರೈಡ್ (Jolly Bike Ride) ಎಂದು ವಿವಿಧ ದೂರದ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಅದೇ ರೀತಿ ಹೈದರಾಬಾದ್‌ನಿಂದ ಬೈಕ್‌ನಲ್ಲಿ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬಂದಿದ್ದ ಶ್ರವಣ್ ಮತ್ತು ಆತನ ಸ್ನೇಹಿತ ಇಂದು ಬೆಳಗ್ಗೆ ಅದೇ ಬೈಕ್‌ನಲ್ಲಿ ಹೆಬ್ಬೆ ಫಾಲ್ಸ್‌ಗೆ ತೆರಳಿದ್ದಾರೆ. ಈ ವೇಳೆ ಹೆಬ್ಬೆ ಫಾಲ್ಸ್ ಮೇಲ್ಭಾಗದಲ್ಲಿ ನಿಂತು ಸೆಲ್ಫಿ (Selfie) ತೆಗೆದುಕೊಳ್ಳುವಾಗ ಕಾಲು ಜಾರಿದ್ದು, ಎಲ್ಲಿಯೂ ಹಿಡಿದುಕೊಂಡು ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗದೇ ಪ್ರಪಾತಕ್ಕೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

click me!