
ಬೆಂಗಳೂರು (ಸೆ.5) ಇತ್ತೀಚೆಗೆ ತಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿ ಉಪಾಧ್ಯಕ್ಷೆ ಗಿರಿಜಾ ಅವರ ಮನೆಯಲ್ಲಿ ಚಿನ್ನಾಭರಣ ಕಳವು ಆರೋಪ ಹೊತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಕಾರು ಚಾಲಕನ ಪತ್ನಿ, ಈಗ ಸ್ವಯಂ ಪೊಲೀಸ್ ಠಾಣೆಗೆ ತೆರಳಿ ತಮ್ಮ ಮನೆಯಲ್ಲಿ ಮೃತ ಪತಿ ಬಚ್ಚಿಟ್ಟಿದ್ದ .1.5 ಕೋಟಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರಿಗೊಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಕೆಲ ದಿನಗಳ ಹಿಂದೆ ಖಾಸಗಿ ಕಂಪನಿ ಉದ್ಯೋಗಿ ಗಿರಿಜಾ ಅವರ ಕಾರು ಚಾಲಕ ಜಿಮೋನ್ ವರ್ಗೀಸ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಮೃತನ ಕಳ್ಳತನ ಕೃತ್ಯವು ಬೆಳಕಿಗೆ ಬಂದಿತು. ಅಷ್ಟರಲ್ಲಿ ಪುಲಕೇಶಿನಗರ ಠಾಣೆ ತೆರಳಿ ಬಳೆ, ಸರಗಳು ಹಾಗೂ ಉಂಗುರ ಸೇರಿದಂತೆ .1.5 ಕೋಟಿ ಮೌಲ್ಯದ 38 ವಿವಿಧ ಬಗೆಯ ಆಭರಣಗಳನ್ನು ಪೊಲೀಸರಿಗೆ ಮೃತನ ಪತ್ನಿ ಜುಬೀನಾ ವರ್ಗೀಸಿ ಒಪ್ಪಿಸಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ವಿಜಯಪುರದಲ್ಲಿ ಹೊಟೇಲ್ ಉದ್ಯಮಿಯನ್ನ ಯಾಮಾರಿಸಿದ ಸೈಬರ್ ಕಳ್ಳರು: 8 ಅಕೌಂಟ್‌ಗೆ ಕನ್ನ!
₹2 ಕೋಟಿ ಮೌಲ್ಯದ ಆಭರಣ ಕದ್ದಿದ್ದ:
ಕೇರಳ ಮೂಲದ ವರ್ಗೀಸ್, ತನ್ನ ಪತ್ನಿ ಜುಬೀನಾ ಹಾಗೂ ಇಬ್ಬರು ಮಕ್ಕಳ ಜತೆ ನೆಲೆಸಿದ್ದ. ನಾಲ್ಕು ವರ್ಷಗಳಿಂದ ಗಿರಿಜಾ ಅವರ ಮನೆಯಲ್ಲಿ ವರ್ಗೀಸ್ ಸೇರಿದಂತೆ ನಾಲ್ವರು ಮನೆ ಕೆಲಸ ಮಾಡುತ್ತಿದ್ದರು. ಕಾರು ಚಾಲಕನಾಗಿದ್ದ ಆತ, ತನ್ನ ಮಾಲಿಕರಿಗೆ ಗೊತ್ತಾಗದಂತೆ ಅವರ ಮನೆಯಲ್ಲಿ ಒಂದೊಂದೇ ಆಭರಣವನ್ನು ಕಳವು ಮಾಡಿದ್ದ. ತಮ್ಮ ಕೆಲಸಗಾರರ ಮೇಲೆ ವಿಶ್ವಾಸ ಹೊಂದಿದ್ದ ಗಿರಿಜಾ ಅವರು, ಮನೆಯಲ್ಲಿ ಕೆಲಸಗಾರರು ಓಡಾಡಲು ಮುಕ್ತ ಅವಕಾಶ ನೀಡಿದ್ದರು. ಆದರೆ ಈ ನಂಬಿಕೆಗೆ ವರ್ಗೀಸ್ ದ್ರೋಹ ಬಗೆದಿದ್ದ.
ಇತ್ತೀಚೆಗೆ ಮನೆಯಲ್ಲಿ ಆಭರಣ ಕಾಣದೆ ಹೋದಾಗ ಅವರು, ಕೊನೆಗೆ ಅ.21ರಂದು ಪುಲಕೇಶಿ ನಗರ ಠಾಣೆಗೆ ಕಳ್ಳತನ ಬಗ್ಗೆ ದೂರು ನೀಡಿದ್ದರು. ಅಲ್ಲದೆ ತಮ್ಮ ಮನೆಯಲ್ಲಿ .2 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಗಿರಿಜಾ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ದೂರಿನ ಮೇರೆಗೆ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ದೂರು ದಾಖಲಾದ ಬಳಿಕ ಹೆದರಿದ ವರ್ಗೀಸ್, ತನ್ನ ಒಡತಿಯ ಅಪಾರ್ಚ್‌ಮೆಂಟ್‌ನ ಫ್ಲ್ಯಾಟ್‌ನಲ್ಲೇ 7 ಪುಟಗಳ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮಂಗಳಮುಖಿಯರಿಂದ 30ರ ಯುವಕನ ಕಿಡ್ನಾಪ್, ಮರ್ಮಾಂಗ ಕತ್ತರಿಸಿ ರಸ್ತೆಗೆ ಎಸೆದು ವಿಕೃತಿ!
ಆಭರಣದ ಬಾಕ್ಸ್‌ನಲ್ಲಿ ಇತ್ತು ಕಳ್ಳನ ಬೆರಳಚ್ಚು
ತನ್ನ ಮೇಲೆ ಸುಳ್ಳು ಕಳ್ಳತನ ಆರೋಪ ಮಾಡಿದ್ದಾರೆ ಎಂದು ಮೃತ ವರ್ಗೀಸ್ ಅಪಾದಿಸಿದ್ದ. ಆದರೆ ಪೊಲೀಸರ ತನಿಖೆಯಲ್ಲಿ ಮನೆಗಳ್ಳತನದಲ್ಲಿ ವರ್ಗೀಸ್ ಪಾತ್ರ ಪತ್ತೆಯಾಗಿತ್ತು. ಕಳ್ಳತನವಾಗಿದ್ದ ಆಭರಣದ ಬಾಕ್ಸ್‌ನಲ್ಲಿ ಮೃತನ ಬೆರಳುಚ್ಚು ಸಿಕ್ಕಿತು. ಅಷ್ಟರಲ್ಲಿ ಅ.30ರಂದು ಮೃತನ ಪತ್ನಿ ಜುಬೀನಾ, ತಾವಾಗಿಯೇ ಠಾಣೆಗೆ ತೆರಳಿ ಆಭರಣ ಒಪ್ಪಿಸಿದ್ದಾರೆ. ಕೆಲವು ಆಭರಣಗಳನ್ನು ಕೇರಳದಲ್ಲಿ ವರ್ಗೀಸ್ ಅಡಮಾನವಿಟ್ಟಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ